ಹಿಜಾಬ್ ನಿಷೇಧ: ಸುಪ್ರೀಂಕೋರ್ಟಿನಲ್ಲಿ ಪ್ರಶ್ನೆ ಮಾಡ್ತೇವೆ-ಶಫಿ ಸಅದಿ

ಬೆಂಗಳೂರು: ಕೋರ್ಟ್ ತೀರ್ಪಿನ ಬಗ್ಗೆ ಧಾರ್ಮಿಕ ಮುಖಂಡರ ಜೊತೆ ಚರ್ಚೆ ನಡೆಸುತ್ತೇವೆ. ಸುಪ್ರೀಂಕೋರ್ಟ್ ಮೊರೆ ಹೋಗುವ ಚಿಂತನೆ ಇದೆ. ಕಾನೂನಾತ್ಮಕವಾಗಿ ನಾವು ನಮ್ಮ ಹಕ್ಕನ್ನು ಪಡೆದುಕೊಳ್ಳುತ್ತೇವೆ ಎಂದು ಹೈಕೋರ್ಟ್‌ ತೀರ್ಪಿನ ಬಗ್ಗೆ ಮೌಲಾನ ಶಫಿ ಸಅದಿ ಹೇಳಿದ್ದಾರೆ

ಯಾವ ಆಧಾರದ ಮೇಲೆ ತೀರ್ಪು ಕೊಟ್ಟಿದ್ದಾರೆಂದು ಗೊತ್ತಿಲ್ಲ. ಹಿಜಾಬ್ ಕಡ್ಡಾಯವೆಂದು ಕುರಾನ್‌ನಲ್ಲಿ ಹೇಳಲಾಗಿದೆ. ಮಹಿಳೆಯರಿಗೆ ಹಿಜಾಬ್ ಕಡ್ಡಾಯ ಎಂದು ಸ್ಪಷ್ಟವಾಗಿ ತಿಳಿಸಿದೆ ಎಂದು ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನ ಶಫಿ ಸಅದಿ ಹೇಳಿಕೆ ನೀಡಿದ್ದಾರೆ. ಅಲ್ಲದೆ, ಎಲ್ಲರೂ ಶಾಂತಿಯುತವಾಗಿ ಇರಬೇಕು ಎಂದು ಮನವಿ ಮಾಡುತ್ತೇವೆ.
ಹಿಜಾಬ್ ಧರಿಸುವುದರ ಬಗ್ಗೆ ಷರಿಯತ್ ಸಹ ಇದನ್ನು ಸ್ಪಷ್ಟಪಡಿಸಿದೆ. ಹಿಂದೂ-ಮುಸ್ಲಿಮ್ ಸಮುದಾಯದ ಬಿಕ್ಕಟ್ಟು ಅಲ್ಲ. ಇದು ಸಂವಿಧಾನದ ಬಿಕ್ಕಟ್ಟು. ಇದನ್ನು ನಾವು ಹೇಗೆ ನಿರ್ವಹಿಸಬೇಕೋ ಹಾಗೆ ಕಾನೂನು ಪ್ರಕಾರ ನಿರ್ವಹಿಸುತ್ತೇವೆ. ರಾಜಕೀಯ ಷಡ್ಯಂತ್ರಗಳಿಗೆ ಯಾರೊಬ್ಬರೂ ಬಲಿಯಾಗಬಾರದು. ಸುಪ್ರೀಂಕೋರ್ಟ್​ನಲ್ಲಿ ಪ್ರಶ್ನಿಸಲು ನಮಗೆ ಅವಕಾಶವಿದೆ ಎಂದು ಅವರು ಹೇಳಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement