ಉಕ್ರೇನ್‌-ರಷ್ಯಾ ಬಿಕ್ಕಟ್ಟು: ಭಾರತೀಯರನ್ನು ತೆರವುಗೊಳಿಸುವ ಮನವಿ ಸಂಬಂಧ ಅಟಾರ್ನಿ ಜನರಲ್ ಸಲಹೆ ಕೋರಿದ ಸುಪ್ರೀಂ ಕೋರ್ಟ್‌

ನವದೆಹಲಿ: ರಷ್ಯಾ ಹಾಗೂ ಉಕ್ರೇನ್‌ ಯುದ್ಧ ತಡೆಯುವ ಬಗ್ಗೆ ತಾನು ಹೇಗೆ ನಿರ್ದೇಶನ ನೀಡಬಹುದು ಎಂಬ ಬಗ್ಗೆ ಸುಪ್ರೀಂ ಕೋರ್ಟ್‌ ಆಲೋಚನೆಗೀಡಾದ ಪ್ರಸಂಗ ಗುರುವಾರ ನಡೆಯಿತು.
ಯುದ್ಧಪೀಡಿತ ಯುಕ್ರೇನ್‌ನಲ್ಲಿರುವ ಭಾರತೀಯರ ಶೀಘ್ರ ತೆರವಿಗೆ ಕೋರಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ವೇಳೆ ಹಿರಿಯ ವಕೀಲ ಎ.ಎಂ. ಧರ್ ಅವರು ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಅವರ ಮುಂದೆ ಪ್ರಕರಣವನ್ನು ಉಲ್ಲೇಖಿಸಿದರು. “ಉಕ್ರೇನ್‌ ಗಡಿಯಲ್ಲಿ (ರೊಮೆನಿಯಾ) ಸಿಲುಕಿರುವ ಭಾರತೀಯರನ್ನು ತೆರವುಗೊಳಿಸುವ ಸಂಬಂಧ ಸಲ್ಲಿಸಲಾಗಿರುವ ಹೊಸ ಮನವಿ ಇದು. ಅಲ್ಲಿ ಸಿಲುಕಿರುವ ಬಹುತೇಕರು ಹೆಣ್ಣು ಮಕ್ಕಳು,” ಎಂದು ಧರ್‌ ಗಮನಸೆಳೆದರು.

ಆಗ ಸಿಜೆಐ ರಮಣ ಅವರು, ನಾವು ಯುದ್ಧವನ್ನು ನಿಲ್ಲಿಸುವಂತೆ ನಿರ್ದೇಶನ ನೀಡಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಧರ್‌ ಅವರು ಮುಂದುವರೆದು, “ಭಾರತೀಯರು ಅಲ್ಲಿ ಹೆಪ್ಪುಗಟ್ಟಿಸುವ ಚಳಿಯಲ್ಲಿದ್ದಾರೆ. ಅವರಲ್ಲಿ ವಿದ್ಯಾರ್ಥಿಗಳಿದ್ದಾರೆ, ಬಹುತೇಕರು ಹೆಣ್ಣು ಮಕ್ಕಳು. ಕಳೆದ ಆರು ದಿನಗಳಿಂದ ಅಲ್ಲಿಯೇ ಸಿಲುಕಿದ್ದಾರೆ ಎಂದು ಎಂದು ಪರಿಸ್ಥಿತಿಯ ಬಗ್ಗೆ ವಿವರಿಸಿದರು.
ಆಗ ಸಿಜೆಐ ಅವರು ವಕೀಲರಿಗೆ ಕಾಯವಂತೆ ತಿಳಿಸಿ, ಈ ಕುರಿತು ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್‌ ಅವರ ಸಲಹೆ ಕೋರುವುದಾಗಿ ಹೇಳಿದರು. “ನಮಗೆ ಸಂಪೂರ್ಣ ಅನುಕಂಪವಿದೆ. ಈ ವಿಚಾರದಲ್ಲಿ ನ್ಯಾಯಾಲಯಕ್ಕೆ ಸಹಕರಿಸಲು ನಾವು ಅಟಾರ್ನಿ ಜನರಲ್‌ ಅವರಿಗೆ ತಿಳಿಸುತ್ತೇವೆ” ಎಂದರು.

ಪ್ರಮುಖ ಸುದ್ದಿ :-   ಶಿಂಧೆ ಬಣದ ಶಿವಸೇನೆ ಸೇರಿದ ಬಾಲಿವುಡ್‌ ನಟ ಗೋವಿಂದ : 14 ವರ್ಷಗಳ ವನವಾಸದ ನಂತರ ರಾಜಕೀಯಕ್ಕೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement