ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ ಪುತ್ರ ಝೈನ್ 26ನೇ ವಯಸ್ಸಿನಲ್ಲಿ ನಿಧನ

ವಾಷಿಂಗ್ಟನ್ : ಮೈಕ್ರೋಸಾಫ್ಟ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸತ್ಯ ನಾದಲ್ಲಾ ಅವರ 26 ವರ್ಷದ ಮಗ ಸೋಮವಾರ ನಿಧನರಾದರು ಎಂದು ಕಂಪನಿಯು ತನ್ನ ಕಾರ್ಯನಿರ್ವಾಹಕ ಸಿಬ್ಬಂದಿಗೆ ಇಮೇಲ್ ಮೂಲಕ ತಿಳಿಸಿದೆ.
ಸತ್ಯ ಮತ್ತು ಅನು ನಾದೆಲ್ಲಾ ದಂಪತಿಯ ಪುತ್ರ ಸೆರೆಬ್ರಲ್ ಪಾಲ್ಸಿಯಿಂದ ಬಳಲುತ್ತಿದ್ದ ಝೈನ್ ನಾದೆಲ್ಲಾ ನಿಧನರಾಗಿದ್ದಾರೆ.

ಸೋಮವಾರ ಬೆಳಗ್ಗೆ ಝೈನ್ ನಾದೆಲ್ಲಾ ಅವರು ವಿಧಿವಶರಾಗಿರುವುದಾಗಿ ಸಾಫ್ಟ್ ವೇರ್ ತಯಾರಿಕಾ ಕಂಪನಿ ಮೈಕ್ರೋಸಾಫ್ಟ್ ತನ್ನ ಕಾರ್ಯನಿರ್ವಾಹಕ ಸಿಬಂದಿಗಳಿಗೆ ಇ-ಮೇಲ್ ಮೂಲಕ ವಿಷಯ ತಿಳಿಸಿರುವುದಾಗಿ ವರದಿ ತಿಳಿಸಿದೆ.
2014 ರಲ್ಲಿ ಮೈಕ್ರೋಸಾಫ್ಟ್ ಸಿಇಒ ಆಗಿ ಅಧಿಕಾರ ವಹಿಸಿಕೊಂಡ ನಂತರ, 54 ವರ್ಷದ ಸತ್ಯ ನಾಡೆಲ್ಲಾ ಅವರು ವಿಕಲಾಂಗ ಬಳಕೆದಾರರಿಗೆ ಉತ್ತಮ ಸೇವೆ ನೀಡಲು ಉತ್ಪನ್ನಗಳನ್ನು ವಿನ್ಯಾಸಗೊಳಿಸುವತ್ತ ಕಂಪನಿಯನ್ನು ಮುನ್ನಡೆಸಿದ್ದಾರೆ ಮತ್ತು ಅವರು ತಮ್ಮ ಮಗ ಜೈನ್ ಅನ್ನು ಬೆಳೆಸುವ ಮತ್ತು ಬೆಂಬಲಿಸುವ ಪಾಠಗಳ ಬಗ್ಗೆ ಉಲ್ಲೇಖಿಸಿದ್ದಾರೆ.

ಕಳೆದ ಒಂದು ವರ್ಷದಿಂದ ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಝೈನ್ ಅವರು ಸಂಗೀತ ಕ್ಷೇತ್ರದತ್ತ ಆಕರ್ಷಣೆಯಾಗಿದ್ದರು. ತಮ್ಮ ಸಂಗೀತದಿಂದ ಆಸ್ಪತ್ರೆ ಸಿಬ್ಬಂದಿಗಳಿಗೆ ಅಚ್ಚುಮೆಚ್ಚಿನ ವ್ಯಕ್ತಿಯಾಗಿದ್ದ ಅವರು ಇಂದು ಇಹಲೋಕ ತ್ಯಜಿಸಿರುವುದು ನೋವು ತರಿಸಿದೆ ಎಂದು ಪೆಡಿಯಾಟ್ರಿಕ್ ನ್ಯೂರೋಸೈನ್ಸ್ ಆಸ್ಪತ್ರೆಯ ಜೆಫ್ ಸ್ಪೇರಿಂಗ್ ಸ್ಮರಿಸಿಕೊಂಡಿದ್ದಾರೆ.
ಭಾರತೀಯ ಮೂಲದ ಸತ್ಯ ನಾದೆಲ್ಲಾ ಅವರು 2014ರಲ್ಲಿ ಮೈಕ್ರೋಸಾಫ್ಟ್ ಕಂಪನಿಯ ನೂತನ ಸಿಇಒ ಆಗಿ ನೇಮಕಗೊಂಡಿದ್ದರು. ನಾದೆಲ್ಲಾ ಅವರು ಮೈಕ್ರೋಸಾಫ್ಟ್ ಪ್ರವೇಶಿಸಿದ ನಂತರ ಮೊಬೈಲ್ ಫೋನ್ ಮತ್ತು ಇಂಟರ್ನೆಟ್ ಸರ್ಚ್ ಮಾರುಕಟ್ಟೆಯಲ್ಲಿ ಮತ್ತೆ ವಹಿವಾಟು ಚೇತರಿಸಿಕೊಂಡಿತ್ತು.
ಮೈಕ್ರೋಸಾಫ್ಟ್ ನ ಸ್ಟೀವ್‌ ಬಾಲ್ಮರ್‌ ಅವರಿಂದ ಸಿಇಒ ಹುದ್ದೆ ಸ್ವೀಕರಿಸಿದ ಇವರು, ಈಗಲೂ ಅದೇ ಹುದ್ದೆಯಲ್ಲಿ ಮುಂದುವರಿದಿದ್ದಾರೆ.

ಓದಿರಿ :-   ಕೃಷ್ಣ ಜನ್ಮಭೂಮಿ ಪ್ರಕರಣ: ಮಸೀದಿ ತೆರವು ಕೋರಿದ್ದ ಅರ್ಜಿ ವಿಚಾರಣೆ ಯೋಗ್ಯ ಎಂದ ಮಥುರಾ ಜಿಲ್ಲಾ ನ್ಯಾಯಾಲಯ

 

 

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 3

advertisement

ನಿಮ್ಮ ಕಾಮೆಂಟ್ ಬರೆಯಿರಿ