ಯುದ್ಧ ಪೀಡಿತ ಉಕ್ರೇನ್‌ನಿಂದ ಎರಡನೇ ವಿಮಾನದಲ್ಲಿ ದೆಹಲಿಗೆ ಬಂದಿಳಿದ 250 ಮಂದಿ

ನವದೆಹಲಿ: ಯುದ್ಧ ಪೀಡಿತ ಉಕ್ರೇನ್‌ನಿಂದ ರೊಮೇನಿಯಾಕ್ಕೆ ಸ್ಥಳಾಂತರಗೊಂಡಿದ್ದ 250 ಮಂದಿಯನ್ನು ಎರಡನೇ ವಿಮಾನದಲ್ಲಿ ಭಾರತಕ್ಕೆ ಕರೆತರಲಾಯಿತು.
‘ಆಪರೇಷನ್ ಗಂಗಾ’ದ ಎರಡನೇ ಹಂತದಲ್ಲಿ ರೊಮೇನಿಯಾದ ರಾಜಧಾನಿ ಬುಕಾರೆಸ್ಟ್‌ನಿಂದ 250 ಮಂದಿ ಭಾನುವಾರ ಮುಂಜಾನೆ ನವದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು ಎಂದು ವರದಿಗಳು ತಿಳಿಸಿವೆ.
250 ಮಂದಿ ಭಾರತೀಯರನ್ನೊಳಗೊಂಡ ವಿಮಾನ ಬುಕಾರೆಸ್ಟ್‌ನಿಂದ ಟೇಕಾಫ್ ಆಗಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಶನಿವಾರ ತಡರಾತ್ರಿ ಟ್ವೀಟ್ ಮಾಡಿದ್ದರು.
ಮೃನೇ ವಿಮಾನ ಸಹ ರೊಮೇನಾಯಿದ ಬುಕಾರೆಸ್ಟ್‌ನಿಂದ ಹೊರಟಿದೆ ಎಂದು ತಿಳಿಸಲಾಗಿದೆ.
ಮೊದಲ ಹಂತದ ತೆರವು ಕಾರ್ಯಾಚರಣೆಯಲ್ಲಿ 219 ಮಂದಿಯನ್ನು ಶನಿವಾರ ತಾಯ್ನಾಡಿಗೆ ಕರೆತರಲಾಗಿತ್ತು. ಬುಕಾರೆಸ್ಟ್‌ನಿಂದ 219 ಭಾರತೀಯರನ್ನು ಹೊತ್ತ ಏರ್‌ ಇಂಡಿಯಾ ವಿಮಾನವು ಶನಿವಾರ ಸಂಜೆ ಮುಂಬೈಗೆ ಬಂದಿಳಿದಿತ್ತು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

ಓದಿರಿ :-   ಇಂಧನ ದರ ಇಳಿಕೆ ಮಾಡಿದ ಮೋದಿ ಸರ್ಕಾರ; ಅಮೆರಿಕ ಒತ್ತಡಕ್ಕೆ ಮಣಿಯದ ಭಾರತವನ್ನು ಹೊಗಳಿದ ಇಮ್ರಾನ್ ಖಾನ್...!
advertisement

ನಿಮ್ಮ ಕಾಮೆಂಟ್ ಬರೆಯಿರಿ