16 ತಾಸಿನಲ್ಲಿ 107 ನೇತ್ರ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರಿಂದ ಹೊಸ ದಾಖಲೆ ನಿರ್ಮಾಣ..!

ಪ್ರಯಾಗರಾಜ್: ಪ್ರಾದೇಶಿಕ ನೇತ್ರವಿಜ್ಞಾನ ಸಂಸ್ಥೆಯ ನಿರ್ದೇಶಕ ಮತ್ತು ಪ್ರಯಾಗ್‌ರಾಜ್‌ನಲ್ಲಿರುವ ಎಂಎಲ್‌ಎನ್‌ (MLN) ವೈದ್ಯಕೀಯ ಕಾಲೇಜಿನ (MLNMC) ಪ್ರಾಂಶುಪಾಲರಾದ ಡಾ.ಎಸ್.ಪಿ.ಸಿಂಗ್ ಅವರು 16 ತಾಸುಗಳ ಅವಧಿಯಲ್ಲಿ ಇಂಟ್ರಾಕ್ಯುಲರ್ ಲೆನ್ಸ್ (IOL) ಇಂಪ್ಲಾಂಟ್‌ನೊಂದಿಗೆ 107 ಫಾಕೋಎಮಲ್ಸಿಫಿಕೇಶನ್ ಸರ್ಜರಿಗಳನ್ನು ಉಚಿತವಾಗಿ ನಡೆಸುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ.
ಫೆಬ್ರವರಿ 25 ರಂದು ನಿರಂತರವಾಗಿ 16.5 ಗಂಟೆಗಳ ಕಾಲ ಅಂದರೆ ಬೆಳಗ್ಗೆ 6 ರಿಂದ ರಾತ್ರಿ 10.30ರ ನಡುವೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಎಲ್ಲಾ ರೋಗಿಗಳು ಒಂದು ವಾರದ ವೀಕ್ಷಣೆಯ ನಂತರ ಈಗ ಉತ್ತಮವಾಗಿದ್ದಾರೆ” ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಒಂದೇ ಬಾರಿಗೆ ಹಲವಾರು ಶಸ್ತ್ರಚಿಕಿತ್ಸೆಗಳನ್ನು ನಡೆಸಿದ್ದಕ್ಕಾಗಿ ನನಗೆ ಸಂತೋಷವಾಗಿದೆ ಮತ್ತು ಇದು ಸಾರ್ವಜನಿಕ ಕಲ್ಯಾಣಕ್ಕಾಗಿ ಕೆಲಸ ಮಾಡಲು ಹೆಚ್ಚಿನ ಕಿರಿಯ ಶಸ್ತ್ರಚಿಕಿತ್ಸಕರನ್ನು ಪ್ರೇರೇಪಿಸುತ್ತದೆ ಎಂದು ಭಾವಿಸುತ್ತೇನೆ ಎಂದ ವೈದ್ಯರು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ಗೆ ಪತ್ರ ಬರೆದು, ಅಗತ್ಯವಿರುವ ಪುರಾವೆಗಳೊಂದಿಗೆ ಸಾಧನೆಯ ಬಗ್ಗೆ ತಿಳಿಸುವುದಾಗಿ ಹೇಳಿದ್ದಾರೆ.

ಇದಕ್ಕೂ ಮೊದಲು, ನವ ದೆಹಲಿಯ ಸೇನಾ ಆಸ್ಪತ್ರೆಯ ಸಂಶೋಧನೆ ಮತ್ತು ರೆಫರಲ್‌ನ ಆಗಿನ ಬ್ರಿಗೇಡಿಯರ್ (ಡಾ) ಜೆಕೆಎಸ್ ಪರಿಹಾರ್ ಅವರು ಅಕ್ಟೋಬರ್ 2011 ರಲ್ಲಿ ಪೂರ್ವ ಲಡಾಖ್‌ನಲ್ಲಿ 34 ಫಾಕೋಎಮಲ್ಸಿಫಿಕೇಶನ್ ಶಸ್ತ್ರಚಿಕಿತ್ಸೆಗಳನ್ನು ನಡೆಸಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಗಳಿಸಿದ್ದರು.
ಮಾರ್ಚ್ 5, 2001 ರಂದು, ಸಿಂಗ್ ಅವರು 11 ಗಂಟೆಗಳಲ್ಲಿ 81 ಶಸ್ತ್ರ ಚಿಕಿತ್ಸೆ ಪ್ರಕ್ರಿಯೆಗಳನ್ನು ಒಂದೇ ಬಾರಿಗೆ ನಡೆಸುವ ಮೂಲಕ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ನೋಂದಾಯಿಸಿಕೊಂಡಿದ್ದರು.

ಪ್ರಮುಖ ಸುದ್ದಿ :-   ಇವರು ಭಾರತದ ಅತ್ಯಂತ ಶ್ರೀಮಂತ ಅಭ್ಯರ್ಥಿ : ತೆಲುಗು ದೇಶಂ ಪಕ್ಷದ ಇವರ ಆಸ್ತಿ 5,785 ಕೋಟಿ ರೂಪಾಯಿ...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement