ಅಸ್ಸಾಂ ಸ್ಥಳೀಯ ಸಂಸ್ಥೆ ಚುನಾವಣೆ: ಬಿಜೆಪಿ ಕ್ಲೀನ್ ಸ್ವೀಪ್, 80 ಪೌರ ಸಂಸ್ಥೆಗಳಲ್ಲಿ 73ರಲ್ಲಿ ಗೆಲುವು

ಗುವಾಹತಿ: ರಾಜ್ಯ ಚುನಾವಣಾ ಆಯೋಗ (ಎಸ್‌ಇಸಿ) ಪ್ರಕಟಿಸಿದ ಫಲಿತಾಂಶಗಳ ಪ್ರಕಾರ, ಭಾರತೀಯ ಜನತಾ ಪಕ್ಷ (ಬಿಜೆಪಿ) ಬುಧವಾರ ಅಸ್ಸಾಂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಒಟ್ಟು 80 ರಲ್ಲಿ 73 ಪೌರ ಸಂಸ್ಥೆಗಳಲ್ಲಿ ಭರ್ಜರಿ ಜಯ ಸಾಧಿಸಿದೆ. ಈಶಾನ್ಯ ರಾಜ್ಯದಲ್ಲಿ ಮುಖ್ಯ ಪ್ರತಿಪಕ್ಷವಾಗಿರುವ ಕಾಂಗ್ರೆಸ್ ಪಕ್ಷವು ಇಲ್ಲಿಯವರೆಗೆ ಒಂದೇ ಒಂದು ಪೌರ ಸಂಸ್ಥೆಯನ್ನು ಗೆಲ್ಲಲು ವಿಫಲವಾಗಿದೆ.

ಒಂದು ಪೌರ ಸಂಸ್ಥೆಯ ಫಲಿತಾಂಶ ಇನ್ನಷ್ಟೇ ಹೊರಬೀಳಬೇಕಿದೆ. 10 ವಾರ್ಡ್‌ಗಳ ಪೈಕಿ ಏಳರಲ್ಲಿ ಸ್ವತಂತ್ರ ಅಭ್ಯರ್ಥಿಗಳು ಜಯಗಳಿಸಿದ್ದು, ಉಳಿದ ಮೂರರಲ್ಲಿ ಕೇಸರಿ ಪಾಳಯ ಗೆದ್ದಿದೆ ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ. 977 ವಾರ್ಡ್‌ಗಳಲ್ಲಿ ಬಿಜೆಪಿ ಇದುವರೆಗೆ 672ರಲ್ಲಿ ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್‌ 71ರಲ್ಲಿ ಗೆಲುವು ಸಾಧಿಸಿದೆ. ಇತರೆ ಪಕ್ಷಗಳು 149 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿವೆ. ಚುನಾವಣಾ ಫಲಿತಾಂಶವು ಐದು ಪುರಸಭೆಯಲ್ಲಿ ಅತಂತ್ರ ಫಲಿತಾಂಶ ಬಂದಿದೆ ಎಂದು ಚುನಾವಣಾ ಆಯೋಗ ಹೇಳಿದೆ. ಒಟ್ಟಾರೆ 57 ವಾರ್ಡ್‌ಗಳಲ್ಲಿ ಅವಿರೋಧವಾಗಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಟ್ವೀಟ್ ಮಾಡಿ, ಈ ಫಲಿತಾಂಶಗಳು ಪ್ರಧಾನಿ ನರೇಂದ್ರ ಮೋದಿಯವರ ರಾಜ್ಯದ “ಬದ್ಧತೆಯಲ್ಲಿನ ಅಚಲ ನಂಬಿಕೆ”ಯ “ಪುನರಾವರ್ತನೆ” ಎಂದು ಹೇಳಿದ್ದಾರೆ.
ನಮ್ಮಲ್ಲಿನ ಜನರ ಅಚಲ ನಂಬಿಕೆ ಮತ್ತು ಅವರ ಹೇರಳವಾದ ಆಶೀರ್ವಾದದಿಂದ ನಾವು ವಿನಮ್ರರಾಗಿದ್ದೇವೆ” ಎಂದು ಶರ್ಮಾ ಮತ್ತೊಂದು ಟ್ವೀಟ್‌ನಲ್ಲಿ ಬರೆದಿದ್ದಾರೆ.
ಕಾಂಗ್ರೆಸ್‌ನ ಅಸ್ಸಾಂ ಮುಖ್ಯಸ್ಥ ಭೂಪೇನ್ ಕುಮಾರ್ ಬೋರಾಹ್ ಅವರು ರಾಜಕೀಯದಲ್ಲಿ “ಏರಿಳಿತ ನಿರಂತರ ಪ್ರಕ್ರಿಯೆಯಾಗಿದೆ ಎಂದು ಹೇಳಿದರು.
ಒಳ್ಳೆಯ ಸಮಯಕ್ಕಾಗಿ ಕಷ್ಟಪಟ್ಟು ತಾಳ್ಮೆಯಿಂದ ಕಾಯಬೇಕು. ಮುನ್ಸಿಪಲ್ ಚುನಾವಣೆಯ ಫಲಿತಾಂಶದ ಜವಾಬ್ದಾರಿಯನ್ನು ನಾವು ಸ್ವೀಕರಿಸಿದ್ದೇವೆ ಎಂದು ಹೇಳಿದ್ದಾರೆ.

ಓದಿರಿ :-   ದೆಹಲಿ ವಿಮಾನ ನಿಲ್ದಾಣದಲ್ಲಿ ತ್ರಿವರ್ಣ ಧ್ವಜದ ಮೇಲೆ ನಿಂತು ನಮಾಜ್ ಮಾಡಿದ ವ್ಯಕ್ತಿಯ ಬಂಧನ, ಜಾಮೀನಿನ ಮೇಲೆ ಬಿಡುಗಡೆ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 2

advertisement

ನಿಮ್ಮ ಕಾಮೆಂಟ್ ಬರೆಯಿರಿ