ಗೃಹ ಸಚಿವ ಅರಗ ಜ್ಞಾನೇಂದ್ರರನ್ನು ಭೇಟಿಯಾದ ತಮಿಳುನಾಡು ಸಚಿವರ ಪುತ್ರಿ; ತಮಗೆ ಪೊಲೀಸ್ ರಕ್ಷಣೆ ನೀಡುವಂತೆ ಮನವಿ

posted in: ರಾಜ್ಯ | 0

ಬೆಂಗಳೂರು: ಬೆಂಗಳೂರು : ತಮಿಳು ನಾಡು ಮುಜರಾಯಿ ಖಾತೆ ಸಚಿವ ಶೇಖರ್ ಬಾಬು ಅವರ ಪುತ್ರಿ ಜಯ ಕಲ್ಯಾಣಿ (24) ಹಾಗೂ ಅವರ ಪತಿ ಸತೀಶ ಇಂದು, ಬುಧವಾರ ಗೃಹ ಸಚಿವ ಅರಗ ಜ್ಞಾನೇಂದ್ರ ಅವರನ್ನು ಭೇಟಿಯಾಗಿ, ಪೊಲೀಸ್ ರಕ್ಷಣೆ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.
ಸಚಿವರನ್ನು ಭೇಟಿಯಾಗುವ ಪೂರ್ವದಲ್ಲಿ, ಇವರಿಬ್ಬರು ನಗರ ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ತಮಗೆ ರಕ್ಷಣೆ ನೀಡುವಂತೆ ಮನವಿ ಸಲ್ಲಿಸಿದ್ದರು.

ತನ್ನನ್ನು ಎಂ.ಬಿ.ಬಿ.ಎಸ್ ಪದವೀಧರೆ ಎಂದು ಪರಿಚಯಿಸಿಕೊಂಡ ಜಯ ಕಲ್ಯಾಣಿ ಅವರು, ನಾವಿಬ್ಬರೂ ಪರಸ್ಪರ ಒಪ್ಪಿಗೆ ಮೂಲಕ ವಿವಾಹವಾಗಿದ್ದು, ತಮ್ಮ ಪತಿ ವಿರುದ್ಧ ಸತ್ಯಕ್ಕೆ ದೂರವಾದ ದೂರು ದಾಖಲಿಸುವ ಪ್ರಯತ್ನದ ಬಗ್ಗೆ, ಅನುಮಾನವಿದ್ದು, ರಕ್ಷಣೆ ನೀಡಬೇಕೆಂದು ಗೃಹ ಸಚಿವರಲ್ಲಿ ವಿನಂತಿಸಿದರು.
ತಮಿಳುನಾಡು ಸಚಿವ ಶೇಖರ್ ಬಾಬು ಮಗಳು ಜಯ ಕಲ್ಯಾಣಿ ಕಳೆದ ವರ್ಷ ತಮಿಳುನಾಡಿನಿಂದ ನಾಪತ್ತೆಯಾಗಿದ್ದರು. ನಂತರ ಹಗರಿಬೊಮ್ಮನಹಳ್ಳಿ ಮೂಲದ ಸತೀಶ್ ಎಂಬ ಯುವಕನನ್ನು ಪ್ರೀತಿಸಿದ್ದ ಜಯ ಕಲ್ಯಾಣಿ ಇತ್ತೀಚೆಗಷ್ಟೇ ತನ್ನ ಪ್ರಿಯಕರನನ್ನು ಮದುವೆಯಾಗಿದ್ದರು. ಆದರೆ ತನ್ನ ಮದುವೆಗೆ ತಂದೆಯೇ ವಿರೋಧವಿದೆ, ಹೀಗಾಗಿ ತನ್ನ ತಂದೆಯಿಂದ ತನಗೆ ರಕ್ಷಣೆ ಕೊಡಿಸಬೇಕೆಂದು ಬೆಂಗಳೂರು ಕಮಿಷನರ್​ ಕಚೇರಿಗೆ ಭೇಟಿ ನೀಡಿದ್ದರು. ಈಗ ಮತ್ತೆ ತನ್ನ ತಂದೆಯಿಂದ ಜೀವ ಬೆದರಿಕೆ ಇರುವ ಕಾರಣ ರಕ್ಷಣೆ ನೀಡುವಂತೆ ಕೋರಿ ಬೆಂಗಳೂರಿನ ಜಯಮಹಲ್​ನಲ್ಲಿರುವ ಗೃಹ ಸಚಿವರ ಸರ್ಕಾರಿ ನಿವಾಸದಲ್ಲಿ ಆರಗ ಜ್ಞಾನೇಂದ್ರರನ್ನು ಭೇಟಿಯಾಗಿದ್ದಾರೆ. ಗೃಹ ಸಚಿವರು ರಕ್ಷಣೆ ನೀಡುವ ಭರವಸೆ ನೀಡಿದ್ದಾರೆ.

ಓದಿರಿ :-   ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: 32 ಶೈಕ್ಷಣಿಕ ಜಿಲ್ಲೆಗೆ ಎ ಗ್ರೇಡ್, ಮೊದಲನೇ ಸ್ಥಾನ ಹಂಚಿಕೊಂಡ 145 ವಿದ್ಯಾರ್ಥಿಗಳು

ತಮಿಳುನಾಡು ಮುಜರಾಯಿ ಇಲಾಖೆ ಸಚಿವ ಶೇಖರ್​ ಬಾಬು ಅವರ ಮಗಳು ಜಯಕಲ್ಯಾಣಿ ಹಾಗೂ ಸತೀಶ್ ಕುಮಾರ್ ಕಳೆದ 6 ವರ್ಷದಿಂದ ಪ್ರೀತಿಸುತ್ತಿದ್ದರು. ಅವರ ಪ್ರೀತಿಗೆ ಮನೆಯವರು ಒಪ್ಪದ ಕಾರಣ 6 ತಿಂಗಳ ಹಿಂದೆ ಅವರಿಬ್ಬರೂ ಓಡಿಹೋಗಿದ್ದರು. ಆದರೆ, ಅವರ ತಂದೆ ಸಚಿವ ಶೇಖರ್ ಬಾಬು ತಮ್ಮ ಅಧಿಕಾರ ಬಳಸಿ ಪುಣೆಯಲ್ಲಿ ಅವರಿಬ್ಬರನ್ನು ಪತ್ತೆ ಹಚ್ಚಿ, ತಮ್ಮ ಮಗಳನ್ನು ವಾಪಾಸ್ ಕರೆತಂದಿದ್ದರು.
ಇದಾದ ಬಳಿಕ 2 ತಿಂಗಳು ಕಾಲ ಪ್ರಿಯಕರ ಸತೀಶ್​ ಕುಮಾರ್​ನನ್ನು ಗೃಹ ಬಂಧನದಲ್ಲಿ ಇರಿಸಲಾಗಿತ್ತು. ಸತೀಶಕುಮಾರ ಕುಟುಂಬದ ಸದಸ್ಯರಿಗೂ ತೊಂದರೆ ನೀಡಲಾಗಿದೆ ಎಂದು ಜಯ ಕಲ್ಯಾಣಿ ತಮ್ಮ ತಂದೆಯ ವಿರುದ್ಧ ಆರೋಪಿಸಿದ್ದಾರೆ. ಗೃಹಬಂಧನದಲ್ಲಿದ್ದ ತಾನು ಕಳೆದ ಮೂರು ದಿನಗಳ ಹಿಂದೆ ಮನೆ ಬಿಟ್ಟು ಓಡಿ ಬಂದಿದ್ದೆ. ನಂತರ ಕರ್ನಾಟಕದ ಅವರಿಬ್ಬರು ಹಾಲಸ್ವಾಮಿ ಮಠದಲ್ಲಿ ಹಿಂದೂ ಧರ್ಮದ ಅನುಸಾರ ಮದುವೆ ಆಗಿರುವುದಾಗಿ ಹೇಳಿದ್ದಾರೆ. ತಮಿಳುನಾಡು ಮುಜರಾಯಿ ಸಚಿವರ ಮಗಳು ಜಯ ಕಲ್ಯಾಣಿ ಎಂಬಿಬಿಎಸ್​ ಪದವೀಧರೆಯಾಗಿದ್ದಾರೆ. ಸತೀಶ್​​ ಕುಮಾರ್​ ಡಿಪ್ಲೋಮಾ ಓದಿದ್ದು, ಚೆನ್ನೈನಲ್ಲಿ ಉದ್ಯಮಿಯಾಗಿದ್ದಾರೆ.

advertisement

ನಿಮ್ಮ ಕಾಮೆಂಟ್ ಬರೆಯಿರಿ