ನವದೆಹಲಿ: ದಶಕದ ಹಿಂದೆ ತಮಿಳುನಾಡಿನಿಂದ ಕದ್ದು ವಿದೇಶಕ್ಕೆ ಸಾಗಿಸಲಾಗಿದ್ದ ಹನುಮಂತನ ವಿಗ್ರಹವನ್ನು ಶೀಘ್ರದಲ್ಲೇ ಭಾರತಕ್ಕೆ ತರಲಾಗುವುದು ಎಂದು ಕೇಂದ್ರ ಸಂಸ್ಕೃತಿ ಸಚಿವ ಜಿ ಕಿಶನ್ ರೆಡ್ಡಿ ಬುಧವಾರ ಹೇಳಿದ್ದಾರೆ.
ವಿಜಯನಗರ ಕಾಲಕ್ಕೆ ಸೇರಿದ 14-15 ನೇ ಶತಮಾನದ ಪ್ರತಿಮೆಯನ್ನು ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ಖಾಸಗಿ ಖರೀದಿದಾರ ಬಳಿ ಇರುವುದು ಗೊತ್ತಾಗಿದೆ.
advertisement
9535127775 / 9901837775 / 6364528715 / 08362775155 / https://icsmpucollege.com/
ತಮಿಳುನಾಡಿನ ದೇವಸ್ಥಾನದಿಂದ ಕದ್ದ ಐದು ನೂರು ವರ್ಷಗಳಷ್ಟು ಹಳೆಯದಾದ ಹನುಮಾನ್ ಕಂಚಿನ ವಿಗ್ರಹವನ್ನು ಭಾರತಕ್ಕೆ ಹಿಂತಿರುಗಿಸಲಾಗುವುದು. ಹಿಂಪಡೆಯಲಾದ ಕದ್ದ ವಿಗ್ರಹವನ್ನು ಅಮೆರಿಕದ ಹೋಮ್‌ಲ್ಯಾಂಡ್ ಸೆಕ್ಯುರಿಟಿಗೆ ಹಸ್ತಾಂತರಿಸಿದೆ” ಎಂದು ಸಚಿವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಮಂಗಳವಾರ, ಇದನ್ನು ಕ್ಯಾನ್‌ಬೆರಾದಲ್ಲಿರುವ ಭಾರತೀಯ ಹೈಕಮಿಷನರ್ ಮನ್‌ಪ್ರೀತ್ ವೋಹ್ರಾ ಅವರಿಗೆ ಆಸ್ಟ್ರೇಲಿಯಾದ ಚಾರ್ಜ್ ಡಿ’ಅಫೇರ್ಸ್ ಮೈಕೆಲ್ ಗೋಲ್ಡ್‌ಮನ್ ಹಿಂತಿರುಗಿಸಿದರು.
ಎಎಸ್‌ಐ ಪ್ರಕಾರ, ಈ ವಿಗ್ರಹವನ್ನು ಹಾಗೂ ಶ್ರೀ ದೇವಿ ವಿಗ್ರಹ ಮತ್ತು ಭೂದೇವಿ ವಿಗ್ರಹವನ್ನು ಏಪ್ರಿಲ್ 9, 2012 ರಂದು ಅರಿಯಲೂರು ಜಿಲ್ಲೆಯ ವೆಲ್ಲೂರು ಗ್ರಾಮದ ವರದರಾಜ ಪೆರುಮಾಳ್ ದೇವಸ್ಥಾನದಿಂದ ಕಳ್ಳತನ ಮಾಡಲಾಗಿತ್ತು. ಮಾರ್ಚ್ 2014 ರಲ್ಲಿ, ಈ ವಿಗ್ರಹವನ್ನು ಆಸ್ಟ್ರೇಲಿಯಾದಲ್ಲಿ ಖರೀದಿದಾರರಿಗೆ ಹರಾಜು ಮಾಡಲಾಯಿತು. ತನಿಖೆಯ ನಂತರ, ಇದು ಭಾರತದಿಂದ ಕದ್ದ ಅದೇ ವಿಗ್ರಹ ಎಂಬುದು ಕಂಡುಬಂದಿದೆ.
ವಿಗ್ರಹವನ್ನು ಹರಾಜು ಮಾಡಿದ ನ್ಯೂಯಾರ್ಕ್ ಮೂಲದ ಹರಾಜು ಸಂಸ್ಥೆ ಮತ್ತು ಆಸ್ಟ್ರೇಲಿಯಾದ ಖರೀದಿದಾರರಿಗೆ ಪ್ರತಿಮೆ ಕದ್ದಿರುವುದು ತಿಳಿದಿರಲಿಲ್ಲ ಎಂದು ಮೂಲಗಳು ತಿಳಿಸಿವೆ.
ಸರ್ಕಾರವು ಕಳೆದ ಏಳು ವರ್ಷಗಳಲ್ಲಿ ಸುಮಾರು 212 ಕಲಾಕೃತಿಗಳನ್ನು, ಮುಖ್ಯವಾಗಿ ಪ್ರತಿಮೆಗಳನ್ನು ಹಿಂಪಡೆದಿದೆ.
ನಿಮ್ಮ ಕಾಮೆಂಟ್ ಬರೆಯಿರಿ