ಫಕೀರ ದಿಂಗಾಲೇಶ್ವರ ಸ್ವಾಮೀಜಿ ರಾಷ್ಟ್ರಮಟ್ಟದಲ್ಲಿ ಶಿರಹಟ್ಟಿ ಫಕೀರೇಶ್ವರ ಮಠದ ಕೀರ್ತಿ ಬೆಳಗಲಿ:ಎಚ್‌ ಕೆ ಪಾಟೀಲ

ಗದಗ: ಶಿರಹಟ್ಟಿ ಫಕೀರೇಶ್ವರ ಮಠದ ಪರಂಪರೆಯಲ್ಲಿ ಸಾಗಿ ಉತ್ತರೋತ್ತರ ಅಭಿವೃದ್ದಿ ಕಾರ್ಯಗಳ ಮೂಲಕ ಶ್ರೀಮಠದ ಕೀರ್ತಿಯನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ನಾಡಿನ ಜನತೆಯ ಚಿತ್ತ ಶ್ರೀಮಠದ ಉತ್ತರಾಧಿಕಾರಿ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಅವರತ್ತ ನೆಟ್ಟಿದೆ ಎಂದು ಶಾಸಕ ಹಾಗೂ ಮಾಜಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಜಿಲ್ಲೆಯ ಶಿರಹಟ್ಟಿ ತಾಲೂಕು ಕೇಂದ್ರದ ಫಕೀರೇಶ್ವರ ಸಂಸ್ಥಾನಮಠಕ್ಕೆ ಬುಧವಾರ ಭೇಟಿ ನೀಡಿ ಶ್ರೀಮಠದ ಉಭಯ ಶ್ರೀಗಳನ್ನು ಸನ್ಮಾನಿಸಿ ಮಾತನಾಡಿದ ಅವರು, ತಮ್ಮ ವಾಕ್ಚಾತುರ್ಯದ ಮೂಲಕ ರಾಜ್ಯದ ಗಮನ ಸೆಳೆದಿರುವ ಬಾಲೇಹೊಸೂರ ಗ್ರಾಮದ ಮಠದ ಚಿತ್ರಣ ಬದಲಿಸಿರುವ ಫಕೀರದಿಂಗಾಲೇಶ್ವರ ಸ್ವಾಮೀಜಿ ಪ್ರಸ್ತುತ ಭವ್ಯ ಪರಂಪರೆಯ ದೊಡ್ಡ ಮಠದ ಉತ್ತರಾಧಿಕಾರಿಯಾಗಿ ಉನ್ನತ ಸ್ಥಾನ ಅಲಂಕರಿಸಿದ್ದಾರೆ. ಇನ್ನು ಮುಂದೆ ಶಿರಹಟ್ಟಿ ಮಠ ರಾಜ್ಯದ ಗಮನ ಸೆಳೆಯಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಜಾತಿಗೊಂದು ಮಠ, ಜಾತಿಗೊಬ್ಬ ಸ್ವಾಮೀಜಿಗಳು ಇರುವ ಇಂದಿನ ಕಾಲದಲ್ಲಿ ಜಾತಿ ವ್ಯವಸ್ಥೆಯನ್ನು ಮೀರಿ ಸರ್ವ ಜನಾಂಗದ ಆಸ್ತಿಯಾಗಿ ಕೋಮು ಸಾಮರಸ್ಯ ಕಾಪಾಡಿಕೊಂಡು ಇತಿಹಾಸ ಸೃಷ್ಟಿಸಿರುವ ಶಿರಹಟ್ಟಿಯ ಫಕೀರೇಶ್ವರ ಸಂಸ್ಥಾನಮಠ ರಾಜ್ಯದಲ್ಲಿಯೇ ಐತಿಹಾಸಿಕ ಧಾರ್ಮಿಕ ಕೇಂದ್ರವಾಗಿದೆ.
ಅಧಿಕಾರ ತ್ಯಾಗ ಮನೋಭಾವವುಳ್ಳ ಮಠಾಧೀಶರು ಸಿಗುವುದು ಅಪರೂಪ. ೧೩ನೇ ಪೀಠಾಧಿಪತಿ ಜಗದ್ಗುರು ಫಕೀರಸಿದ್ದರಾಮ ಶ್ರೀಗಳು ಭಕ್ತರ ಸಹಕಾರ, ಸಹಾಯದಿಂದ ಮಠದಲ್ಲಿ ಅಭಿವೃದ್ದಿ ಕಾರ್ಯಗಳ ಜೊತೆಗೆ ಮಠವನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿ ಮಾಡಿದ್ದಾರೆ. ತಮ್ಮ ಸಂಕಲ್ಪ, ಭಕ್ತರ ಆಶಯದಂತೆ ಫಕೀರ ದಿಂಗಾಲೇಶ್ವರರನ್ನು ಮಠದ ಉತ್ತರಾಧಿಕಾರಿಯಾಗಿ ನೇಮಕ ಮಾಡಿದ್ದಾರೆ ಎಂದರು.
ಜಗದ್ಗುರು ಫಕೀರ ಸಿದ್ದರಾಮಶ್ರೀಗಳು ಮಾತನಾಡಿ, ರೈಟ್ ಮ್ಯಾನ್ ಇನ್ ಯೇ ರೈಟ್ ಪ್ಲೇಸ್ ಎಂಬಂತೆ ಸರ್ವರೂ ಒಪ್ಪುವ ರೀತಿಯಲ್ಲಿ ಸಮರ್ಥ ವ್ಯಕ್ತಿಯ ಕೈಗೆ ಮಠ ಒಪ್ಪಿಸಿದ್ದು, ನನ್ನ ಸಂಕಲ್ಪದಂತೆ ಫಕೀರ ದಿಂಗಾಲೇಶ್ವರರು ಮಠದ ಭವ್ಯ ಪರಂಪರೆ ಬೆಳಗಿಸಲಿದ್ದಾರೆ ಎಂದರು.

ಪ್ರಮುಖ ಸುದ್ದಿ :-   ಪ್ರಜ್ವಲ್‌ ರೇವಣ್ಣ ಪ್ರಕರಣ : ದೇವೇಗೌಡ, ಎಚ್‌ಡಿಕೆಯನ್ನು ತಪ್ಪಾಗಿ ಬಿಂಬಿಸಿ ಸುದ್ದಿ ಪ್ರಸಾರ ಮಾಡದಂತೆ 89 ಮಾಧ್ಯಮಗಳ ವಿರುದ್ಧ ಪ್ರತಿಬಂಧಕಾದೇಶ

ಶಿರಹಟ್ಟಿ ಫಕೀರೇಶ್ವರ ಮಠದ ಉತ್ತರಾಧಿಕಾರಿ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ, ಬಸವೇಶ್ವರರಾದಿಯಾಗಿ ಶಿವ ಶರಣರೆಲ್ಲ ಹೇಗೆ ನುಡಿದಂತೆ ನಡೆದರೋ ಅದೇ ತತ್ವದಡಿ ನಡೆದು ತಾವು ನುಡಿದ ನುಡಿ ಪಾಲಿಸಿ ಭಕ್ತರ ಜನರ ವಿಶ್ವಾಸಕ್ಕೆ ಪಾತ್ರನಾಗುವೆ ಎಂದರು.
ಅಗಡಿ ಅಕ್ಕಿಮಠದ ಗುರುಲಿಂಗ ಸ್ವಾಮೀಜಿ, ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ ಸಿದ್ದಲಿಂಗೇಶ ಪಾಟೀಲ, ಕಾಂಗ್ರೆಸ್ ಮುಖಂಡರಾದ ಪ್ರಭು ಬುರಬುರೆ, ಫಾರೂಕ್‌ ಹುಬ್ಬಳ್ಳಿ, ಅಪ್ಪಣ್ಣ ಇನಾಮತಿ, ವೈ.ಎಸ್. ಪಾಟೀಲ, ಹುಮಾಯೂನ್ ಮಾಗಡಿ, ಸಿ.ಸಿ. ನೂರಶೆಟ್ಟರ, ಎಂ.ಡಿ. ಬಟ್ಟೂರ, ಷಣ್ಮುಕಪ್ಪ ಬಡ್ನಿ, ಗಿರೀಶ ಡಬಾಲಿ, ಮಹೇಂದ್ರ ಮುಂಡವಾಡ, ಅಪ್ಪಣ್ಣ ಇನಾಮತಿ, ಸಿದ್ದು ಪಾಟೀಲ, ಡಾ. ಸುರೇಶ ಡಬಾಲಿ, ಚೆನ್ನಪ್ಪ ಜಗಲಿ, ಇಸಾಕ ಆದ್ರಳ್ಳಿ, ಹೊನ್ನಪ್ಪ ಶಿರಹಟ್ಟಿ, ಮಹಾಂತೇಶ ದಶಮನಿ ಮೊದಲಾದವರಿದ್ದರು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement