ಕ್ಯಾಮರಾ ಮುಂದೆ ಮೂರು ನಾಗರ ಹಾವುಗಳೊಂದಿಗೆ ಯುವಕನ ಆಟ: ಸಿಟ್ಟಿಗೆದ್ದು ಕಚ್ಚಿದ ಹಾವು..!

posted in: ರಾಜ್ಯ | 0

ನಾಗರ ಹಾವಿನೊಂದಿಗ ಆಟವೆಂದರೆ ಜೀವವನ್ನು ಪಣಕ್ಕಿಡುವುದು ಎಂದು ಹೇಳುತ್ತಾರೆ. ಇಲ್ಲೊಬ್ಬ ಯುವಕ ಮೂರು ನಾಗರಹಾವಿನೊಂದಿಗೆ ಆಟವಾಡಿದ್ದಾನೆ. ಕೊನೆಗೆ ಒಂದು ಹಾವು ಆತನ ಕಾಲಿಗೆ ಕಚ್ಚಿಕೊಂಡಿರುವ ಭಯಾನಕ ವೀಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಯುವಕ ಮೂರು ನಾಗರ ಹಾವುಗಳ ಎದುರು ಕುಳಿತು ಆಟವಾಡಿದ ಯುವಕ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಮಾಜ್ ಸಯೀದ್ ಎಂದು ಹೇಳಲಾಗಿದೆ. ಟ್ವಿಟರ್​ನಲ್ಲಿ ಈ ಆತಂಕಕಾರಿ ವಿಡಿಯೋವನ್ನು ಐಪಿಎಸ್​ ಅಧಿಕಾರಿ ಸುಸಾಂತ್​ ನಂದ ಹಂಚಿಕೊಂಡಿದ್ದಾರೆ.
ವಿಡಿಯೋದಲ್ಲಿ ಯುವಕ ಮೂರು ಹಾವುಗಳ ಎದುರು ಕುಳಿತು ಕೈಗಳನ್ನು ಆಡಿಸುತ್ತಾನೆ. ಅದಕ್ಕೆ ತಕ್ಕಂತೆ ಹಾವುಗಳು ಕುಣಿಯುತ್ತವೆ. ಅವುಗಳ ತಲೆಯನ್ನು ಮುಟ್ಟಿ ಅವುಗಳಿಗೆ ಕೋಪತರಿಸಿದ್ದಾನೆ. ಒಂದು ಹಾವು ಹಾರಿ ಆತನ ಕಾಲಿಗೆ ಕಚ್ಚಿ ಹಿಡಿದಿದೆ.

ಸ್ನೇಕ್‌ಬೈಟ್ ಹೀಲಿಂಗ್ ಅಂಡ್ ಎಜುಕೇಶನ್ ಸೊಸೈಟಿಯ ಅಧ್ಯಕ್ಷೆ ಮತ್ತು ಸಂಸ್ಥಾಪಕಿ ಪ್ರಿಯಾಂಕಾ ಕದಮ್ ಫೇಸ್‌ಬುಕ್ ನಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದು ಸಯದ್ ಅವರನ್ನು ಹಾವು ಕಚ್ಚಿದ ನಂತರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ತಮ್ಮ ತಪ್ಪಾದ ಸಾಹಸದ ಕಾರಣ ಹಾವಿನ ಕಡಿತಕ್ಕೆ ಒಳಗಾಗಿದ್ದಾರೆ.

ಓದಿರಿ :-   ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಸಾಹಿತಿ ಡಿ.ಎಸ್. ನಾಗಭೂಷಣ ನಿಧನ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 2

advertisement

ನಿಮ್ಮ ಕಾಮೆಂಟ್ ಬರೆಯಿರಿ