ಉಕ್ರೇನ್ ಮೇಲೆ ರಷ್ಯಾ ವೈಮಾನಿಕ ದಾಳಿ: ಖಾರ್ಕಿವ್​​ನಲ್ಲಿ ಹಾವೇರಿಯ ವಿದ್ಯಾರ್ಥಿ ಸಾವು

ಕೀವ್​(ಉಕ್ರೇನ್​): ಉಕ್ರೇನ್​ನ ಖಾರ್ಕಿವ್​ ನಗರದ ಮೇಲೆ ಇಂದು ಬೆಳಗ್ಗೆ ರಷ್ಯಾ ಸೇನೆ ನಡೆಸಿರುವ ವೈಮಾನಿಕ ಶೆಲ್​ ದಾಳಿಯಲ್ಲಿ ಕರ್ನಾಟಕದ ವಿದ್ಯಾರ್ಥಿ ಸಾವಿಗೀಡಾಗಿದ್ದಾನೆ. ಮೃತಪಟ್ಟಿರುವ ವಿದ್ಯಾರ್ಥಿಯನ್ನು ಹಾವೇರಿ ಜಿಲ್ಲೆಯ ನಿವಾಸಿ ನವೀನ್​ ಎಂದು ಗುರುತಿಸಲಾಗಿದೆ.
ವಿದ್ಯಾರ್ಥಿ ಖಾರ್ಕಿವ್​ನಲ್ಲಿ ವ್ಯಾಸಂಗ ಮಾಡುತ್ತಿದ್ದನೆಂದು ತಿಳಿದು ಬಂದಿದೆ. ಇಂದು ಬೆಳಗ್ಗೆ ತಿಂಡಿ ಮಾಡಲು ಹೊರಗಡೆ ಹೋಗಿದ್ದ ವೇಳೆ ರಷ್ಯಾ ರಾಕೆಟ್‌ ದಾಳಿ ನಡೆಸಿದ್ದು, ಅದು ನವೀನ್‌ ನಿಂತಿದ್ದ ಕಟ್ಟಡಕ್ಕೆ ಬಡಿದು ಈ ದುರ್ಘಟನೆ ನಡೆದಿದೆ. ಕಾರ್ಖೀವ್​​ನ ಕಾಲಮಾನದ ಪ್ರಕಾರ ಮುಂಜಾನೆ 7ಗಂಟೆ ಹೊತ್ತಿಗೆ ಎನ್ನಲಾಗಿದೆ.
ಖಾರ್ಕಿವ್‌ನಲ್ಲಿ ಕರ್ನಾಟಕದ ವಿದ್ಯಾರ್ಥಿ ಸಾವಿನ ವಿಚಾರವನ್ನು ಭಾರತೀಯ ವಿದೇಶಾಂಗ ಇಲಾಖೆ ಟ್ವೀಟ್ ಮೂಲಕ ಸ್ಪಷ್ಟಪಡಿಸಿದೆ.’ಉಕ್ರೇನ್​​ ಖಾರ್ಕಿವ್​​ನಲ್ಲಿ ಬೆಳಗ್ಗೆ ನಡೆದ ಶೆಲ್ ದಾಳಿಯ ವೇಳೆ ಭಾರತೀಯ ವಿದ್ಯಾರ್ಥಿವೊರ್ವ ಸಾವಿಗೀಡಾಗಿರುವುದು ಅತ್ಯಂತ ದುಃಖದ ವಿಚಾರ. ವಿದ್ಯಾರ್ಥಿಯ ಪೋಷಕರ ಜೊತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸಂಪರ್ಕದಲ್ಲಿದೆ’ ಎಂದು ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್​ ಬಗ್ಚಿ ಮಾಹಿತಿ ನೀಡಿದ್ದಾರೆ.

 

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement