ರಷ್ಯಾದ ದಾಳಿಯಲ್ಲಿ 198 ಜನರ ಸಾವು, 1,000 ಕ್ಕೂ ಹೆಚ್ಚು ಜನರಿಗೆ ಗಾಯ: ಉಕ್ರೇನ್ ಆರೋಗ್ಯ ಸಚಿವ

ಕೈವ್‌: ರಷ್ಯಾದ ಆಕ್ರಮಣದಲ್ಲಿ ಉಕ್ರೇನಿನ ನೂರಾರು ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಉಕ್ರೇನ್ ತನ್ನ ಸೇನೆಯು 1,000 ರಷ್ಯಾದ ಸೈನಿಕರನ್ನು ಕೊಂದಿದೆ ಎಂದು ಹೇಳಿಕೊಂಡರೆ, ರಷ್ಯಾದ ರಕ್ಷಣಾ ಸಚಿವಾಲಯವು ತನ್ನ ಪಡೆಗಳು ಉಕ್ರೇನ್‌ನಲ್ಲಿ 211 ಮಿಲಿಟರಿ ಮೂಲಸೌಕರ್ಯ ಸೌಲಭ್ಯಗಳನ್ನು ಧ್ವಂಸ ಮಾಡಿದೆ ಎಂದು ಹೇಳಿದೆ.
ಈ ವಾರ ರಷ್ಯಾದ ವ್ಲಾಡಿಮಿರ್ ಪುಟಿನ್ ಅವರು ಯುದ್ಧ ಘೋಷಣೆ ಮಾಡಿದ ನಂತರ ರಷ್ಯಾದ ಕ್ಷಿಪಣಿಗಳು ಕೈವ್ ಮೇಲೆ ದಾಳಿ ನಡೆಸಿದ್ದರಿಂದ ರಷ್ಯಾ-ಉಕ್ರೇನ್ ಬಿಕ್ಕಟ್ಟು ಇನ್ನಷ್ಟು ಗಂಭೀರವಾಯಿತು. ತಡರಾತ್ರಿಯ ಸಂದೇಶದಲ್ಲಿ, ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, “ನಾವೆಲ್ಲರೂ ನಮ್ಮ ಸ್ವಾತಂತ್ರ್ಯವನ್ನು, ನಮ್ಮ ದೇಶವನ್ನು ರಕ್ಷಿಸುತ್ತಿದ್ದೇವೆ ಮತ್ತು ಅದು ಹೀಗೆಯೇ ಇರುತ್ತದೆ” ಎಂದು ಹೇಳಿದರು. ಏತನ್ಮಧ್ಯೆ, ಅಮೆರಿಕ ಸರ್ಕಾರವು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಮೇಲೆ ನಿರ್ಬಂಧಗಳನ್ನು ವಿಧಿಸುವಲ್ಲಿ ಯುರೋಪಿಯನ್ ರಾಷ್ಟ್ರಗಳೊಂದಿಗೆ ಸೇರಿಕೊಂಡಿತು. ಅವ್ಯವಸ್ಥೆಯ ನಡುವೆ, ವಿಶ್ವಸಂಸ್ಥೆ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್ ರಷ್ಯಾದ ಸೈನಿಕರು ಯುದ್ಧ ನಿಲ್ಲಿಸಿ ಮರಳಬೇಕಾಗಿದೆ ಎಂದು ಕರೆ ನೀಡಿದಾಗಲೂ ರಷ್ಯಾದ ಆಕ್ರಮಣಶೀಲತೆ ಮುಂದುವರಿದಿದೆ. ದಾಳಿ ಖಂಡಿಸುವ ವಿಶ್ವಸಂಸ್ಥೆ ಭದ್ರಾ ಮಂಡಳಿ ನಿರ್ಣಯಕ್ಕೆ ರಷ್ಯಾ ವೀಟೋ ಮಾಡಿದೆ.

ಪ್ರಮುಖ ಸುದ್ದಿ :-   ವೀಡಿಯೊ...: ಭಾರೀ ಮಳೆ-ಬಿರುಗಾಳಿಯ ನಡುವೆ ಹಸಿರು ಬಣ್ಣಕ್ಕೆ ತಿರುಗಿದ ದುಬೈನ ಆಕಾಶ...!

ರಷ್ಯಾದ ಪಡೆಗಳಿಂದ 198 ನಾಗರಿಕರ ಸಾವು: ಉಕ್ರೇನ್ ಆರೋಗ್ಯ ಸಚಿವರು
ರಷ್ಯಾದ ದಾಳಿಯಲ್ಲಿ 198 ಜನರು ಮೃತಪಟ್ಟಿದ್ದಾರೆ ಮತ್ತು 1,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಉಕ್ರೇನಿಯನ್ ಆರೋಗ್ಯ ಸಚಿವರು ಹೇಳಿದ್ದಾರೆ.
ಮೃತಪಟ್ಟವರಲ್ಲಿ ಮೂವರು ಮಕ್ಕಳಿದ್ದಾರೆ ಎಂದು ಆರೋಗ್ಯ ಸಚಿವ ವಿಕ್ಟರ್ ಲಿಯಾಶ್ಕೊ ಶನಿವಾರ ಹೇಳಿದ್ದಾರೆ. ಅವರ ಹೇಳಿಕೆಯು ಸಾವುನೋವುಗಳಲ್ಲಿ ಮಿಲಿಟರಿ ಮತ್ತು ನಾಗರಿಕರನ್ನು ಒಳಗೊಂಡಿದೆಯೇ ಎಂಬುದು ಸ್ಪಷ್ಟವಾಗಿಲ್ಲ.
ಬೃಹತ್ ವಾಯು ಮತ್ತು ಕ್ಷಿಪಣಿ ದಾಳಿಗಳು ನಡೆಯುತ್ತಿವೆ. ಉತ್ತರ, ಪೂರ್ವ ಮತ್ತು ದಕ್ಷಿಣದಿಂದ ಪಡೆಗಳು ಉಕ್ರೇನ್‌ಗೆ ಮುನ್ನುಗ್ಗುತ್ತಿವೆ. ಗುರುವಾರ ಪ್ರಾರಂಭವಾದ ರಷ್ಯಾದ ಆಕ್ರಮಣದಲ್ಲಿ 33 ಮಕ್ಕಳು ಸೇರಿದಂತೆ 1,115 ಜನರು ಗಾಯಗೊಂಡಿದ್ದಾರೆ ಎಂದು ಅವರು ಹೇಳಿದರು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement