ಜಮ್ಮು-ಕಾಶ್ಮೀರ; ಶ್ರೀನಗರದಲ್ಲಿ ಭದ್ರತಾ ಪಡೆಗಳ ಮೇಲೆ ಭಯೋತ್ಪಾದಕರಿಂದ ಗ್ರೆನೇಡ್ ಎಸೆತ, ಒಬ್ಬ ಸಾವು, 24 ಮಂದಿಗೆ ಗಾಯ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ನಗರದ ಹೃದಯಭಾಗದಲ್ಲಿ ಭಾನುವಾರ ನಡೆದ ಗ್ರೆನೇಡ್ ದಾಳಿಯಲ್ಲಿ ಒಬ್ಬ ನಾಗರಿಕ ಮೃತಪಟ್ಟಿದ್ದು, ಪೊಲೀಸ್ ಅಧಿಕಾರಿ ಸೇರಿದಂತೆ 24 ಜನರು ಗಾಯಗೊಂಡಿದ್ದಾರೆ.
ಜನನಿಬಿಡ ಅಮೀರ ಕಡಲ್ ಪ್ರದೇಶದಲ್ಲಿ ಸಂಜೆ 4:20ರ ಸುಮಾರಿಗೆ ದಾಳಿ ನಡೆದಿದ್ದು, ಇದು ಭಾನುವಾರದ ಬೀದಿ ಮಾರುಕಟ್ಟೆಯಲ್ಲಿ ನಡೆದಿದೆ.

ಮೃತ ವ್ಯಕ್ತಿ 55 ವರ್ಷದ ಮೊಹಮ್ಮದ್ ಅಸ್ಲಂ ಮಕ್ದೂಮಿ ಶ್ರೀನಗರದ ನೈಡ್ಕಡಲ್ ನಿವಾಸಿ ಎಂದು ಗುರುತಿಸಲಾಗಿದೆ. ಅ ಮತ್ತೋರ್ವ ನಾಗರೀಕ ರಫಿಯಾ ಎಂಬುವರು ಗಾಯಗೊಂಡಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ. ಗಾಯಗೊಂಡವರಲ್ಲಿ ಕನಿಷ್ಠ 12 ಮಂದಿ ಮಹಿಳೆಯರು ಸೇರಿದ್ದಾರೆ ಎಂದು ಹೇಳಿದ್ದಾರೆ.
ಸ್ಫೋಟದಲ್ಲಿ ಒಬ್ಬ ಪೊಲೀಸ್ ಮತ್ತು 24 ನಾಗರಿಕರಿಗೆ ಗಾಯಗಳಾಗಿವೆ ಎಂದು ಅವರು ಹೇಳಿದರು.

ಗಾಯಾಳುಗಳನ್ನು ಮಹಾರಾಜ ಹರಿ ಸಿಂಗ್ (SMHS) ಆಸ್ಪತ್ರೆಗೆ ಸಾಗಿಸಲಾಯಿತು ಎಂದು ಅಧಿಕಾರಿ ಹೇಳಿದ್ದಾರೆ.
ಹರಿ ಸಿಂಗ್ ಹೈ ಸ್ಟ್ರೀಟ್ ಪ್ರದೇಶವನ್ನು ಸುತ್ತುವರಿಯಲಾಗಿದೆ ಮತ್ತು ದಾಳಿಕೋರರನ್ನು ಹಿಡಿಯಲು ಹುಡುಕಾಟವನ್ನು ಪ್ರಾರಂಭಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಇಬ್ಬರು ಮಾಜಿ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿಗಳಾದ ಒಮರ್ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ನಾಯಕರು ದಾಳಿಯನ್ನು ಖಂಡಿಸಿದ್ದಾರೆ. ಸಜಾದ್ ಲೋನ್ ನೇತೃತ್ವದ ಪೀಪಲ್ಸ್ ಕಾನ್ಫರೆನ್ಸ್ ಕೂಡ ದಾಳಿಯನ್ನು ಖಂಡಿಸಿದೆ.

ಓದಿರಿ :-   ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಹರಿಯಾಣದ ಮಾಜಿ ಸಿಎಂ ಚೌತಾಲಾ ದೋಷಿ ಎಂದು ದೆಹಲಿ ಕೋರ್ಟ್ ತೀರ್ಪು

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

advertisement

ನಿಮ್ಮ ಕಾಮೆಂಟ್ ಬರೆಯಿರಿ