ಜಿಇಇ ಮೇನ್‌ ಪರೀಕ್ಷೆ-2022ರ ವೇಳಾಪಟ್ಟಿ ಪ್ರಕಟ, ನೋಂದಣಿಗಳು ಆರಂಭ

ನವದೆಹಲಿ: ಜೆಇಇ ಮುಖ್ಯ ಪರೀಕ್ಷೆಯ ಮೊದಲ ಹಂತದ ಪರೀಕ್ಷೆ ಏಪ್ರಿಲ್ 16 ಮತ್ತು 17ರಂದು ನಡೆಯಲಿದೆ. ಹಾಗೂ ಎರಡನೇ ಹಂತದ ಪರೀಕ್ಷೆ ಮೇ 24 ರಿಂದ 29ರ ವರೆಗೆ ನಡೆಸಲಾಗುತ್ತದೆ ಎಂಬುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ತಿಳಿಸಿದೆ.
ಜೆಇಇ ಮುಖ್ಯ ಪರೀಕ್ಷೆ 2022 ರ ( JEE-Main 2022 ) ಅರ್ಜಿಗಳ ಸಲ್ಲಿಕೆ ಮಾರ್ಚ್ 1ರಿಂದ ಆರಂಭವಾಗಿದ್ದು, ಮೊದಲ ಸೆಷನ್ ಗೆ ಅರ್ಜಿ ನಮೂನೆಯನ್ನು ಭರ್ತಿ ಮಾಡಲು ಕೊನೆಯ ದಿನಾಂಕ ಮಾರ್ಚ್ 31 ಆಗಿದೆ ಎಂದು ಹೇಳಿದೆ. ಹಾಗೂ jeemain.nta.nic.in ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಜೆಇಇ ಮುಖ್ಯ ಸೆಷನ್ ಏಪ್ರಿಲ್ 16, 17, 18, 19, 20, 21 ರಂದು ನಡೆಯಲಿದೆ. ಜೆಇಇ ಮುಖ್ಯ ಸೆಷನ್-2 ಮೇ 24, 25, 26, 27, 28, ಮತ್ತು 29 ರಂದು ನಡೆಯಲಿದೆ. ನೋಂದಣಿ ಪ್ರಕ್ರಿಯೆಯು jeemain.nta.nic.in ನಲ್ಲಿ ತೆರೆದಿರುತ್ತದೆ.
ಜೆಇಇ-ಮೇನ್ 2022 ರ ಪರೀಕ್ಷೆಗಳು ಹಿಂದಿ, ಇಂಗ್ಲಿಷ್ ಮತ್ತು ಗುಜರಾತಿ ಜೊತೆಗೆ ಅಸ್ಸಾಮಿ, ಬಂಗಾಳಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು, ಉರ್ದುಗಳಲ್ಲಿ ನಡೆಯಲಿದೆ. ಜೆಇಇ ಪ್ರವೇಶ ಪರೀಕ್ಷೆ-ಮುಖ್ಯ ಪರೀಕ್ಷೆಯು ಎರಡು ಪತ್ರಿಕೆಗಳನ್ನು ಒಳಗೊಂಡಿದೆ.

ಓದಿರಿ :-   ಪೆಟ್ರೋಲ್ ಲೀಟರ್​ಗೆ 9.5 ರೂ.ಗಳು, ಡೀಸೆಲ್ 7 ರೂ.ಗಳಷ್ಟು ಇಳಿಕೆ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ

 

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

advertisement

ನಿಮ್ಮ ಕಾಮೆಂಟ್ ಬರೆಯಿರಿ