ಭಾರತದ ಗಡಿಯಲ್ಲಿ ಹೆಪ್ಪುಗಟ್ಟಿದ ಹಿಮದಲ್ಲಿ ಕಬಡ್ಡಿ ಆಡಿದ ಸೈನಿಕರು: ವೀಡಿಯೋ ವೈರಲ್

ಶಿಮ್ಲಾ: ಇಂಡೋ-ಟಿಬೆಟಿಯನ್ ಗಡಿಯಲ್ಲಿ ಪೊಲೀಸ್ (ಐಟಿಬಿಪಿ) ಸಿಬ್ಬಂದಿ ತಮ್ಮ ಬಿಡುವಿನ ಸಮಯದಲ್ಲಿ ಕಬಡ್ಡಿ ಆಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಈ ವೀಡಿಯೋದಲ್ಲಿ ಹಿಮಾಚಲ ಪ್ರದೇಶದ ಹಿಮಾಲಯ ಪರ್ವತಗಳ ಬಾಋತದ ಗಡಿಯಲ್ಲಿ ದೇಶ ಕಾಯುವ ಯೋಧರು ದಪ್ಪ ಉಣ್ಣೆಯ ಬಟ್ಟೆ ಧರಿಸಿ ಕಬಡ್ಡಿ ಆಡುತ್ತಿರುವುದನ್ನು ಕಾಣಬಹುದಾಗಿದೆ. ಈ ವೀಡಿಯೋವನ್ನು ಐಟಿಬಿಪಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಕ್ಯಾಪ್ಷನ್‍ನಲ್ಲಿ ಬಹಳ ಹುಮ್ಮಸ್ಸಿನಿಂದ ಹಿಮದ ಮಧ್ಯೆ ಆಟ ಆಡುತ್ತಿದ್ದಾರೆ (ಫುಲ್ ಆಫ್ ಜೋಶ್, ಪ್ಲೇಯಿಂಗ್ ಇನ್ ಸ್ನೋ) ಎಂದು ಬರೆದುಕೊಂಡಿದೆ.

ಈ ಹಿಂದೆ ಐಟಿಬಿಪಿ ತನ್ನ ಸಿಬ್ಬಂದಿ ಹಿಮದಿಂದ ಆವೃತವಾದ ಪ್ರದೇಶದಲ್ಲಿ ತಿರುಗುತ್ತಿರುವ ಮತ್ತು ಹಗ್ಗಗಳ ಸಹಾಯದಿಂದ ಒಬ್ಬರ ಹಿಂದೆ ಮತ್ತೊಬ್ಬರು ಹಿಂಬಾಲಿಸುತ್ತಿರುವ ಮತ್ತೊಂದು ವೀಡಿಯೊವನ್ನು ಅಪ್‍ಲೋಡ್ ಮಾಡಿತ್ತು. ವಿಡಿಯೋದಲ್ಲಿ ಐಟಿಬಿಪಿ ಸಿಬ್ಬಂದಿ ಹೆಗಲ ಮೇಲೆ ಶಸ್ತ್ರಾಸ್ತ್ರಗಳನ್ನು ಹೊತ್ತುಕೊಂಡು ಕೈಯಲ್ಲಿ ಕೋಲು ಹಿಡಿದು ಮುಂದೆ ಸಾಗುತ್ತಿರುವುದು ಕಾಣಬಹುದಾಗಿದೆ.

ಓದಿರಿ :-   ಟೋಕಿಯೊದಲ್ಲಿ ಜಪಾನಿನ ಮಕ್ಕಳೊಂದಿಗೆ ಪ್ರಧಾನಿ ಮೋದಿ ಹಿಂದಿ ಸಂವಾದ ವೈರಲ್ | ವೀಕ್ಷಿಸಿ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

advertisement

ನಿಮ್ಮ ಕಾಮೆಂಟ್ ಬರೆಯಿರಿ