ಭಾರತ್‌ಪೇ ಸಹ-ಸಂಸ್ಥಾಪಕ ಅಶ್ನೀರ್ ಗ್ರೋವರ್ ರಾಜೀನಾಮೆ-ನನಗೆ ಕಂಪನಿ ತೊರೆಯುವಂತೆ ಮಾಡಲಾಯ್ತು ಎಂದು ಆರೋಪ

 

ಫಿನ್‌ಟೆಕ್ ಯುನಿಕಾರ್ನ್ ಭಾರತ್‌ ಪೇ ಸಹ-ಸಂಸ್ಥಾಪಕ ಅಶ್ನೀರ್ ಗ್ರೋವರ್ ಅವರು ಕಂಪನಿಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಿಂಗಾಪುರದಲ್ಲಿ ಅಶ್ನೀರ್ ಗ್ರೋವರ್ ವಿರುದ್ಧ ತನಿಖೆಯನ್ನು ಪ್ರಾರಂಭಿಸಲು ಫಿನ್‌ಟೆಕ್ ಪ್ಲಾಟ್‌ಫಾರ್ಮ್ ವಿರುದ್ಧ ಸಲ್ಲಿಸಿದ ಮಧ್ಯಸ್ಥಿಕೆಯಲ್ಲಿ ಅವರು ಸೋಲನ್ನು ಎದುರಿಸಬೇಕಾಯಿತು. ಈ ಸೋಲಿನ ನಂತರ, ಅಶ್ನೀರ್ ರಾಜೀನಾಮೆ ಮುನ್ನೆಲೆಗೆ ಬಂದಿತು. ಆದಾಗ್ಯೂ, ಫಿನ್‌ಟೆಕ್ ಯೂನಿಕಾರ್ನ್ ಮಂಡಳಿಗೆ ಕಳುಹಿಸಿದ ಇಮೇಲ್‌ನಲ್ಲಿ, ಅಶ್ನೀರ್ ಗ್ರೋವರ್ ತಮ್ಮ ವಿರುದ್ಧ “ಅಪಪ್ರಚಾರ” ಮಾಡಲಾಗಿದೆ ಮತ್ತು “ಅತ್ಯಂತ ಅವಮಾನಕರ ರೀತಿಯಲ್ಲಿ” ನಡೆಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ‘ನಾನು ಸಂಸ್ಥಾಪಕನಾಗಿರುವ ಕಂಪನಿಗೆ ಇಂದು ಬಲವಂತವಾಗಿ ವಿದಾಯ ಹೇಳುತ್ತಿರುವ ಬಗ್ಗೆ ನನಗೆ ಅತೀವ ದುಃಖವಾಗಿದೆ’ ಎಂದು ಅವರು ಮೇಲ್‌ನಲ್ಲಿ ಬರೆದಿದ್ದಾರೆ.
ಈ ಹಿಂದೆ, ಭಾರತ್‌ಪೇ ತನ್ನ ‘ನಿಯಂತ್ರಣ’ ವಿಭಾಗದ ಮುಖ್ಯಸ್ಥೆ ಮತ್ತು ಅಶ್ನೀರ್ ಗ್ರೋವರ್ ಅವರ ಪತ್ನಿ ಮಾಧುರಿ ಜೈನ್ ಗ್ರೋವರ್ ಅವರನ್ನು ಆರ್ಥಿಕ ಅಕ್ರಮಗಳ ಆರೋಪದ ಮೇಲೆ ವಜಾಗೊಳಿಸಿತ್ತು. ಮಾಧುರಿ ಜೈನ್ ಭಾರತ್‌ ಪೇಯಲ್ಲಿ ನಿಯಂತ್ರಣದ ಮುಖ್ಯಸ್ಥರಾಗಿದ್ದರು. ಆಂತರಿಕ ತನಿಖೆಯು ಅವರು ಫಿನ್‌ಟೆಕ್ ಪ್ಲಾಟ್‌ಫಾರ್ಮ್‌ನಲ್ಲಿದ್ದ ಸಮಯದಲ್ಲಿ ಹಣವನ್ನು ದುರುಪಯೋಗಪಡಿಸಿಕೊಂಡಿರುವುದನ್ನು ಬಹಿರಂಗಪಡಿಸಿತು. ಅಶ್ನೀರ್ ಗ್ರೋವರ್ ಕೋಟಕ್ ಮಹೀಂದ್ರಾ ಬ್ಯಾಂಕ್‌ನ ಉದ್ಯೋಗಿಗಳ ವಿರುದ್ಧ ಅನುಚಿತ ಭಾಷೆ ಬಳಸಿದ ಆರೋಪದ ಮೇಲೆ ವಿವಾದವನ್ನು ಎದುರಿಸಿದ ನಂತರ, ಅವರ ಪತ್ನಿ ಮಾಧುರಿ ಜೈನ್ ಕೂಡ ಜನವರಿಯಲ್ಲಿ ರಜೆಯ ಮೇಲೆ ತೆರಳಿದ್ದರು.
ಅಶ್ನೀರ್ ಗ್ರೋವರ್ ಸಿಂಗಾಪುರದ ಆರ್ಬಿರ್ಟ್ರೇಶನ್‌ ನಲ್ಲಿ ಸೋಲನುಭವಿಸಿದರು.
ಅಶ್ನೀರ್ ಗ್ರೋವರ್‌ಗೆ ದೊಡ್ಡ ಹಿನ್ನಡೆಯಾಗಿ, ಅವರ ವಿರುದ್ಧ ತನಿಖೆಯನ್ನು ಪ್ರಾರಂಭಿಸಲು ಸಿಂಗಾಪುರದ ಫಿನ್‌ಟೆಕ್ ಪ್ಲಾಟ್‌ಫಾರ್ಮ್ ಅವರ ವಿರುದ್ಧ ಸಲ್ಲಿಸಿದ ಆರ್ಬಿರ್ಟ್ರೇಶನ್‌ ನಲ್ಲಿ ಅವರು ಸೋಲನ್ನು ಎದುರಿಸಬೇಕಾಯಿತು. ಆರ್ಬಿರ್ಟ್ರೇಶನ್‌ ಅವರ ವಿರುದ್ಧ ಭಾರತ್‌ ಪೇಯಲ್ಲಿ ನಡೆಯುತ್ತಿರುವ ಆಡಳಿತ ಪರಿಶೀಲನೆಯನ್ನು ನಿಲ್ಲಿಸಲು ತುರ್ತು ಆರ್ಬಿರ್ಟ್ರೇಟರ್‌ (ಇಎ) ಮನವೊಲಿಸಲು ವಿಫಲವಾಯಿತು. ಗ್ರೋವರ್ ಅವರು ಸಿಂಗಾಪುರ್ ಅಂತರಾಷ್ಟ್ರೀಯ ಆರ್ಬಿರ್ಟ್ರೇಶನ್‌ ಕೇಂದ್ರದಲ್ಲಿ (SIAC) ಅರ್ಜಿಯನ್ನು ಸಲ್ಲಿಸಿದ್ದರು.

ಓದಿರಿ :-   ನೋಯ್ಡಾ ವಿಮಾನ ನಿಲ್ದಾಣ ನಿರ್ಮಾಣದಲ್ಲಿ ವಿಳಂಬಕ್ಕೆ ದಿನಕ್ಕೆ 10 ಲಕ್ಷ ರೂಪಾಯಿದಂಡ ವಿಧಿಸಲಿರುವ ಉತ್ತರ ಪ್ರದೇಶ ಸರ್ಕಾರ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

advertisement

ನಿಮ್ಮ ಕಾಮೆಂಟ್ ಬರೆಯಿರಿ