ಎರಡೂ ಕ್ಷೇತ್ರಗಳಲ್ಲಿ ಸೋಲನುಭವಿಸಿದ ಪಂಜಾಬ್‌ ಸಿಎಂ

ಚಂಡೀಗಡ: ಗುರುವಾರ ಪ್ರಕಟವಾದ ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಪಂಜಾಬ್ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕ ಚರಂಜಿತ್ ಸಿಂಗ್ ಚನ್ನಿ ಅವರು ಚಮ್ಕೌರ್ ಸಾಹಿಬ್ ಮತ್ತು ಭದೌರ್ ಎರಡೂ ಕ್ಷೇತ್ರಗಳಲ್ಲೂ ಸೋಲನುಭವಿಸಿದ್ದಾರೆ.

ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ಅದರ ಚುನಾಯಿತ ಅಭ್ಯರ್ಥಿ ಭಗವಂತ್ ಮಾನ್ ಗೆಲುವಿಗೆ ಅಭಿನಂದನೆಗಳು ಎಂದು ಚನ್ನಿ ಟ್ವಿಟ್ಟರ್‌ನಲ್ಲಿ ಬರೆದಿದ್ದಾರೆ, “ನಾನು ಪಂಜಾಬ್ ಜನರ ತೀರ್ಪನ್ನು ವಿನಮ್ರವಾಗಿ ಸ್ವೀಕರಿಸುತ್ತೇನೆ ಮತ್ತು ಆಮ್‌ ಆದ್ಮಿ ಪಕ್ಷದ ಚುನಾಯಿತ ಮುಖ್ಯಮಂತ್ರಿ ಭಗವಂತ್‌ ಸಿಂಗ್‌ ಮಾನ್‌ ಗೆಲುವಿಗಾಗಿ ಅಭಿನಂದಿಸುತ್ತೇನೆ. ಅವರು ಜನರ ನಿರೀಕ್ಷೆಗಳನ್ನು ಈಡೇರಿಸುತ್ತಾರೆ ಎಂದು ನಿರೀಕ್ಷಿಸುತ್ತೇನೆ ಎಂದು ಹೇಳಿದ್ದಾರೆ.
ಬದೌರ್ ಕ್ಷೇತ್ರದಲ್ಲಿ ಚನ್ನಿ 26,409 ಮತಗಳನ್ನು ಪಡೆದರೆ ಅವರ ಪ್ರತಿಸ್ಪರ್ಧಿ ಆಮ್ ಆದ್ಮಿ ಪಕ್ಷದ ಲಾಭ್ ಸಿಂಗ್ ಉಗೋಕೆ 63,967 ಮತಗಳನ್ನು ಪಡೆದರು.
ಚಮ್ಕೌರ್ ಸಾಹಿಬ್‌ನಲ್ಲಿ ಚನ್ನಿ 62,306 ಮತಗಳನ್ನು ಪಡೆದರೆ, ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಚರಂಜಿತ್ ಸಿಂಗ್ ಅವರು 70,248 ಮತಗಳನ್ನು ಪಡೆದರು.
ಚನ್ನಿ ಸೆಪ್ಟೆಂಬರ್ 19, 2021 ರಂದು ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ರಾಜೀನಾಮೆ ನಂತರ ಪಂಜಾಬ್‌ ಮುಖ್ಯಮಂತ್ರಿಯಾದರು ಹಾಗೂ ಪಂಜಾಬ್‌ನ ಮೊದಲ ದಲಿತ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರವಾದರು.

ಓದಿರಿ :-   5 ಜೀವಗಳನ್ನು ಉಳಿಸಿದ ದೆಹಲಿಯ ಏಮ್ಸ್‌ನ 6 ವರ್ಷದ ಏಮ್ಸ್‌ನ ಅತ್ಯಂತ ಕಿರಿಯ ಅಂಗದಾನಿ...!

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

advertisement

ನಿಮ್ಮ ಕಾಮೆಂಟ್ ಬರೆಯಿರಿ