ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿದ ಯೋಧ: 5 ಮಂದಿ ಬಿಎಸ್‌ಎಫ್ ಯೋಧರ ಸಾವು

ನವದೆಹಲಿ: ಭಾನುವಾರ ನಡೆದ ಆಘಾತಕಾರಿ ಘಟನೆಯಲ್ಲಿ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಯೋಧನೊಬ್ಬ ಐವರು ಸಹೋದ್ಯೋಗಿ ಯೋಧರನ್ನು ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ. ವಿವರಗಳ ಪ್ರಕಾರ, ಘಟನೆಯು ಪಂಜಾಬ್‌ನ ಅಮೃತಸರದ ಖಾಸಾದಿಂದ ವರದಿಯಾಗಿದೆ.
ಅಟ್ಟಾರಿ-ವಾಘಾ ಗಡಿಯಿಂದ 20 ಕಿಮೀ ದೂರದಲ್ಲಿರುವ ಕ್ಯಾಂಪ್‌ನ ಅಮೃತಸರದ ಹೆಚ್ಕ್ಯು 144 ಬಿಎನ್ ಖಾಸಾದಲ್ಲಿ ಕಾನ್‌ಸ್ಟೇಬಲ್ ಸತ್ತೆಪ್ಪ ಎಸ್‌ಕೆ ತನ್ನ ಐವರು ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿದ್ದಾನೆ ಎಂದು ಬಿಎಸ್‌ಎಫ್ ತಿಳಿಸಿದೆ.
ಐವರು ಸೈನಿಕರು ಮೃತಪಟ್ಟಿದ್ದು, ಆರನೇ ಗಾಯಾಳು ಸ್ತಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ಬಗ್ಗೆ ಸತ್ಯಾಂಶ ತಿಳಿಯಲು ತನಿಖಾ ನ್ಯಾಯಾಲಯಕ್ಕೆ ಆದೇಶಿಸಲಾಗಿದೆ.
ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ಓದಿರಿ :-   ಮಹಿಳಾ ಬಾಕ್ಸಿಂಗ್ ವಿಶ್ವ ಚಾಂಪಿಯನ್‌ಶಿಪ್: ಭಾರತಕ್ಕೆ ಐತಿಹಾಸಿಕ ಚಿನ್ನ ತಂದುಕೊಟ್ಟ ನಿಖತ್ ಜರೀನ್
advertisement

ನಿಮ್ಮ ಕಾಮೆಂಟ್ ಬರೆಯಿರಿ