ಒಂದೇ ಕುಟುಂಬದ ಮೂವರು ವಿಷ ಸೇವಿಸಿ ಆತ್ಮಹತ್ಯೆ

ಹಾಸನ: ಒಂದೇ ಕುಟುಂಬದ ಮೂವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಹಾಸನದಲ್ಲಿ ನಡೆದಿದೆ.
ಹಾಸನದ ಹೇಮಾವತಿ ನಗರದ ಸತ್ಯಪ್ರಸಾದ, ಪತ್ನಿ ಅನ್ನಪೂರ್ಣ, ಹಾಗೂ ಮಗ ಗೌರವ ಆತ್ಮಹತ್ಯೆಗೆ ಮಾಡಿಕೊಂಡವರು ಎಂದು ಗುರುತಿಸಲಾಗಿದೆ. ಹಾಸನ ನಗರ ನಿವಾಸಿಯಾದ ಸತ್ಯ ಪ್ರಸಾದ ಬೇಲೂರು ರಸ್ತೆಯಲ್ಲಿ ಪೆಟ್ರೋಲ್ ಬಂಕ್ ಮಾಲೀಕತ್ವ ಹೊಂದಿದ್ದಾರೆ.
ಗೌರವ್ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದರು. ಸತ್ಯಪ್ರಸಾದ ಅವರ ಪತ್ನಿ ಅನ್ನಪೂರ್ಣ ಗೃಹಿಣಿಯಾಗಿದ್ದರು.
ಸತ್ಯ ಪ್ರಸಾದ ಅವರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರು ಎಂದು ಹೇಳಲಾಗುತ್ತಿದೆ.
ಕಾರಣದಿಂದ ಸತ್ಯ ಪ್ರಸಾದ ಅವರ ಕುಟುಂಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ, ಆದರೆ ನಿಖರ ಕಾರಣ ತಿಳಿದುಬರಬೇಕಿದೆ.

5 / 5. 1

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಕರ್ನಾಟಕದ 12 ಜಿಲ್ಲೆಗಳಲ್ಲಿ ಜೂ.15ರ ವರೆಗೆ ಜೋರಾದ ಮಳೆ ಮುನ್ಸೂಚನೆ

ನಿಮ್ಮ ಕಾಮೆಂಟ್ ಬರೆಯಿರಿ

advertisement