ಉಕ್ರೇನ್‌-ರಷ್ಯಾ ಯುದ್ಧ: ಉಕ್ರೇನ್‌ನ ಚೆರ್ನಿಹಿವ್ ನಗರದ ಮೇಲೆ ರಷ್ಯಾದ ವೈಮಾನಿಕ ದಾಳಿ: ಸಾವಿನ ಸಂಖ್ಯೆ 47ಕ್ಕೆ ಏರಿಕೆ

ಗುರುವಾರ ಉಕ್ರೇನಿಯನ್ ನಗರದ ಚೆರ್ನಿಹಿವ್‌ನ ವಸತಿ ಪ್ರದೇಶಗಳ ಮೇಲೆ ರಷ್ಯಾದ ವೈಮಾನಿಕ ದಾಳಿಯಲ್ಲಿ ಈವರೆಗೆ ನಲವತ್ತೇಳು ಜನರು ಮೃತಪಟ್ಟಿದ್ದಾರೆ ಎಂದು ಪ್ರಾದೇಶಿಕ ಅಧಿಕಾರಿಗಳನ್ನು ಉಲ್ಲೇಖಿಸಿ ರಾಯಿಟರ್ಸ್ ಶುಕ್ರವಾರ ವರದಿ ಮಾಡಿದೆ.
ಸ್ಥಳೀಯ ತುರ್ತು ಸೇವೆಗಳ ಪ್ರಕಾರ, ಭಾರೀ ಶೆಲ್ ದಾಳಿಯಿಂದಾಗಿ ಗುರುವಾರ ರಕ್ಷಣಾ ಕಾರ್ಯವನ್ನು ಸ್ಥಗಿತಗೊಳಿಸಲಾಯಿತು.
ಚೆರ್ನಿಹಿವ್ ಪಟ್ಟಣವು ಕೈವ್‌ನ ಈಶಾನ್ಯಕ್ಕೆ 120 ಕಿಲೋಮೀಟರ್ (75 ಮೈಲುಗಳು) ದೂರದಲ್ಲಿದೆ, ರಷ್ಯಾದ ಪಡೆಗಳು ಉತ್ತರದಿಂದ ಆಕ್ರಮಣ ಮಾಡಲು ಪ್ರಯತ್ನಿಸುತ್ತಿವೆ.
ಚೆರ್ನಿಹಿವ್‌ನ ಉಪ ಮೇಯರ್ ರೆಜಿನಾ ಗುಸಾಕ್ ಎಎಫ್‌ಪಿಗೆ ರಷ್ಯಾದ “ಬಾಂಬ್ ದಾಳಿಯಿಂದ” ನಗರವು ನಲುಗಿದೆ ಎಂದು ಹೇಳಿದರು.

ಉಕ್ರೇನ್‌ನ ತುರ್ತು ಸೇವೆಯು ಹೆಚ್ಚು ಹಾನಿಗೊಳಗಾದ ಅಪಾರ್ಟ್‌ಮೆಂಟ್‌ಗಳಿಂದ ಹೊಗೆಯು ಹೊರಬರುವುದನ್ನು ತೋರಿಸುವ ಚಿತ್ರಗಳನ್ನು ಬಿಡುಗಡೆ ಮಾಡಿತು, ಆ ಪ್ರದೇಶಗಳಲ್ಲಿ ಚದುರಿದ ಅವಶೇಷಗಳು ಮತ್ತು ರಕ್ಷಕರು ಸ್ಟ್ರೆಚರ್‌ಗಳ ಮೇಲೆ ದೇಹಗಳನ್ನು ಸಾಗಿಸುತ್ತಿದ್ದಾರೆ.
ರಷ್ಯಾದ ವಿಮಾನವು ಸ್ಟಾರಯಾ ಪೊಡುಸಿವ್ಕಾ ಪ್ರದೇಶದಲ್ಲಿ [ಚೆರ್ನಿಹಿವ್] ಮತ್ತು ಖಾಸಗಿ ಮನೆಗಳ ಮೇಲೆ ಹಾಗೂ ಎರಡು ಶಾಲೆಗಳ ಮೇಲೆ ದಾಳಿ ಮಾಡಿದೆ. ರಕ್ಷಕರು ಈ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಚೆರ್ನಿಹಿವ್ ಪ್ರದೇಶದ ಗವರ್ನರ್ ವ್ಯಾಚೆಸ್ಲಾವ್ ಚೌಸ್ ಟೆಲಿಗ್ರಾಮ್‌ನಲ್ಲಿ ಹೇಳಿದರು.
ಒಂದು ವಾರದ ಹಿಂದೆ ಉಕ್ರೇನ್ ಮೇಲೆ ಆಕ್ರಮಣ ಮಾಡಿದ ನಂತರ, ಇದಕ್ಕೆ ವಿರುದ್ಧವಾದ ವ್ಯಾಪಕ ಪುರಾವೆಗಳ ಹೊರತಾಗಿಯೂ. ರಷ್ಯಾವು ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಿಕೊಂಡಿಲ್ಲ ಎಂದು ಹೇಳಿದೆ,
ಉಕ್ರೇನ್ ಮತ್ತು ರಷ್ಯಾ ಅಧಿಕಾರಿಗಳು ಗುರುವಾರ ಬೆಲಾರಸ್-ಪೋಲೆಂಡ್ ಗಡಿಯಲ್ಲಿ ಕದನ ವಿರಾಮದ ಕುರಿತು ಮಾತುಕತೆಗಾಗಿ ಒಟ್ಟುಗೂಡಿದಾಗ ದಾಳಿಗಳು ನಡೆದಿವೆ.

ಪುತಿನ್ ಗುರುವಾರ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ದೂರವಾಣಿ ಕರೆಯಲ್ಲಿ ಉಕ್ರೇನ್‌ನಲ್ಲಿ ತನ್ನ ಮುನ್ನಡೆಯನ್ನು ಮುಂದುವರಿಸುವುದಾಗಿ ಹೇಳಿದರು. ಪಾಶ್ಚಿಮಾತ್ಯ ನಿರ್ಬಂಧಗಳ ಸುರಿಮಳೆಯು ಮಾಸ್ಕೋದ ಆರ್ಥಿಕತೆಯನ್ನು ನಾಶಮಾಡಲು ಸಿದ್ಧವಾಗಿದ್ದರೂ ಸಹ ರಷ್ಯಾದ ನಾಯಕನು ಹಿಂದೆ ಸರಿಯುವ ಯಾವುದೇ ಲಕ್ಷಣಗಳನ್ನು ತೋರಿಸಲಿಲ್ಲ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement