ಗೃಹ ರಕ್ಷಕ ಸ್ವಯಂಸೇವಕರ ಭತ್ಯೆ ಹೆಚ್ಚಿಸಿದ ಸರ್ಕಾರ

ಬೆಂಗಳೂರು : ರಾಜ್ಯದಲ್ಲಿ ಪೊಲೀಸ್ ಇಲಾಖೆ ಹೊರತುಪಡಿಸಿ ಕಾರ್ಯ ನಿರ್ವಹಿಸುತ್ತಿರುವ ಸುಮಾರು 3025 ಗೃಹ ರಕ್ಷಕ ಸ್ವಯಂಸೇವಕರ ಭತ್ಯೆ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈ ನಿರ್ಧಾರದಿಂದ ರಾಜ್ಯದ ವಿವಿಧ ಇಲಾಖೆಯಲ್ಲಿ ಗೃಹ ರಕ್ಷಕ ಸ್ವಯಂಸೇವಕರಾಗಿ ಕರ್ತವ್ಯ ನಿರ್ವಹಿಸುತ್ತಿರುವವರ ಬಹಳ ದಿನಗಳ ಬೇಡಿಕೆ ಈಡೆರಿಸಿದಂತಾಗಿದೆ ಎಂದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಿಳಿಸಿದ್ದಾರೆ.

ಗೃಹ ರಕ್ಷರನ್ನು ವರ್ಷದಲ್ಲಿ 353 ದಿನಗಳ ಕಾಲ ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿರುವುದರಿಂದ ಹೊಸ ಆದೇಶದಲ್ಲಿ ದಿನ ಭತ್ಯೆ ಬೆಂಗಳೂರು ನಗರದಲ್ಲಿ 455 ರೂ.‌ ರಿಂದ 600 ರೂ. ಹಾಗೂ ರಾಜ್ಯದ ಇತರೆ ಭಾಗಗಳಲ್ಲಿ 380 ರೂ.ಗಳಿಂದ ರೂ 600 ರೂ. ಗಳಿಗೆ ಹೆಚ್ಚಳ ಮಾಡಲಾಗಿದೆ.
ಪೊಲೀಸ್ ಇಲಾಖೆ ಹೊರತು ಪಡಿಸಿ ಕರ್ತವ್ಯ ನಿರ್ವಹಿಸುತ್ತಿರುವ ಸರಿ ಸುಮಾರು 3025 , ಗೃಹ ರಕ್ಷಕ ಹಾಗೂ ಪೌರ ರಕ್ಷಣಾ ಇಲಾಖೆಯ ಸ್ವಯಂ ಸೇವಕರಿಗೆ ಇದರಿಂದ ಅನುಕೂಲವಾಗಲಿದೆ.

ಪ್ರಮುಖ ಸುದ್ದಿ :-   ಕೋಲಾರದಲ್ಲಿ ಕಾಂಗ್ರೆಸ್‌ ಬಣಗಳ ತಿಕ್ಕಾಟ ತಾರಕಕ್ಕೆ : ಐವರು ಶಾಸಕರಿಂದ ರಾಜೀನಾಮೆ ಬೆದರಿಕೆ; ರಾಜೀನಾಮೆ ಪತ್ರ ತೋರಿಸಿ ಎಂಎಲ್‌ ಸಿಗಳಿಂದ ಹೈಡ್ರಾಮಾ...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement