ಕುಮಟಾ : ರಂಗ ಕಲಾವಿದ ಹಾಗೂ ನಾಟಕ ನಿರ್ದೇಶಕ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೊಲನಗದ್ದೆಯ ಎಸ್. ಟಿ. ಭಟ್ಟ (66) ಅವರು ಭಾನುವಾರ ನಿಧನ ರಾದರು.
ಎಸ್. ಟಿ. ಭಟ್ಟ ಅವರು 200ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶನ ಮಾಡಿದ್ದರು. ಅನೇಕ ನಾಟಕ ಪುಸ್ತಕವನ್ನು ರಚಿಸಿದ್ದಾರೆ. ನಾಟಕ ಕಲಾವಿದರೂ ಆಗಿದ್ದ ಅವರು 100 ಕ್ಕೂ ಹೆಚ್ಚು ನಾಟಕ ದಲ್ಲಿ ಪ್ರಮುಖ ಪಾತ್ರಧಾರಿಯಾಗಿ ಜನ ಮೆಚ್ಚುಗೆ ಗಳಿಸಿದ್ದರು.
ಅನೇಕ ರಂಗ ಕಲಾವಿದರಿಗೆ ನಾಟಕ ಸೂಕ್ಷ್ಮತೆ ಕಲಿಸುತ್ತಿದ್ದರು. ಈ ಹಿಂದೆ ಬಯಲಾಟದಲ್ಲೂ ಯಕ್ಷಗಾನ ಪಾತ್ರದಲ್ಲಿ ಮಿಂಚಿದ್ದರು. ಮೃತರು ಪತ್ನಿ, ಇಬ್ಬರು ಮಕ್ಕಳು ಅಪಾರ ಬಂದು- ಬಳಗವನ್ನು ಅಗಲಿದ್ದಾರೆ.
ಇವರ ನಿಧನ ಕಲಾ ರಂಗಕ್ಕೆ ತುಂಬಲಾರದ ನಷ್ಟ ಎಂದು ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಗುಡೆ ಅಂಗಡಿ ಹವ್ಯಕ ಸಂಘದ ಅಧ್ಯಕ್ಷ ಆರ್. ಎನ್. ಹೆಗಡೆ. ಉಪಾಧ್ಯಕ್ಷ ಎನ್. .ವಿ. ಹೆಗಡೆ. ಆರ್ ಎಸ್ ಭಟ್ ಕೋಟಿ ಡಾ. ಎಸ್. ಎಸ್. ಹೆಗಡೆ. ಲಯನ್ಸ್ ಅಧ್ಯಕ್ಷ ವಿನಯ ಹೆಗಡೆ. ಮತ್ತು ಅನೇಕ ರಂಗ ಕಲಾವಿದರು ಮತ್ತಿತರರು ಎಸ್ ಭಟ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
advertisement
9535127775 / 9901837775 / 6364528715 / 08362775155 / https://icsmpucollege.com/
ನಿಮ್ಮ ಕಾಮೆಂಟ್ ಬರೆಯಿರಿ