ಗಾಳಿಮಳೆಗೆ ಶಿರಸಿ ಮಾರಿಕಾಂಬಾ ಜಾತ್ರೆ ಅಸ್ತವ್ಯಸ್ಥ: ಹಾರಿಬಿದ್ದ ಜಾತ್ರಾ ಚಪ್ಪರ-ಅಂಗಡಿಗಳ ತಗಡುಗಳು, ಅಮ್ಯೂಸ್‌ಸ್ಮೆಂಟ್‌ ಪಾರ್ಕ್‌ ಬಂದ್‌..ವೀಕ್ಷಿಸಿ

ಶಿರಸಿ :ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದಲ್ಲಿ ಭಾರೀ ಗಾಳಿ ಮಳೆಗೆ ನಗರದಲ್ಲಿ ನಡೆಯುತ್ತಿರುವ ರಾಜ್ಯದ ದೊಡ್ಡ ಜಾತ್ರೆ ಮಾರಿಕಾಂಬೆ ಜಾತ್ರೆ ಪೇಟೆ ಕೆಲ ಕಾಲ ಅಸ್ತವ್ಯಗೊಂಡ ಘಟನೆ ಶುಕ್ರವಾರ ಸಂಜೆ ನಡೆಯಿತು.

ಯಾವುದೇ ಮುನ್ಸೂಚನೆ ಇಲ್ಲದೆ ದಿಢೀರ್‌ ಬಂದ ಗಾಳಿ ಮಳೆಗೆ ಆತಂಕಗಳಿಗೆ ಸಾಕ್ಷಿಯಾಯಿತು. ಶುಕ್ರವಾರ ಸಂಜೆ ಏಕಾಏಕಿ ಸುರಿದ ಭಾರೀ ಮಳೆಗೆ ಜಾತ್ರೆ ಪೇಟೆ ಅಸ್ತವ್ಯಸ್ತಗೊಂಡಿತು. ಗಾಳಿಯ ಅಬ್ಬರಕ್ಕೆ ಜಾತ್ರೆಯಲ್ಲಿ ಹಾಕಲಾದ ಕೆಲ ಅಂಗಡಿ ಮುಂಗಟ್ಟುಗಳ ತಗಡುಗಳು ಹಾರಿಬಿದ್ದವು. ದೇವಿಯ ಗುದ್ದುಗೆಯ ಮುಂಭಾಗದಲ್ಲಿ ಹಾಕಲಾದ ಮುಖ ಮುಂಟಪ ಗಾಳಿಯ ರಭಸಕ್ಕೆ ವಾಲಿತು. ಗಾಳಿ ಅಬ್ಬರಕ್ಕೆ ನಗರದ ಹಲವೆಡೆ ವಿದ್ಯುತ್ ವ್ಯತ್ಯಯ ಸಹ ಉಂಟಾಯಿತು. ಕೋಟೆಕೆರೆಯ ಪ್ರದೇಶದಲ್ಲಿ ಹಾಕಲಾದ ಅಮ್ಯೂಸ್ಮೇಂಟ್ ಗಳನ್ನು ಕಳಚಿ ಇಡಲಾಗುತ್ತಿದೆ.

ಒಟ್ಟಿನಲ್ಲಿ ನಗರದಲ್ಲಿ ಸುರಿದ ಒಂದು ತಾಸಿನ ಮಳೆಗೆ ಇಡೀ ಜಾತ್ರೆಯ ಸೊಬಗನ್ನು ಹಾಳುಮಾಡಿತು ಹದಿನೈದು ದಿನಗಳಿಂದ ಕಷ್ಟಪಟ್ಟು ಮಾಡಿದ ಬಹುತೇಕ ಕೆಲಸಗಳು ನೀರಿನಲ್ಲಿ ಹೋಮ ಮಾಡಿದಂತಾಯಿತು ಎಂದು ಅಂಗಡಿಕಾರರೋಬ್ಬರು ತೀವ್ರ ಬೇಸರ ವ್ಯಕ್ತಪಡಿಸಿದರು. ಅಂಗಡಿಗಳ ಸಾಮಗ್ರಿಗಳು ನೀರಿನಿಂದ ಒದ್ದೆಯಾದವು.
ಗಾಳಿಮಳೆ ಬಂದು ಆತಂಕ ಸೃಷ್ಟಿಸಿದರೂ ದೇವಿಯ ದರ್ಶನಕ್ಕೆ ಹಾಗೂ ಸೇವೆಗಳಿಗೆ ಯಾವುದೇ ತೊಂದರೆ ಉಂಟಾಗಿಲ್ಲ. ಮಳೆ ನಿಂತ ಒಂದು ಗಂಟೆಯಲ್ಲಿ ಜಾತ್ರೆ ಪೇಟೆ ಎಂದಿನಂತೆ ಯಥಾ ಸ್ಥಿತಿಯಲ್ಲಿ ಕಂಡುಬಂತು. ಆದರೆ ಕೆಲ ಅಂಗಡಿಗಳಿಗೆ ಹಾನಿಯಾದ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ ಕೆಲವು ಅಂಗಡಿಗಳನ್ನು ಬಂದ್‌ ಮಾಡಲಾಗಿತ್ತು. ಉಳಿದಂತೆ ಭಕ್ತರು ಹುಮ್ಮಸ್ಸಿನಲ್ಲೇ ದೇವಿಯ ದರ್ಶನ ಪಡೆದರು.

ಗಾಳಿ ಮಳೆಯಿಂದಾಗಿ ಅನ್ಯೂಸ್ಮೆಂಟ್‌ ಪಾರ್ಕ್‌ ಬಂದ್‌ ಮಾಡಲಾಗಿದ್ದು, ಕೆಲವನ್ನು ಕಳಚಿ ಇಡಲಾಯಿತು. ಜಾತ್ರಾ ಅವಧಿಯಲ್ಲಿ ಶುಕ್ರವಾರ, ಶನಿವಾರ, ಭಾನುವಾರ ಅತೀ ಹೆಚ್ಚಿನ ಆದಾಯದ ನೀರೀಕ್ಷೆ ಮಾಡಲಾಗಿತ್ತು. ಆದರೆ ಮಳೆ ಬಂದು ಕೊಂಚ ತೊಂದರೆ ನೀಡಿದೆ.

ಭಾರೀ ಮಳೆಯಿಂದ ನಗರದಲ್ಲಿ ರಾತ್ರಿಯ ವರೆಗೆ ವಿದ್ಯುತ್‌ ವ್ಯತ್ಯಯ ಉಂಟಾಗಿದ್ದು, ತೊಂದರೆಗೆ ಕಾರಣವಾಯಿತು. ಜಾತ್ರೆ ಪೇಟೆಯಲ್ಲಿ ಬೆಳಕಿನ ವ್ಯವಸ್ಥೆ ಮಾಡಲಾಗಿದ್ದರೂ ನಗರದಾದ್ಯಂತ ವಿದ್ಯುತ್‌ ಕೈಕೊಟ್ಟಿತ್ತು.

ಪ್ರಮುಖ ಸುದ್ದಿ :-   ಸಿಎಂ ಸಿದ್ದರಾಮಯ್ಯ ಹೇಳಿಕೆಯಿಂದ ನಮ್ಮ ಮನೆತನದ ಗೌರವ ಹಾಳಾಗುತ್ತಿದೆ : ನೇಹಾ ತಂದೆ ನಿರಂಜನ ಹಿರೇಮಠ

ಹಳಿಯಾಳ, ದಾಂಡೇಲಿ ಸುತ್ತಮುತ್ತಲೂ ಜೋರಾಗಿ ಮಳೆಯಾಗಿದೆ. ಉಳಿದಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣವಿತ್ತು.

ಉಡುಪಿ ಜಿಲ್ಲೆಯಲ್ಲಿ ಮಳೆ..
ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನಲ್ಲಿ ಮಳೆಯಾಗಿದೆ. ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಇದ್ದು, ಕೆಲವೆಡೆ ಸಾಧಾರಣ ಮಳೆಯಾಗಿದೆ. ಕಳೆದ ಒಂದು ವಾರದಿಂದ ಸದ್ಯ ಕರಾವಳಿ ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಕಾರ್ಕಳ ಉತ್ಸವದ ಸಭಾಕಾರ್ಯಕ್ರಮಕ್ಕೆ ಮಳೆ ಅಡ್ಡಿಯಾಗಿದೆ.

ಚಿಕ್ಕಮಗಳೂರು: ಕಳಸ ಸುತ್ತಮುತ್ತ ಗಾಳಿಮಳೆ
ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನಲ್ಲಿ ಮಳೆಯ ಅಬ್ಬರ ಹೆಚ್ಚಾಗಿದೆ. ಬಿರುಗಾಳಿ ಮಳೆಗೆ ವಿದ್ಯುತ್ ಕಂಬಗಳು ಉರುಳಿಬಿದ್ದಿವೆ. ಹಲವೆಡೆ ಮನೆ ಮೇಲಿನ ತಗಡುಗಳು ಹಾರಿಹೋಗಿದೆ. ರಸ್ತೆ ಮೇಲೆ ಉರುಳಿ ಬಿದ್ದ ಮರದ ಕೊಂಬೆಗಳಿಂದ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಶೃಂಗೇರಿ ತಾಲೂಕಿನ ಹಲವೆಡೆ ಕೂಡ ಭಾರೀ ಮಳೆಯಾಗಿದೆ.

ಕೊಡಗು ಜಿಲ್ಲೆಯಲ್ಲಿಯೂ ಮಳೆ ಜೋರಾಗಿದೆ. ಹಾವೇರಿ ಜಿಲ್ಲೆಯ ಹಾನಗಲ್ ಪಟ್ಟಣ, ಅರಳೇಶ್ವರ ಗ್ರಾಮ ಸೇರಿದಂತೆ ಕೆಲವೆಡೆ ಮಳೆಯಾಗಿದೆ. ಹದಿನೈದು ನಿಮಿಷಗಳ ಕಾಲ ಗಾಳಿ ಮತ್ತು ಗುಡುಗಿನೊಂದಿಗೆ ಮಳೆಯಾಗಿದೆ.

ಪ್ರಮುಖ ಸುದ್ದಿ :-   ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ: ಮಗನಿಗೆ ಯಾವ ಶಿಕ್ಷೆ ಕೊಟ್ರೂ ಸ್ವಾಗತಿಸ್ತೇನೆ ಎಂದ ಕೊಲೆ ಆರೋಪಿ ಫಯಾಜ್‌ ತಂದೆ

3 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement