ಒಡಿಶಾದಲ್ಲಿ ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ಭರ್ಜರಿ ಜಯಭೇರಿಯತ್ತ ಬಿಜೆಡಿ

ಭುವನೇಶ್ವರ: ಒಡಿಶಾದ ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಡಿ ಭರ್ಜರಿ ಗೆಲುವಿನತ್ತ ಸಾಗುತ್ತಿದ್ದು, ಶನಿವಾರ ನಡೆದ ಮೊದಲ ಹಂತದ ಮತ ಎಣಿಕೆಯಲ್ಲಿ 315 ವಲಯಗಳ ಪೈಕಿ ಕನಿಷ್ಠ 270 ಜಿಲ್ಲಾ ಪರಿಷತ್‌ ವಲಯಗಳಲ್ಲಿ ಪಕ್ಷ ಮುನ್ನಡೆ ಸಾಧಿಸಿದೆ.

ಪ್ರತಿಪಕ್ಷ ಬಿಜೆಪಿ ಮತ್ತು ಕಾಂಗ್ರೆಸ್ ಕ್ರಮವಾಗಿ ಕೇವಲ 24 ಮತ್ತು 15 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಹಿಂದೆ ಬಿದ್ದಿದ್ದರೆ, ಸ್ವತಂತ್ರರು ಮತ್ತು ಇತರರು ಕೇವಲ ಆರು ವಲಯಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಈ ಟ್ರೆಂಡ್‌ಗಳು ಬಿಜೆಪಿಗೆ, ವಿಶೇಷವಾಗಿ ಪಶ್ಚಿಮ ಒಡಿಶಾ ಜಿಲ್ಲೆಗಳಲ್ಲಿ ದೊಡ್ಡ ನಿರಾಸೆಯಾಗಿ ಬಂದಿದೆ, ಬಿಜೆಡಿ ಬಹುತೇಕ ಜಿಲ್ಲೆಗಳಲ್ಲಿ ಮುನ್ನಡೆ ಸಾಧಿಸಿದೆ. 2017 ರ ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ಪ್ರತಿಪಕ್ಷ ಬಿಜೆಪಿಯು ಬಹುಪಾಲು ಸ್ಥಾನಗಳನ್ನು ಗೆದ್ದಿದ್ದ ಕಲಹಂಡಿ, ಬಲಂಗೀರ್, ನುವಾಪಾದ, ಸಂಬಲ್‌ಪುರ್, ಸುಂದರ್‌ಗಢ ಮತ್ತು ಮಯೂರ್‌ಭಾಬ್ಜ್ ಜಿಲ್ಲೆಗಳಲ್ಲಿ ಬಿಜೆಡಿಯ ಕಾರ್ಯಕ್ಷಮತೆ ಗಣನೀಯವಾಗಿ ಸುಧಾರಿಸಿದೆ.

ಇದುವರೆಗೆ ಲಭ್ಯವಿರುವ ಟ್ರೆಂಡ್‌ಗಳ ಪ್ರಕಾರ 16 ಜಿಲ್ಲೆಗಳಲ್ಲಿ ಬಿಜೆಪಿ ಒಂದೇ ಒಂದು ಸ್ಥಾನದಲ್ಲಿ ಮುನ್ನಡೆ ಸಾಧಿಸಲು ಸಾಧ್ಯವಾಗಿಲ್ಲ. ಸಾಂಪ್ರದಾಯಿಕ ಭದ್ರಕೋಟೆಯಾಗಿರುವ ದಕ್ಷಿಣ ಒಡಿಶಾದಲ್ಲಿ ಕಾಂಗ್ರೆಸ್ ಹೋರಾಟ ನಡೆಸುತ್ತಿದ್ದರೂ ಕಾಂಗ್ರೆಸ್ ಸಾಧನೆ ಸುಧಾರಿಸಿಲ್ಲ.
2017 ರ ಜಿಲ್ಲಾ ಪರಿಷತ್‌ ಚುನಾವಣೆಯಲ್ಲಿ, ಬಿಜೆಡಿ 476 ಜಿಲ್ಲಾ ಪಂಚಾಯತ ವಲಯಗಳನ್ನು ಗೆದ್ದಿದ್ದರೆ, ಬಿಜೆಪಿ ಮತ್ತು ಕಾಂಗ್ರೆಸ್ ಕ್ರಮವಾಗಿ 297 ಮತ್ತು 60 ವಲಯಗಳಿಂದ ಗೆದ್ದಿದ್ದವು. 2012ರ ಚುನಾವಣೆಯಲ್ಲಿ ಬಿಜೆಡಿ 651 ಜಿಪಂ ವಲಯಗಳನ್ನು ಗೆದ್ದಿತ್ತು.

ಪ್ರಮುಖ ಸುದ್ದಿ :-   ಮಣಿಪುರ : ಮತಗಟ್ಟೆ ಮೇಲೆ ಗುಂಡಿನ ದಾಳಿ; ದಿಕ್ಕಾ ಪಾಲಾಗಿ ಓಡಿದ ಮತದಾರರು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement