ಉಕ್ರೇನ್‌ನಲ್ಲಿ ತುರ್ತು ಕದನ ವಿರಾಮ ಘೋಷಿಸಿ: ವಿಶ್ವಸಂಸ್ಥೆಯ ತುರ್ತು ವಿಶೇಷ ಸಾಮಾನ್ಯ ಸಭೆ

ಉಕ್ರೇನ್ ಮೇಲೆ ರಷ್ಯಾ ಸೇನೆ ಯುದ್ಧ ಮುಂದುವರಿಸಿದೆ. ಈ ಮಧ್ಯೆ ಸೋಮವಾರ ನಡೆದ ವಿಶ್ವಸಂಸ್ಥೆಯ ತುರ್ತು ವಿಶೇಷ ಸಾಮಾನ್ಯ ಸಭೆ ರಷ್ಯಾ ಆಕ್ರಮಣಕಾರಿ ನೀತಿ ಚರ್ಚಿಸಲು ಸಭೆ ಕರೆಯಲಾಗಿದೆ. ಉಕ್ರೇನ್‌ನಲ್ಲಿ ತಕ್ಷಣ ಕದನ ವಿರಾಮ ಘೋಷಿಸಬೇಕಿದೆ ಎಂದು ವಿಶ್ವಸಂಸ್ಥೆಯ ತುರ್ತು ವಿಶೇಷ ಸಾಮಾನ್ಯ ಸಭೆ ಅಭಿಪ್ರಾಯ ವ್ಯಕ್ತಪಡಿಸಿದೆ.
ಉಕ್ರೇನ್ ರಾಯಭಾರಿ ರಷ್ಯಾ ಆಕ್ರಮಣಕಾರಿ ನೀತಿಯನ್ನು ಖಂಡಿಸಿದ್ದಾರೆ. ಮಕ್ಕಳು, ಶಾಲೆಗಳ ಮೇಲೆಯೂ ರಷ್ಯಾ ಪಡೆಗಳು ದಾಳಿ ನಡೆಸುತ್ತಿದೆ. ಕೂಡಲೇ ಸೇನಾಪಡೆಯನ್ನು ರಷ್ಯಾ ವಾಪಸ್ ಪಡೆಯಬೇಕು ಎಂದು ಅವರು ಹೇಳಿದ್ದಾರೆ. ನಮ್ಮನ್ನು ನಾವು ರಕ್ಷಿಸಿಕೊಳ್ಳಲು ರಷ್ಯಾ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಚೆರ್ನೋಬಿಲ್ ಸ್ಥಾವರದಲ್ಲಿ ವಿಕಿರಣ ಸೋರಿಕೆ ಹೆಚ್ಚಾಗುತ್ತಿದೆ ಎಂದು ವಿಶ್ವಸಂಸ್ಥೆ ವಿಶೇಷ ಸಾಮಾನ್ಯ ಸಭೆಯಲ್ಲಿ ಉಕ್ರೇನ್ ಆತಂಕ ವ್ಯಕ್ತಪಡಿಸಿದೆ.
ಉಕ್ರೇನ್ ಮೇಲೆ ದಾಳಿಯನ್ನು ರಷ್ಯಾ ಸಮರ್ಥಿಸಿಕೊಂಡಿದೆ. ರಷ್ಯಾ ವಿರುದ್ಧ ಉಕ್ರೇನ್‌ ಸುಳ್ಳು ಸುದ್ದಿ ಹಬ್ಬಿಸುತ್ತಿದೆ. ರಷ್ಯಾಗೆ ಉಕ್ರೇನ್‌ನನ್ನು ವಶಪಡಿಸಿಕೊಳ್ಳುವ ಉದ್ದೇಶವಿಲ್ಲ. ಡಾನ್ಬಾಸ್ ನಿವಾಸಿಗಳನ್ನು ರಕ್ಷಿಸಲು ಉಕ್ರೇನ್ ಮೇಲೆ ದಾಳಿ ಮಾಡಲಾಗುತ್ತಿದೆ. ಡಾನ್ಬಾಸ್ ನಿವಾಸಿಗಳ ಬಗ್ಗೆ ಉಕ್ರೇನ್‌ಗೆ ಸಹಾನುಭೂತಿ ಇಲ್ಲ. ನಾಚಿಕೆ ಇಲ್ಲದೇ ಕೆಲ ದೇಶಗಳು ಶಸ್ತ್ರಾಸ್ತ್ರ ಪೂರೈಸುತ್ತಿವೆ ಎಂದು ಪಾಶ್ಚಿಮಾತ್ಯ ದೇಶಗಳ ವಿರುದ್ಧ ರಷ್ಯಾ ರಾಯಭಾರಿ ಕಿಡಿಕಾರಿದ್ದಾರೆ.
ರಷ್ಯಾ- ಉಕ್ರೇನ್ ನಿಯೋಗಗಳ ಮಧ್ಯೆ ಶಾಂತಿ ಸಭೆ ಅಂತ್ಯವಾಗಿದೆ. ಬೆಲಾರಸ್​​ನಲ್ಲಿ ಇಂದು ಒಂದೇ ದಿನ 3 ಸಭೆ ನಡೆಸಲಾಗಿದೆ. ಇಂದು ನಡೆದ ಸಭೆ ಒಂದು ಉತ್ತಮ ಬೆಳೆವಣಿಗೆಯಾಗಲಿದೆ. ಮುಂದಿನ 2 ದಿನಗಳಲ್ಲಿ ಮತ್ತೊಂದು ಸುತ್ತಿನ ಸಭೆಗೆ ನಿರ್ಧಾರ ಮಾಡಲಾಗಿದೆ ಎಂದು ಮಾಹಿತಿ ಲಭಿಸಿದೆ. ಈ ನಡುವೆ, ಉಕ್ರೇನ್​ ದೇಶಕ್ಕೆ ಫಿನ್​ಲ್ಯಾಂಡ್​ ನೆರವಿನ ಹಸ್ತ ಚಾಚಿದೆ. ಶಸ್ತ್ರಾಸ್ತ್ರ ಪೂರೈಸುವುದಾಗಿ ಫಿನ್​ಲ್ಯಾಂಡ್​ ಘೋಷಣೆ ಮಾಡಿದೆ.
ಯುರೋಪಿಯನ್ ಒಕ್ಕೂಟದಲ್ಲಿ ಸದಸ್ಯತ್ವಕ್ಕಾಗಿ ಉಕ್ರೇನ್ ಅರ್ಜಿ ಸಲ್ಲಿಸಿದೆ. ಉಕ್ರೇನ್ ಸದಸ್ಯತ್ವಕ್ಕಾಗಿ ಅರ್ಜಿಗೆ ಝೆಲೆನ್ಸ್ಕಿ ಸಹಿ ಹಾಕಿದ್ದಾರೆ. ಈ ಮಧ್ಯೆ, ಇಂಗ್ಲೆಂಡ್ ರಷ್ಯಾಗೆ ಮತ್ತಷ್ಟು ಆರ್ಥಿಕ ನಿರ್ಬಂಧ ವಿಧಿಸಿದೆ. ಬ್ರಿಟನ್‌ ದೇಶವು ರಷ್ಯನ್ ಬ್ಯಾಂಕ್​ಗಳ ಆಸ್ತಿ ಮುಟ್ಟುಗೋಲು ಹಾಕಿದೆ.

ಪ್ರಮುಖ ಸುದ್ದಿ :-   ವೀಡಿಯೊ..| ಆಫ್ರಿಕಾದ ಕಾರ್ಮಿಕರನ್ನು ಚಾವಟಿಯಿಂದ ಮನಬಂದಂತೆ ಥಳಿಸಿದ ಚೀನಾ ಮ್ಯಾನೇಜರ್ ; ವ್ಯಾಪಕ ಟೀಕೆ

1 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement