19 ಸಾವಿರ ಕೋಟಿಯ ಟೆಂಡರ್ ರದ್ದುಗೊಳಿಸಿದ ಬಿಎಸ್ಎನ್ಎಲ್

ನವದೆಹಲಿ: ದೇಶದ 16 ರಾಜ್ಯಗಳ ಹಳ್ಳಿಗಳಿಗೆ ವೇಗದ ಅಂತರ್ಜಾಲ ನೀಡಲು ಆಪ್ಟಿಕಲ್ ಫೈಬರ್ ಸಂಪರ್ಕ ಕಲ್ಪಿಸುವ ಯೋಜನೆಗೆ ಹಿನ್ನಡೆಯಾಗಿದೆ. ಈ ಕುರಿತು ಬಿಎಸ್ಎನ್ಎಲ್ ಕರೆದಿದ್ದ 19 ಸಾವಿರ ಕೋಟಿ ರು. ಟೆಂಡರ್ ಗೆ ಯಾರೂ ಬಿಡ್ ಸಲ್ಲಿಸಲು ಮುಂದೆ ಬಾರದ ಹಿನ್ನೆಲೆಯಲ್ಲಿ ರದ್ದಾಗಿದೆ.

ಕಳೆದ ವರ್ಷ ಜೂನ್ ತಿಂಗಳಲ್ಲಿ 19,430 ಕೋಟಿ ರು. ಈ ಯೋಜನೆಗೆ ಅನುಮೋದನೆ ನೀಡಲಾಗಿತ್ತು. ಭಾರತ್ ನೆಟ್ ಯೋಜನೆಯಡಿ ದೇಶದ 16 ರಾಜ್ಯದ ಗ್ರಾಮೀಣ ಭಾಗಗಳಿಗೆ ಸಾರ್ವಜನಿಕ ಹಾಗೂ ಖಾಸಗಿ ಕಂಪನಿಗಳ ಸಹಯೋಗದಲ್ಲಿ ಆಪ್ಟಿಕಲ್ ಫೈಬರ್ ಕೇಬಲ್ ಅಳವಡಿಸುವ ಗುರಿ ಹೊಂದಲಾಗಿತ್ತು. ಕೇಂದ್ರ ಸರ್ಕಾರ 19 ಸಾವಿರ ಕೋಟಿ ಹೂಡಿಕೆಗೆ ಮೊದಲ ಹಂತದಲ್ಲಿ ನಿರ್ಧರಿಸಿತ್ತು. 3.61 ಲಕ್ಷ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಉದ್ದೇಶ ಹೊಂದಲಾಗಿತ್ತು. ಯೋಜನೆಯ ಒಂಭತ್ತು ಭಾಗ ಮಾಡಿ ಟೆಂಡರ್ ಕರೆಯಲಾಗಿತ್ತು. ಅರ್ಹ ಬಿಡ್ ಬಾರದ ಹಿನ್ನೆಲೆಯಲ್ಲಿ ಟೆಂಡರ್ ರದ್ದುಗೊಳಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಖಾಸಗಿ ಕಂಪನಿಗಳ ಅಭಿಪ್ರಾಯ ಪಡೆದು ಅಗತ್ಯ ಬದಲಾವಣೆ ಮಾಡಿ ಮತ್ತೆ ಟೆಂಡರ್ ಕರೆಯಲಾಗುವುದು ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಮಾದಕ ವಸ್ತು ಪ್ರಕರಣ : ನಟ ಶ್ರೀಕಾಂತ ಬಂಧನ

2025ರೊಳಗೆ ದೇಶದ 2.5 ಲಕ್ಷ ಪಂಚಾಯಿತಿಗಳಿಗೆ ವೇಗದ ಅಂತರ್ಜಾಲ ಸಂಪರ್ಕ ಕಲ್ಪಿಸುವ ಗುರಿ ಹೊಂದಲಾಗಿದೆ. ಈಗಾಗಲೇ 1.69 ಲಕ್ಷ ಗ್ರಾಪಂಗಳಿಗೆ ಸಂಪರ್ಕ ಕಲ್ಪಿಸಲಾಗಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement