ಕರ್ನಾಟಕದ ದ್ವಿತೀಯ ಪಿಯುಸಿ ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ

posted in: ರಾಜ್ಯ | 0

ಬೆಂಗಳೂರು: ದ್ವಿತೀಯ ಪಿಯು ಪರೀಕ್ಷೆಯ ಪರಿಷ್ಕೃತ ಅಂತಿಮ ವೇಳಾಪಟ್ಟಿಯನ್ನು ಪದವಿಪೂರ್ವ ಶಿಕ್ಷಣ ಇಲಾಖೆ ಪ್ರಕಟಿಸಿದೆ. ಏಪ್ರಿಲ್‌ 22ರಿಂದ ಮೇ 18ರವರೆಗೆ ಪರೀಕ್ಷೆ ದಿನಾಂಕ ನಿಗದಿಪಡಿಸಲಾಗಿದೆ.
ಈ ಕುರಿತು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ವೇಳಾಪಟ್ಟಿಯ ಬಗ್ಗೆ ಅಕ್ಷೇಪಣೆ ಸಲಿಸಲು ಮಾರ್ಚ್ 5 ಸಂಜೆ 5 ಗಂಟೆಯವರೆಗೆ ಕಾಲಾವಕಾಶ ನೀಡಲಾಗಿತ್ತು. ಸದ್ಯ ಯಾವುದೇ ಅಕ್ಷೇಪಣೆಗಳಿಲ್ಲದ ಕಾರಣ ದ್ವಿತೀಯ ಪಿಯು ಮುಖ್ಯ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟವಾಗಿದೆ.

ಪಿಯುಸಿ ಅಂತಿಮ ವೇಳಾಪಟ್ಟಿ
ಏಪ್ರಿಲ್ 22 – ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ
ಏಪ್ರಿಲ್ 23 – ಗಣಿತಶಾಸ್ತ್ರ, ಶಿಕ್ಷಣ ಶಾಸ್ತ್ರ
ಏಪ್ರಿಲ್ 25 – ಅರ್ಥಶಾಸ್ತ್ರ
ಏಪ್ರಿಲ್ 26 – ರಸಾಯನಶಾಸ್ತ್ರ ಹಿಂದುಸ್ಥಾನಿ ಸಂಗೀತ, ಮನಃಶಾಸ್ತ್ರ
ಏಪ್ರಿಲ್ 27 – ತಮಿಳು, ತೆಲುಗು, ಮಲೆಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
ಏಪ್ರಿಲ್ 28 – ಕನ್ನಡ, ಅರೇಬಿಕ್
ಮೇ 2- ಭೂಗೋಳಶಾಸ್ತ್ರ, ಜೀವಶಾಸ್ತ್ರ
ಮೇ 4- ಮಾಹಿತಿ ತಂತ್ರಜ್ಞಾನ, ರೀಟೈಲ್, ಹೆಲ್ತ್‌ಕೇರ್, ಆಟೋಮೊಬೈಲ್, ಬ್ಯೂಟಿ ಅಂಡ ವೆಲ್‌ನೆಸ್‌
ಮೇ 5- ಇಂಗ್ಲಿಷ್
ಮೇ 10- ಇತಿಹಾಸ,ಭೌತಶಾಸ್ತ್ರ
ಮೇ 12- ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ
ಮೇ 14- ಸಮಾಜಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ
ಮೇ 17- ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಗೃಹ ವಿಜ್ಞಾನ
ಮೇ 18- ಹಿಂದಿ

ಓದಿರಿ :-   ಶಾಪಿಂಗ್‌ ಕಾಂಪ್ಲೆಕ್ಸ್‌ನ 60‌ ಅಡಿ ‌ಎತ್ತರದಿಂದ ಕೆಳಗೆ ಜಿಗಿದ ಯುವಕ-ಯುವತಿ-ಇಬ್ಬರ ಸ್ಥಿತಿಯೂ ಚಿಂತಾಜನಕ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

advertisement

ನಿಮ್ಮ ಕಾಮೆಂಟ್ ಬರೆಯಿರಿ