ಮಂಗಳೂರು: ಆರ್ ಎಸ್ ಎಸ್ ಪ್ರಮುಖ ಕಲ್ಲಡ್ಕ ಪ್ರಭಾಕರ್ ಭಟ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ನ ತುಷ್ಟೀಕರಣ ನೀತಿಯಿಂದ ಭಾರತದ ಧ್ವಜ ತುಂಡಾಗಿದೆ. ಒಂದಲ್ಲ ಒಂದು ದಿನ ಕೇಸರಿ ಧ್ವಜ ನಮ್ಮ ರಾಷ್ಟ್ರಧ್ವಜ ಆಗಬಹುದು ಎಂದು ಹೇಳಿದ್ದಾರೆ. ಕುತ್ತಾರಿನ ಕೊರಗಜ್ಜ ಕ್ಷೇತ್ರಕ್ಕೆ ನಮ್ಮ ನಡೆ ಸಮಾರೋಪ ಸಮಾರಂಭದಲ್ಲಿ ಮಾತಾಡಿದ ಅವರು ಕೇಸರಿ ಧ್ವಜ ರಾಷ್ಟ್ರಧ್ವಜ ಆಗಬಹುದು ಎಂದು ಹೇಳಿದ್ದಾರೆ.
advertisement
9535127775 / 9901837775 / 6364528715 / 08362775155 / https://icsmpucollege.com/
ಈ ಮೂರು ಬಣ್ಣದ ಧ್ವಜ ಯಾರು ನಿರ್ಮಾಣ ಮಾಡಿದರು? ಅದಕ್ಕೂ ಮೊದಲು ಮೊದಲು ಬ್ರಿಟಿಷರ ಧ್ವಜ ಇತ್ತು, ಅದಕ್ಕೂ ಮೊದಲು ಹಸಿರು ನಕ್ಷತ್ರ, ಚಂದ್ರನ ಧ್ವಜ ಇತ್ತು ಎಂದು ಹೇಳಿದ್ದಾರೆ. ಧ್ವಜ ಬದಲು ಮಾಡಲು ಸಾಧ್ಯವಿಲ್ಲ ಎಂದೇನೂ ಇಲ್ಲ. ಹೀಗೆಯೇ ಮುಂದುವರಿದರೆ ಹಿಂದೂ ಸಮಾಜ ಒಟ್ಟಾಗುತ್ತದೆ ಎಂದು ಹೇಳಿದರು.
ಇವತ್ತು ಕಾಶ್ಮೀರ ಫೈಲ್ಸ್ ಸಿನೆಮಾದಲ್ಲಿ ನೋಡುವುದು ಸಣ್ಣ ದೃಶ್ಯಗಳು ಮಾತ್ರ. ದೇಶದಲ್ಲಿ ಧರ್ಮದ ಹತ್ಯೆ ಆದಾಗಲೂ ಕಾಂಗ್ರೆಸ್ ಸುಮ್ಮನಿತ್ತು. ಈಗ ಅದೇ ರೀತಿ ಹಿಜಾಬ್ ಬಂದಿದೆ. ಅವರಿಗೆ ಕಿತಾಬ್ ಬೇಡ, ಎಲ್ಲಾ ವ್ಯವಸ್ಥೆ ಕೊಟ್ಟರೂ ಪ್ರತ್ಯೇಕವಾದಿ ಮನೋಭಾವ ಇದೆ. ಇದು ಈ ದೇಶವನ್ನು ಮುಂದೆ ತುಂಡು ಮಾಡಬಹುದು ಎಂದು ಹೇಳಿದರು.
ಭಗವದ್ಗೀತೆ ಎಂಬುದು ಈ ದೇಶದ ಅಂತಃಸತ್ವ. ಹಾಗಾಗಿ ಅದನ್ನು ಶಾಲೆಗಳಲ್ಲಿ ಅಳವಡಿಸುವುದು ಸರಿಯಾದ ಕ್ರಮ. ಗೀತೆ ಓದಿದವರು ಯಾರಿಗೂ ಕೇಡು ಬಗೆಯಲು ಮುಂದಾಗುವುದಿಲ್ಲ. ಈ ಹಿಂದಿನ ಸರಕಾರಗಳು ಸೆಕ್ಯುಲರ್ ಹೆಸರಿನಲ್ಲಿ ನಮಗೆ ಅನ್ಯಾಯ ಮಾಡಿವೆ ಎಂದರು.
ಆಂಗ್ಲರು ಭಾರತಕ್ಕೆ ಬಂದ ಮೇಲೆ ಇಲ್ಲಿನ ವೈವಿಧ್ಯತೆ ನಾಶಮಾಡಲು ಧರ್ಮ ಎಂಬ ಪದವನ್ನು ಜಾರಿಗೆ ತಂದರು. ಧರ್ಮ ಎಂದರೆ ಜೀವನ ಕ್ರಮ ಎಂದು ಕೋರ್ಟ್ ಹೇಳಬೇಕಾಯಿತು.ಎಂದರು. ಪ್ರಸಕ್ತ ಎಲ್ಲ ಕಡೆಗಳಲ್ಲಿ ವಿಕೃತಿಯೇ ಕಾಣುತ್ತಿದೆ. ಹಾಗಾಗಿ ಮಕ್ಕಳಿಗೆ ರಾಮಾಯಣ, ಮಹಾಭಾರತ ಕಲಿಸಬೇಕು ಎಂದು ಪ್ರತಿಪಾದಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ