ಗುದನಾಳದಲ್ಲಿ 36 ಲಕ್ಷ ರೂ. ಮೌಲ್ಯದ ಚಿನ್ನ ಬಚ್ಚಿಟ್ಟು ಕಳ್ಳ ಸಾಗಣೆ

ಮಂಗಳೂರು: 36 ಲಕ್ಷ ರೂ. ಮೌಲ್ಯದ 706 ಗ್ರಾಂ ಚಿನ್ನವನ್ನು ಗುದನಾಳದಲ್ಲಿ ಬಚ್ಚಿಟ್ಟುಕೊಂಡು ಅಕ್ರಮವಾಗಿ ಸಾಗಿಸುತ್ತಿದ್ದ ಪ್ರಯಾಣಿಕನೊಬ್ಬನನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ಶುಕ್ರವಾರ (ಮಾರ್ಚ್ 18) ಬಂಧಿಸಿದ್ದಾರೆ.

ದುಬೈಯಿಂದ ಬಂದಿದ್ದ ವ್ಯಕ್ತಿ ಪೇಸ್ಟ್ ರೂಪದಲ್ಲಿ ಚಿನ್ನವನ್ನು ಗುದನಾಳದಲ್ಲಿ ಬಚ್ಚಿಟ್ಟುಕೊಂಡು ಬಂದಿದ್ದ. ಆತನ ಬಳಿ 24 ಕ್ಯಾರೆಟ್ ನ 706 ಗ್ರಾಂ ಚಿನ್ನ ಪತ್ತೆಯಾಗಿದ್ದು, ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಚಿನ್ನದ ಒಟ್ಟು ಮೌಲ್ಯ 36.53 ಲಕ್ಷ ರೂ.ಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಈ ರೀತಿಯ ಹಲವು ಪ್ರಕರಣಗಳು ಈ ಹಿಂದೆಯೂ ಇಂತಹ ಚಿನ್ನ ಕಳ್ಳ ಸಾಗಣೆ ಮಾಡುವರು ಕಸ್ಟಮ್ಸ್‌ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿರುವುದು ವರದಿಯಾಗಿದೆ.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಆದಿತ್ಯ ಎಲ್‌1, ಪ್ರೋಬಾ-3 ಉಪಗ್ರಹಗಳ ನೆರವಿನಿಂದ ಸೌರ ಸ್ಫೋಟಗಳ ರಹಸ್ಯ ಬಯಲು ಮಾಡಿದ ವಿಜ್ಞಾನಿಗಳು

ನಿಮ್ಮ ಕಾಮೆಂಟ್ ಬರೆಯಿರಿ

advertisement