ಮಹತ್ವದ ನಿರ್ಧಾರ…ಮಾರ್ಚ್‌ 16ರಿಂದ ದೇಶದಲ್ಲಿ 12-14 ವಯಸ್ಸಿನ ಮಕ್ಕಳಿಗೆ ಕೋವಿಡ್‌ ಲಸಿಕೆ ನೀಡಲು ಆರಂಭ

ನವದೆಹಲಿ: ಭಾರತವು ತನ್ನ ಕೋವಿಡ್-19 ಲಸಿಕೆ ವ್ಯಾಪ್ತಿಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಮಾರ್ಚ್ 16 ರಿಂದ ದೇಶದಲ್ಲಿ 12 ರಿಂದ 14 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆ ಹಾಕಲು ಪ್ರಾರಂಭಿಸಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಸೋಮವಾರ ಪ್ರಕಟಿಸಿದ್ದಾರೆ.
ಮುನ್ನೆಚ್ಚರಿಕೆ ಡೋಸ್ ಪಡೆಯಲು 60 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ನೀಡಲು ನೀಡಲಾಗುತ್ತದೆ. ಆ ವಯಸ್ಸಿನ ವರ್ಗದಲ್ಲಿರುವ ಪ್ರತಿಯೊಬ್ಬರೂ ಈಗ ಬೂಸ್ಟರ್ ಶಾಟ್‌ಗಳನ್ನು ತೆಗೆದುಕೊಳ್ಳಬಹುದು.
ವೈಜ್ಞಾನಿಕ ಸಂಸ್ಥೆಗಳೊಂದಿಗೆ ಸರಿಯಾದ ಚರ್ಚೆಯ ನಂತರ ಕೇಂದ್ರ ಸರ್ಕಾರವು 12-13 ವರ್ಷ ಮತ್ತು 13-14 ವರ್ಷ ವಯಸ್ಸಿನವರಿಗೆ (2008, 2009 ಮತ್ತು 2010 ರಲ್ಲಿ ಜನಿಸಿದವರು. ಅಂದರೆ ಈಗಾಗಲೇ 12 ವರ್ಷಕ್ಕಿಂತ ಮೇಲ್ಪಟ್ಟವರು) ಕೋವಿಡ್‌-19 ಲಸಿಕೆಯನ್ನು ಮಾರ್ಚ್ 16ರಿಂದ ಪ್ರಾರಂಭಿಸಲು ನಿರ್ಧರಿಸಿದೆ ಎಂದು ಆರೋಗ್ಯ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಕೋವಿಡ್-19 ಲಸಿಕೆಯನ್ನು ಹೈದರಾಬಾದ್‌ನ ಬಯೋಲಾಜಿಕಲ್ ಇವಾನ್ಸ್ ತಯಾರಿಸಿದ ಕಾರ್ಬೆವಾಕ್ಸ್ ಆಗಿರುತ್ತದೆ. ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಕೂನಲ್ಲಿ ಹಿಂದಿಯಲ್ಲಿ ಘೋಷಣೆ ಮಾಡಿದ ಸಚಿವರು, “ಮಕ್ಕಳು ಸುರಕ್ಷಿತವಾಗಿದ್ದರೆ ದೇಶ ಸುರಕ್ಷಿತವಾಗಿದೆ! 12 ರಿಂದ 14 ವರ್ಷದ ವರೆಗಿನ ಮಕ್ಕಳಿಗೆ ಮಾರ್ಚ್ 16 ರಿಂದ ಪ್ರಾರಂಭವಾಗುತ್ತದೆ. ಅಲ್ಲದೆ, 60 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬರೂ ಈಗ ಮುನ್ನೆಚ್ಚರಿಕೆ ಡೋಸ್‌ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ ಹಾಗೂ ಪಡೆಯಲು ಮಕ್ಕಳ ಕುಟುಂಬಗಳು ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟ ಜನರು ಲಸಿಕೆ ಹಾಕಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.

ಭಾರತವು ಜನವರಿ 3 ರಿಂದ 15-18 ವರ್ಷ ವಯಸ್ಸಿನವರಿಗೆ ಲಸಿಕೆ ಹಾಕಲು ಪ್ರಾರಂಭಿಸಿತು. ಇಲ್ಲಿಯವರೆಗೆ ಮಕ್ಕಳಿಗೆ ಭಾರತ್ ಬಯೋಟೆಕ್‌ನ ಕೊವಾಕ್ಸಿನ್ ಲಸಿಕೆ ನೀಡಲಾಗುತ್ತಿತ್ತು. ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ 15 ರಿಂದ 18 ವರ್ಷ ವಯಸ್ಸಿನ 3,37,70,605 ಮಕ್ಕಳು ಎರಡನೇ ಡೋಸ್ ಪಡೆದಿದ್ದಾರೆ.

ಪ್ರಮುಖ ಸುದ್ದಿ :-   ದಕ್ಷಿಣ ಬಂಗಾಳ ಕೊಲ್ಲಿ, ನಿಕೋಬಾರ್ ದ್ವೀಪಕ್ಕೆ ಮಾನ್ಸೂನ್‌ ಪ್ರವೇಶ ; ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆ

12 ರಿಂದ 18 ವರ್ಷ ವಯಸ್ಸಿನವರಿಗೆ ಕಾರ್ಬೆವಾಕ್ಸ್ ಲಸಿಕೆಯು ಭಾರತದ ಔಷಧ ನಿಯಂತ್ರಕದಿಂದ ತುರ್ತು ಬಳಕೆಯ ಅಧಿಕಾರವನ್ನು (EUA) ಪಡೆದುಕೊಂಡಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement