ಇಂದಿನಿಂದ ಶಿರಸಿ ಮಾರಿಕಾಂಬಾ ಜಾತ್ರೆ ಆರಂಭ

posted in: ರಾಜ್ಯ | 0

ಶಿರಸಿ: ರಾಜ್ಯದಲ್ಲೇ ಅತೀ ದೊಡ್ಡ ಜಾತ್ರೆ ಎಂಬ ಹೆಗ್ಗಳಿಕೆ ಪಡೆದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮಾರಿಕಾಂಬಾ ಜಾತ್ರೆಯು ಇಂದಿನಿಂದ (ಮಾ.15 ರಿಂದ) ಆರಂಭವಾಗಲಿದ್ದು, ಮಾರ್ಚ್‌ 23ರ ವರೆಗೆ ನಡೆಯಲಿದೆ. ಕೊರೊನಾ ನಿಯಮಗಳನ್ನು ಸಡಿಲಿಕೆ ಮಾಡಿದ್ದರಿಂದ ಈ ಬಾರಿ ಜಾತ್ರೆಗೆ ಲಕ್ಷಾಂತರ ಜನರು ಸೇರುವ ನಿರೀಕ್ಷೆ ಈಗಾಗಲೇ ಮಾರಿಕಾಂಬಾ ದೇವರ(Marikamba Devi) ಜಾತ್ರೆಯ ಅಂಕೆಹಾಕುವ ಶಾಸ್ತ್ರ, ಮರಕಡಿಯುವ ಶಾಸ್ತ್ರಗಳು ಪೂರ್ಣಗೊಂಡಿದ್ದು ದೇವಿಯು ಗದ್ದುಗೆಗೆ ಕೂರಿಸಲು ಸಿದ್ಧತೆಯಾಗಿದೆ.

ಮಾರ್ಚ್ 15ರ ಮಧ್ಯಾಹ್ನ 12.21 ರಿಂದ 12.33ರ ಒಳಗೆ ದೇವಿಯ ರಥದ ಕಲಶದ ಪ್ರತಿಷ್ಠೆ ಹಾಗೂ ರಾತ್ರಿ 11.18 ರಿಂದ 11.27ರವರೆಗೆ ಸಭಾ ಮಂಟಪದಲ್ಲಿ ದೇವಿಯ ಜಾತ್ರಾ ಕಲ್ಯಾಣ ಪ್ರತಿಷ್ಠೆ ನಡೆಯಲಿದೆ. ಮಾರ್ಚ್ 16 ರಂದು ಬೆಳಿಗ್ಗೆ 7.04 ಗಂಟೆಯಿಂದ ದೇವಿಯ ರಥಾರೋಹಣ ನಡೆಯಲಿದ್ದು, ಮಾರಿಕಾಂಬಾ ದೇವಿಯ ಮೂರ್ತಿಯನ್ನು ಶೋಭಾಯಾತ್ರೆ ಮೂಲಕ ಗದ್ದುಗೆಗೆ ತರಲಾಗುತ್ತದೆ. 8.36ಕ್ಕೆ ಜಾತ್ರಾ ಗದ್ದುಗೆಯಲ್ಲಿ ಪ್ರತಿಷ್ಠಾಪನೆ ನಡೆಯಲಿದೆ. ಮಾ.17 ರಿಂದ ಭಕ್ತಾದಿಗಳ ಸೇವೆಗೆ ಅವಕಾಶ ಮಾಡಿಕೊಡಲಾಗಿದ್ದು, ಮಾರ್ಚ್ 23 ರಂದು ಬೆಳಿಗ್ಗೆ 9.33 ಗಂಟೆಗೆ ಜಾತ್ರೆ ಸಂಪನ್ನಗೊಳ್ಳಲಿದೆ. ಯುಗಾದಿಯಂದು ದೇವಿಯ ಪುನರ್‌ ಪ್ರತಿಷ್ಠೆ ನಡೆಯಲಿದೆ. ಜಾತ್ರೆಯ ಅವಧಿಯಲ್ಲಿ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ, ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಜಿಲ್ಲಾಡಳಿತ ಕೂಡ ಬರುವ ಭಕ್ತರಿಗೆ ತೊಂದರೆಯಾಗದಂತೆ ವ್ಯವಸ್ಥೆ ಕಲ್ಪಿಸಿದೆ.

ಓದಿರಿ :-   ಹುಚ್ಚು ಸಾಹಸ...ಶ್ರೀನಿವಾಸ ಸಾಗರ ಅಣೆಕಟ್ಟಿನ ಗೋಡೆ ಹತ್ತುವಾಗ 30 ಅಡಿ ಎತ್ತರದಿಂದ ಬಿದ್ದ ಯುವಕ | ದೃಶ್ಯ ವೀಡಿಯೊದಲ್ಲಿ ಸೆರೆ

 

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

advertisement

ನಿಮ್ಮ ಕಾಮೆಂಟ್ ಬರೆಯಿರಿ