ಬೆಂಗಳೂರು: ಅಜ್ಜಿ ಸಾವನ್ನು ಕಣ್ಣಾರೆ ಕಂಡ ಮೊಮ್ಮಗಳೂ ಆತ್ಮಹತ್ಯೆ

ಬೆಂಗಳೂರು : ರಭಸವಾಗಿ ತಳ್ಳಿದ ಪರಿಣಾಮ ಗೋಡೆಗೆ ತಲೆ ಬಡಿದು ತೀವ್ರ ಪೆಟ್ಟುಬಿದ್ದು ಅಜ್ಜಿ ಸ್ಥಳದಲ್ಲೇ ಮೃತಪಟ್ಟಿದ್ದನ್ನು ಕಂಡ ಮೊಮ್ಮಗಳು ಗಾಬರಿಗೊಂಡು ತಾನೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜ್ಞಾನಭಾರತಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಮಾರುತಿ ನಗರದ ಜಯಮ್ಮ (70) ಮೃತಪಟ್ಟ ವೃದ್ಧೆ ಎಂದು ಗುರುತಿಸಲಾಗಿದೆ. ಕೊಟ್ಟಿಗೆಪಾಳ್ಯದ ಮಮತಾ(24) ಆತ್ಮಹತ್ಯೆಗೆ ಶರಣಾದ ಮೊಮ್ಮಗಳು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.
ಮಾರುತಿನಗರದ 17ನೇ ಕ್ರಾಸ್‌ನಲ್ಲಿ ಜಯಮ್ಮ ತಮ್ಮ ಪುತ್ರಿ ಮಂಜುಳಾ ಮತ್ತು ಮೊಮ್ಮಗ ಚೇತನ್‌ ಅವರೊಂದಿಗೆ ವಾಸವಾಗಿದ್ದರು. ಜಯಮ್ಮ ಅವರ ಮೊಮ್ಮಗಳು ಮಮತಾ ಎಂಕಾಂ ಪದವೀಧರೆಯಾಗಿದ್ದು, ಕೊಟ್ಟಿಗೆಪಾಳ್ಯದ ಯುವಕನೊಂದಿಗೆ ವಿವಾಹವಾಗಿತ್ತು. ಸಂಬಂಧಿಕರೊಬ್ಬರ ಮದುವೆಗೆ ಮಂಡ್ಯಕ್ಕೆ ಹೊಗಬೇಕಾಗಿದ್ದರಿಂದ ಮಮತಾ ಕೊಟ್ಟಿಗೆಪಾಳ್ಯದಿಂದ ಮಾರುತಿನಗರದ ತವರು ಮನೆಗೆ ಬಂದಿದ್ದರು.
ತಾಯಿ-ಮಗ ಗುರುವಾರ ಬೆಳಗ್ಗೆ ಮದುವೆಯಲ್ಲಿ ಪಾಲ್ಗೊಳ್ಳಲು ಮಂಡ್ಯಕ್ಕೆ ತೆರಳಿದ್ದರು. ಮಧ್ಯಾಹ್ನ 12.30 ರ ಸಮಯದಲ್ಲಿ ಅಜ್ಜಿ ಮತ್ತು ಮೊಮ್ಮಗಳ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಜಗಳ ಉಂಟಾಗಿದೆ. ಮಾತಿಗೆ ಮಾತು ಬೆಳೆದು ಮಮತಾ ಜಯಮ್ಮನನ್ನು ಜೋರಾಗಿ ತಳ್ಳಿದ್ದಾಳೆ.
ಘಟನೆ ವಿವರ
ಮಾರುತಿನಗರದ 17ನೇ ಕ್ರಾಸ್‌ನಲ್ಲಿ ಜಯಮ್ಮ ತಮ್ಮ ಪುತ್ರಿ ಮಂಜುಳಾ ಮತ್ತು ಮೊಮ್ಮಗ ಚೇತನ್‌ನೊಂದಿಗೆ ವಾಸವಾಗಿದ್ದರು. ಜಯಮ್ಮ ಅವರ ಮೊಮ್ಮಗಳು ಮಮತಾ ಎಂಕಾಂ ಪದವೀಧರೆಯಾಗಿದ್ದು, ಕೊಟ್ಟಿಗೆಪಾಳ್ಯದ ಯುವಕನೊಂದಿಗೆ ವಿವಾಹವಾಗಿತ್ತು. ಸಂಬಂಧಿಕರೊಬ್ಬರ ಮದುವೆಗೆ ಮಂಡ್ಯಕ್ಕೆ ಹೊಗಬೇಕಾಗಿದ್ದರಿಂದ ಮಮತಾ ಕೊಟ್ಟಿಗೆಪಾಳ್ಯದಿಂದ ಮಾರುತಿನಗರದಲ್ಲಿನ ತವರು ಮನೆಗೆ ಬಂದಿದ್ದರು.
ಮಂಜುಳಾ, ಚೇತನ್‌, ಮಮತಾ ಒಟ್ಟಾಗಿ ಮದುವೆಗೆ ಹೋಗಲು ನಿರ್ಧರಿಸಿದ್ದರು. ಆದರೆ ಮಮತಾಗೆ ಮಾಸಿಕ ಋುತುಚಕ್ರವಾಗಿದ್ದರಿಂದ ಮದುವೆಗೆ ಹೋಗಿರಲಿಲ್ಲ. ತಾಯಿ-ಮಗ ಇಬ್ಬರೇ ಗುರುವಾರ ಬೆಳಗ್ಗೆ ಮದುವೆಯಲ್ಲಿ ಪಾಲ್ಗೊಳ್ಳಲು ಮಂಡ್ಯಕ್ಕೆ ತೆರಳಿದ್ದರು. ಮಧ್ಯಾಹ್ನ 12.30 ರ ಸಮಯದಲ್ಲಿಅಜ್ಜಿ ಮತ್ತು ಮೊಮ್ಮಗಳ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಜಗಳ ಉಂಟಾಗಿದೆ. ಮಾತಿಗೆ ಮಾತು ಬೆಳೆದು ಮಮತಾ ಜಯಮ್ಮನನ್ನು ಜೋರಾಗಿ ತಳ್ಳಿದ್ದಾಳೆ.
ಪರಿಣಾಮ ರಭಸವಾಗಿ ಗೋಡೆಗೆ ತಲೆ ಬಡಿದು ಜಯಮ್ಮ ಕೆಳಗೆ ಬಿದ್ದಿದ್ದಾರೆ. ಹತ್ತಿರ ಹೋಗಿ ನೋಡಿದಾಗ ಜಯಮ್ಮ ಮೃತಪಟ್ಟಿರುವುದು ಗೊತ್ತಾದ ನಂತರ ಹೆಸರಿದ ಮೊಮ್ಮಗಳು ಕೊಠಡಿಯೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮದುವೆಗೆ ಹೋಗಿದ್ದವರು ಮಧ್ಯಾಹ್ನ 3:30ರ ಸುಮಾರಿಗೆ ತಂಗಿ ಮಮತಾಗೆ 2-3 ಬಾರಿ ಕರೆ ಮಾಡಿದರೂ ಸ್ವೀಕರಿಸದಿದ್ದಾಗ ಗಾಬರಿಗೊಂಡು ಪಕ್ಕದ ಮನೆಯವರಿಗೆ ಕರೆ ಮಾಡಿ ಹೋಗಿ ನೋಡುವಂತೆ ಹೇಳಿದ್ದಾರೆ. ನಂತರ ಮಮತಾ ಅವರ ಗಂಡನಿಗೂ ತಿಳಿಸಿದ್ದಾರೆ. ಅವರೂ ಮಮತಾಗೆ ಕರೆ ಮಾಡಿದರೂ ಮೊಬೈಲ್‌ ಕರೆ ಸ್ವೀಕರಿಸದಿದ್ದಾಗ ತಕ್ಷಣ ಮನೆ ಬಳಿ ಬಂದು ನೋಡಿದಾಗ ಜಯಮ್ಮ ರಕ್ತದ ಮಡುವಿನಲ್ಲಿ ಬಿದ್ದು ಮೃತಪಟ್ಟಿರುವುದು ಮತ್ತು ಮಮತಾ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಮಮತಾಗೆ ಜನಿಸಿದ ಮಗು ಮೂರು ತಿಂಗಳಿಗೆ ಮೃತಪಟ್ಟಿತ್ತು. ಇದರಿಂದ ಆಕೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಹೀಗಾಗಿ, ಮಾತಿನ ಮಧ್ಯೆಯೇ ಕೋಪ ಮಾಡಿಕೊಂಡು ಜಗಳ ಮಾಡುತ್ತಿದ್ದರು. ಅದರಂತೆಯೇ ಅಜ್ಜಿಯ ಜತೆಯೂ ಜಗಳ ಮಾಡಿದ್ದಾರೆ ಎನ್ನಲಾಗಿದೆ.

ಪ್ರಮುಖ ಸುದ್ದಿ :-   ಗದಗ: ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿ ನಾಲ್ವರ ಭೀಕರ ಹತ್ಯೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement