800 ಭಾರತೀಯರನ್ನು ಉಕ್ರೇನ್‌ನಿಂದ ವಾಪಸ್ ಕರೆತಂದ ಮಹಿಳಾ ಪೈಲಟ್‌

ಕೊಲ್ಕತ್ತಾ: ಯುದ್ಧ ಪೀಡಿತ ಉಕ್ರೇನ್‌ನಿಂದ ಭಾರತೀಯರನ್ನು ಕರೆತರುವ ’ಆಪರೇಷನ್ ಗಂಗಾ’ ಕಾರ್ಯಾಚರಣೆಯಲ್ಲಿ ಕೋಲ್ಕತ್ತಾದ ಯುವ ಮಹಿಳಾ ಪೈಲೆಟ್ ಮಹಾಶ್ವೇತ ಚಕ್ರವರ್ತಿ ಗಮನ ಸೆಳೆದಿದ್ದು ಉಕ್ರೇನ್‌ನಿಂದ ಸುಮಾರು ೮೦೦ ಭಾರತೀಯರನ್ನು ದೇಶಕ್ಕೆ ಕರೆ ತಂದಿದ್ದಾರೆ.
ಆಪರೇಷನ್ ಗಂಗಾ ಕಾರ್ಯಾಚರಣೆಯ ವಿಮಾನದ ಪೈಲೆಟ್ ಆಗಿರುವ ೨೪ ವರ್ಷದ ಮಹಾಶ್ವೇತ ಚಕ್ರವರ್ತಿ ಪಶ್ಚಿಮ ಬಂಗಾಳದ ಬಿಜೆಪಿ ಮಹಿಳಾ ಮೋರ್ಚಾದ ಮುಖ್ಯಸ್ಥೆ ತನುಜಾ ಚಕ್ರವರ್ತಿಯವರ ಪುತ್ರಿಯಾಗಿದ್ದು, ಈಕೆ ೮೦೦ ಭಾರತೀಯರನ್ನು ಸುರಕ್ಷಿತವಾಗಿ ಉಕ್ರೇನ್‌ನಿಂದ ಕರೆ ತಂದಿದ್ದಾರೆಂದು ಬಿಜೆಪಿ ಮಹಿಳಾ ಮೋರ್ಚಾ ಟ್ವಿಟರ್‌ನಲ್ಲಿ ಹೇಳಿದೆ.
ಯುದ್ಧ ಪೀಡಿತ ಉಕ್ರೇನ್‌ನ ಗಡಿಯಿಂದ ನೆರೆಯ ದೇಶಗಳಾದ ಪೋಲೆಂಡ್ ಮತ್ತು ಹಂಗೇರಿಯಿಂದ ಪೈಲಟ್‌ ಮಹಾಶ್ವೇತ ಚಕ್ರವರ್ತಿ ಸುರಕ್ಷಿತವಾಗಿ ೮೦೦ ಭಾರತೀಯರನ್ನು ಕರೆ ತಂದಿದ್ದಾರೆ.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಇವಿಎಂ ಮತಗಳ ಜೊತೆ ವಿವಿಪ್ಯಾಟ್ ಮತಗಳ ಸಂಪೂರ್ಣ ಎಣಿಕೆ : ಎಲ್ಲ ಅರ್ಜಿಗಳನ್ನು ವಜಾ ಮಾಡಿದ ಸುಪ್ರೀಂ ಕೋರ್ಟ್

ನಿಮ್ಮ ಕಾಮೆಂಟ್ ಬರೆಯಿರಿ

advertisement