ಉಕ್ರೇನ್‌ನಿಂದ ಭಾರತೀಯರ ಸುರಕ್ಷಿತ ಸ್ಥಳಾಂತರಕ್ಕೆ ಸುರಕ್ಷಾ ಕಾರಿಡಾರ್‌ ಸ್ಥಾಪನೆ, ಕರ್ನಾಟಕದ ವಿದ್ಯಾರ್ಥಿಯ ಸಾವಿನ ತನಿಖೆ: ರಷ್ಯಾ ರಾಯಭಾರಿ

ನವದೆಹಲಿ: ರಷ್ಯಾ-ಉಕ್ರೇನ್ ಸಂಘರ್ಷ ವಲಯದಿಂದ ಪಾರಾಗಲು ಭಾರತೀಯ ಪ್ರಜೆಗಳಿಗೆ ಸುರಕ್ಷಿತ ಮಾರ್ಗವನ್ನು ನೀಡಲಾಗುವುದು ಎಂದು ರಷ್ಯಾದ ರಾಯಭಾರಿ-ನಿಯೋಜಿತ ಡೆನಿಸ್ ಅಲಿಪೋವ್ ಬುಧವಾರ ಭರವಸೆ ನೀಡಿದ್ದಾರೆ.
ಮಂಗಳವಾರ ಖಾರ್ಕಿವ್‌ನಲ್ಲಿ ನಿಧನರಾದ ಭಾರತೀಯ ವಿದ್ಯಾರ್ಥಿ ನವೀನ್‌ಗೆ ಸಂತಾಪ ಸೂಚಿಸುವ ಮೂಲಕ ಡೆನಿಸ್ ಅಲಿಪೋವ್ ತಮ್ಮ ಪತ್ರಿಕಾಗೋಷ್ಠಿಯನ್ನು ಪ್ರಾರಂಭಿಸಿದರು. ನವೀನ್ ಸಾವಿನ ಬಗ್ಗೆ ತನಿಖೆ ನಡೆಸಲಾಗುವುದು ಎಂದು ರಷ್ಯಾ ರಾಯಭಾರಿ ಭರವಸೆ ನೀಡಿದ್ದಾರೆ. ಅಲ್ಲದೆ, ಪೂರ್ವ ಉಕ್ರೇನ್‌ನ ಸಂಘರ್ಷ ವಲಯಗಳಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು “ಮಾನವೀಯ ಕಾರಿಡಾರ್‌ಗಳನ್ನು” ಸ್ಥಾಪಿಸಲು ರಷ್ಯಾ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಉಕ್ರೇನ್‌ನ ಖಾರ್ಕಿವ್ ನಗರದಲ್ಲಿ 21 ವರ್ಷದ ಭಾರತೀಯ ವೈದ್ಯಕೀಯ ವಿದ್ಯಾರ್ಥಿಯ ಸಾವಿನ ಬಗ್ಗೆ ರಷ್ಯಾ ತನಿಖೆ ನಡೆಸಲಿದೆ. ದುರಂತದ ಬಗ್ಗೆ ನವೀನ್ ಶೇಖರಪ್ಪ ಜ್ಞಾನಗೌಡರ ಕುಟುಂಬಕ್ಕೆ ಮತ್ತು ಇಡೀ ಭಾರತಕ್ಕೆ ನಮ್ಮ ಸಹಾನುಭೂತಿಯನ್ನು ವ್ಯಕ್ತಪಡಿಸಲು ನಾನು ಬಯಸುತ್ತೇನೆ ಎಂದು ಅಲಿಪೋವ್ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

ಖಾರ್ಕಿವ್ ಮತ್ತು ಇತರ ಸಂಘರ್ಷ ವಲಯಗಳಲ್ಲಿರುವ ನಗರಗಳಲ್ಲಿ ಇನ್ನೂ ಇರುವ ಭಾರತೀಯ ಪ್ರಜೆಗಳಿಗೆ ತುರ್ತು ಸುರಕ್ಷಿತ ಮಾರ್ಗಕ್ಕಾಗಿ ಭಾರತದ ಬೇಡಿಕೆಯನ್ನು ಪುನರುಚ್ಚರಿಸಲು ಸರ್ಕಾರವು ರಷ್ಯಾ ಮತ್ತು ಉಕ್ರೇನ್‌ನ ರಾಯಭಾರಿಗಳೊಂದಿಗೆ ಸಂಪರ್ಕದಲ್ಲಿದೆ ಎಂದು ವಕ್ತಾರ ಅರಿಂದಮ್‌ ಬಾಗ್ಚಿ ವಕ್ತಾರರು ಹೇಳಿದ್ದಾರೆ. “ಇದೇ ರೀತಿಯ ಕ್ರಮವನ್ನು ರಷ್ಯಾ ಮತ್ತು ಉಕ್ರೇನ್‌ನಲ್ಲಿರುವ ನಮ್ಮ ರಾಯಭಾರಿಗಳು ಸಹ ಕೈಗೊಳ್ಳುತ್ತಿದ್ದಾರೆ” ಎಂದು ಅವರು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ನವೀನ್ ಕುಟುಂಬದೊಂದಿಗೆ ಮಾತುಕತೆ ನಡೆಸಿ ಸಾಂತ್ವನ ಹೇಳಿದರು. ನವೀನ್ ನಿಧನಕ್ಕೆ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ.

ಪ್ರಮುಖ ಸುದ್ದಿ :-   ವಾಟ್ಸಾಪ್ ಮೂಲಕ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ವ್ಯಕ್ತಿಯ ಬಂಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement