ಪಾಕ್‌ ಭೂ ಪ್ರದೇಶಕ್ಕೆ ಅಪ್ಪಳಿಸಿದ ಭಾರತದಿಂದ ‘ಶಸ್ತ್ರ ರಹಿತ ಸೂಪರ್ಸಾನಿಕ್ ಕ್ಷಿಪಣಿ ಉಡಾವಣೆ: ಪಾಕಿಸ್ತಾನ ಸೇನೆ ಆರೋಪ

ಇಸ್ಲಾಮಾಬಾದ್‌: ಪಾಕಿಸ್ತಾನದಲ್ಲಿ ನಡೆಯುತ್ತಿರುವ ರಾಜಕೀಯ ಬಿರುಗಾಳಿಯ ನಡುವೆ, ದೇಶದ ಮಿಯಾನ್ ಚನ್ನು ಪ್ರದೇಶದಲ್ಲಿ ಭಾರತದ ‘ಸೂಪರ್ಸಾನಿಕ್ ಹಾರುವ ವಸ್ತು’ ಬಿದ್ದಿದೆ ಎಂದು ಪಾಕಿಸ್ತಾನಿ ಸೇನೆ ಹೇಳಿಕೊಂಡಿದೆ.
ಭಾರತೀಯ ಶಸತ್ರ ರಹಿತ ಸೂಪರ್ಸಾನಿಕ್ ಕ್ಷಿಪಣಿ” ತನ್ನ ಭೂಪ್ರದೇಶವನ್ನು ಅಪ್ಪಳಿಸಿದ್ದು, ನಾಗರಿಕ ಆಸ್ತಿಯನ್ನು ಹಾನಿಗೊಳಿಸಿದೆ ಆದರೆ ಯಾವುದೇ ಪ್ರಾಣಹಾನಿ ಉಂಟಾಗಿಲ್ಲ ಎಂದು ಪಾಕಿಸ್ತಾನದ ಮಿಲಿಟರಿ ಗುರುವಾರ ಹೇಳಿದೆ.
ಪಾಕಿಸ್ತಾನವು ಈ ಘೋರ ಉಲ್ಲಂಘನೆಯನ್ನು ಬಲವಾಗಿ ಪ್ರತಿಭಟಿಸುತ್ತದೆ ಮತ್ತು ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸುತ್ತದೆ” ಎಂದು ಸೇನಾ ವಕ್ತಾರ ಮೇಜರ್ ಜನರಲ್ ಬಾಬರ್ ಇಫ್ತಿಕರ್ ರಾವಲ್ಪಿಂಡಿಯ ಗ್ಯಾರಿಸನ್ ಸಿಟಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಪಾಕಿಸ್ತಾನ ಸೇನೆಯ ವಕ್ತಾರ ಮೇಜರ್ ಜನರಲ್ ಬಾಬರ್ ಇಫ್ತಿಕರ್ ಅವರು ಮಿಯಾನ್ ಚನ್ನು ಪ್ರದೇಶದಲ್ಲಿ ಗುರುವಾರ ಬಿದ್ದ ವಸ್ತು ಸೂಪರ್ಸಾನಿಕ್ ಹಾರುವ ವಸ್ತು, ಬಹುಶಃ ಕ್ಷಿಪಣಿ ಎಂದು ಹೇಳಿದ್ದಾರೆ. ಈ ಕ್ಷಿಪಣಿಯಲ್ಲಿ ಯಾವುದೇ ಸ್ಫೋಟಕ ಇರಲಿಲ್ಲ. ಆದರೆ ಅದರ ಪತನದಿಂದಾಗಿ ಪಾಕಿಸ್ತಾನದ ವಸತಿ ಪ್ರದೇಶಗಳಲ್ಲಿನ ಮನೆಗಳಿಗೆ ಹಾನಿಯಾಗಿದೆ ಎಂದು ಅವರು ಹೇಳಿದ್ದಾರೆ. ಮತ್ತೊಂದೆಡೆ, ಇದು ಭಾರತದ ಬ್ರಹ್ಮೋಸ್ ಸೂಪರ್ಸಾನಿಕ್ ಕ್ಷಿಪಣಿ ಎಂದು ಪಾಕಿಸ್ತಾನಿ ಮಾಧ್ಯಮಗಳು ಹೇಳಿಕೊಂಡಿವೆ.
ಈ ಅಪರಿಚಿತ ಹಾರುವ ವಸ್ತುವಿನಿಂದ ನಾಗರಿಕ ವಿಮಾನಗಳಿಗೆ ಬೆದರಿಕೆಯೊಡ್ಡಿದ್ದು, ಈ ಬಗ್ಗೆ ಭಾರತ ವಿವರಣೆ ನೀಡಬೇಕು ಎಂದು ಪಾಕಿಸ್ತಾನಿ ಸೇನೆ ಹೇಳಿದೆ. ಪಾಕಿಸ್ತಾನಿ ಸೇನೆಯ ಈ ಹೇಳಿಕೆ ಎರಡೂ ದೇಶಗಳಲ್ಲಿ ತಲ್ಲಣ ಮೂಡಿಸಿದೆ. ‘ಮಾರ್ಚ್ 9 ರಂದು, ಭಾರತದ ಭೂಪ್ರದೇಶದ ಹರ್ಯಾಣದ ಸಿರ್ಸಾದಿಂದ ಹಾರಿ ಬಂದಿದೆ ಹಾಗೂ ಪಾಕಿಸ್ತಾನದ ಮಿಯಾನ್ ಚನ್ನು ಪ್ರದೇಶದಲ್ಲಿ ಬಿದ್ದಿದೆ. ಪಾಕಿಸ್ತಾನದ ವಾಯುಪಡೆಯ ವಾಯು ರಕ್ಷಣಾ ಕಾರ್ಯಾಚರಣೆ ಕೇಂದ್ರವು ಹೈ ಸ್ಪೀಡ್ ಫ್ಲೈಯಿಂಗ್ ಆಬ್ಜೆಕ್ಟ್ ಅನ್ನು ಹಿಡಿದಿದೆ’ ಎಂದು ಬಾಬರ್ ಹೇಳಿಕೊಂಡಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ

ಆ ವಸ್ತು ಯಾವುದು ಎಂಬ ಬಗ್ಗೆ ಇನ್ನೂ ನಿಖರವಾದ ಸ್ಪಷ್ಟತೆ ಬಂದಿಲ್ಲ. ಈ ಬಗ್ಗೆ ಭಾರತದಿಂದ ಯಾವುದೇ ಹೇಳಿಕೆ ನೀಡಿಲ್ಲ, ಈ ವಸ್ತುವು ಭಾರತ ಮತ್ತು ಪಾಕಿಸ್ತಾನಿ ವಾಯುಪ್ರದೇಶದಲ್ಲಿ ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಯಾಣಿಕ ವಿಮಾನಗಳಿಗೆ ಬೆದರಿಕೆ ಹಾಕಿದೆ. ಈ ಘಟನೆ ಸಂಭವಿಸಲು ಕಾರಣವೇನು ಎಂಬುದನ್ನು ಭಾರತ ವಿವರಿಸಬೇಕು ಎಂದು ಅವರು ಒತ್ತಾಯಿಸಿದರು, ಬುಧವಾರ ಸಂಜೆ “ಪ್ರಚೋದನಕಾರಿ” ಭಾರತೀಯ ಕೃತ್ಯ ನಡೆದಿದೆ ಎಂದು ಹೇಳಿದರು ಎಂದು ಬಾಬರ್ ಹೇಳಿದ್ದಾರೆ.
ಈ ಸೂಪರ್ಸಾನಿಕ್‌ ವಸ್ತುವನ್ನು ವಿಧಿವಿಜ್ಞಾನ ಪರೀಕ್ಷೆಗೆ ಒಳಪಡಿಸಲಾಗಿದ್ದು, ಇದು ಮೇಲ್ಮೈಯಿಂದ ಮೇಲ್ಮೈಗೆ ಹಾರುವ ಸೂಪರ್‌ಸಾನಿಕ್ ಕ್ಷಿಪಣಿ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆದರೆ, ಅದರಲ್ಲಿ ಯಾವುದೇ ಸ್ಫೋಟಕ ಇರಲಿಲ್ಲ. ಈ ವಸ್ತುವು 40 ಸಾವಿರ ಅಡಿ ಎತ್ತರದಲ್ಲಿ ಮ್ಯಾಕ್ 3 ರ ವೇಗದಲ್ಲಿ ಹಾರುತ್ತಿದೆ ಎಂದು ಅವರು ಹೇಳಿದರು. ಈ ವಸ್ತುವು ಅಪ್ಪಳಿಸುವ ಮೊದಲು ಪಾಕಿಸ್ತಾನದ 124 ಕಿಮೀ ಪ್ರದೇಶದಲ್ಲಿ ಹಾರಿಹೋಯಿತು ಎಂದು ಅವರು ಹೇಳಿದರು.

ಭಾರತದಿಂದ ಹೇಳಿಕೆ ಬರದಿರುವವರೆಗೆ ನಾವು ಯಾವುದೇ ತೀರ್ಮಾನಕ್ಕೆ ಬಂದಿಲ್ಲ. ಪಾಕಿಸ್ತಾನವು ತನ್ನ ವಾಯುಪ್ರದೇಶದ ಉಲ್ಲಂಘನೆಯನ್ನು ಬಲವಾಗಿ ವಿರೋಧಿಸುತ್ತದೆ. ಈ ಘಟನೆಗೆ ಕಾರಣ ಏನೇ ಇರಲಿ, ಅದನ್ನು ಭಾರತೀಯರೇ ವಿವರಿಸಬೇಕು ಎಂದು ಪಾಕಿಸ್ತಾನ ಸೇನೆಯ ವಕ್ತಾರರು ಹೇಳಿದ್ದಾರೆ. ಪಾಕಿಸ್ತಾನದ ಇಮ್ರಾನ್ ಖಾನ್ ಸರ್ಕಾರವು ರಾಜಕೀಯ ಬಿರುಗಾಳಿಯಲ್ಲಿ ಸಿಲುಕಿರುವ ಸಮಯದಲ್ಲಿ ಪಾಕಿಸ್ತಾನಿ ಸೇನೆಯ ಈ ಕ್ಲೇಮ್‌ ಬಂದಿದೆ. ತನ್ನ ಸರ್ಕಾರವನ್ನು ಉಳಿಸಲು ಇಮ್ರಾನ್ ಖಾನ್ ವಿರೋಧ ಪಕ್ಷದ ಸಂಸದರನ್ನು ಬಲವಂತವಾಗಿ ಬಂಧಿಸುತ್ತಿದ್ದಾರೆ.

ಪ್ರಮುಖ ಸುದ್ದಿ :-   'ಇದು ಸಾಮಾನ್ಯ ಚುನಾವಣೆಯಲ್ಲ' : ಲೋಕಸಭೆ ಚುನಾವಣೆ ಮೊದಲ ಹಂತದ ಮತದಾನಕ್ಕೂ ಮುನ್ನ ಬಿಜೆಪಿ-ಎನ್‌ಡಿಎ ಅಭ್ಯರ್ಥಿಗಳಿಗೆ ಪತ್ರ ಬರೆದ ಪ್ರಧಾನಿ ಮೋದಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement