8 ಲಕ್ಷ ರೂ.ಗಳ ಬೆಲೆ ಬಾಳುವ ಟಗರು ‘ಲವ್ಲಿಬಾಯ್ ಹೃದಯಾಘಾತದಿಂದ ಸಾವು

ಬಾಗಲಕೋಟೆ: 8 ಲಕ್ಷ ರೂ.ಗಳ ವರೆಗೆ ಹೊಂದಿದ್ದ “ಲವ್ಲಿ ಬಾಯ್” ಎಂಬ ಹೆಸರಿನ ಟಗರು ಹೃದಯಾಘಾತದಿಂದ ಮೃತಪಟ್ಟಿದೆ.
ಮೂಲತಃ ಬಾಗಲಕೋಟೆ ತಾಲೂಕಿನ ಸೀಗಿಕೇರಿ ಗ್ರಾಮದ ನಾಟಕ ಎಚ್.ಎನ್. ಸೇಬಣ್ಣವರ ಅವರಿಗೆ ಈ ಟಗರು ಸೇರಿದ್ದು, ಇದು ಕಾಳಗಕ್ಕೆ ಹೆಸರುವಾಸಿಯಾಗಿತ್ತು. ಹೀಗಾಗಿ ಈ ಟಗರಿಗೆ 8 ಲಕ್ಷ ರೂ.ಗಳ ವರೆಗೆ ಬೇಡಿಕೆ ಇತ್ತು.

ಅಂದಾಜು ಮುನ್ನೂರಕ್ಕೂ ಹೆಚ್ಚು ಟಗರುಗಳನ್ನು ಡಿಚ್ಚಿ ಹೊಡೆಯುವ ಮೂಲಕ ಸೋಲಿಸಿದ್ದ ಲವ್ಲಿ ಬಾಯ್ ಟಗರು, ಚಿನ್ನ, ಬೆಳ್ಳಿ, ನಗದು, ಬೈಕ್, ಹೋರಿ ಸೇರಿ ಹತ್ತು ಲಕ್ಷ ರೂ. ಗಳ ವರೆಗೆ ಬಹುಮಾನ ಗೆದ್ದಿತ್ತು ಎಂದು ಮಾಹಿತಿ ಇದೆ. ಹಿಂದೆ ಈ ಟಗರನ್ನು ಯಾರೋ ಒಬ್ಬರು 8 ಲಕ್ಷ ರೂ.ಗೆ ಕೇಳಿದ್ದರು. ಆದರೆ ಟಗರಿನ ಮಾಲೀಕ ಶೇಬಣ್ಣವರ ಅವರು ತನ್ನ ಲಕ್ಕಿ ಟಗರನ್ನು ಮಾತ್ರ ಮಾರಾಟ ಮಾಡಿರಲಿಲ್ಲ.
ಮೃತ 6 ವರ್ಷದ ಲವ್ಲಿಬಾಯ್ ದೇಹದ ಮೇಲೆ ಹೂ ಮಾಲೆ, ಹಣೆಗೆ ಬೆಳ್ಳಿ ಖಡ್ಗ, ದೇಹದ ಭಾಗಕ್ಕೆ ಭಂಡಾರ ಬಳಿದು, ಪ್ರಶಸ್ತಿಗಳನ್ನು ಟಗರಿನ ಪಾರ್ಥಿವ ಶರೀರದ ಮುಂದೆ ಇಟ್ಟು ಗ್ರಾಮದಲ್ಲಿ ಶ್ರದ್ಧಾಂಜಲಿಗೆ ವ್ಯವಸ್ಥೆ ಮಾಡಲಾಗಿದೆ. ಅಭಿಮಾನಿಗಳ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಅಂತಿಮ ದರ್ಶನ ಪಡೆಯಲು ಸುತ್ತಮುತ್ತಲ ಜನರು ಬಂದು ಟಗರಿಗೆ ಅಂತಿಮ ವಿದಾಯ ಹೇಳುತ್ತಿದ್ದಾರೆ.

ಪ್ರಮುಖ ಸುದ್ದಿ :-   ಅಶ್ಲೀಲ‌ ವೀಡಿಯೊ ಇಟ್ಟುಕೊಳ್ಳುವುದು ಅಪರಾಧ, ಡಿಲೀಟ್‌ ಮಾಡಿ : ಎಸ್‌ಐಟಿ ಮುಖ್ಯಸ್ಥರು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement