ರಂಗಭೂಮಿ ಕಲಾವಿದೆ ಮೇಲೆ ಸಹಪಾಠಿಗಳಿಂದಲೇ ಆ್ಯಸಿಡ್ ದಾಳಿ

posted in: ರಾಜ್ಯ | 0

ಬೆಂಗಳೂರು: ರಂಗಭೂಮಿ ಕಲಾವಿದೆಯೊಬ್ಬರ ಮೇಲೆ ಆ್ಯಸಿಡ್​ ದಾಳಿ ಮಾಡಿರುವ ಘಟನೆ ನಗರದ ನಂದಿನಿಲೇಔಟ್​ನ ಗಣೇಶ ಬ್ಲಾಕ್​ನಲ್ಲಿ ಮಾರ್ಚ್​ 18ರಂದು ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.

ಆ್ಯಸಿಡ್ ದಾಳಿಯಿಂದ ಗಾಯಗೊಂಡ ದೇವಿ ಅವರು ರಂಗಭೂಮಿ ಕಲಾವಿದೆಯಾಗಿದ್ದಾರೆ. ಮಾರ್ಚ್‌18 ರಂದು ಮನೆಯ ಜಗಲಿಯ ಮೇಲೆ‌ ಮಲಗಿದ್ದ ವೇಳೆ ಆಸಿಡ್ ದಾಳಿ ಮಾಡಲಾಗಿದೆ ಎಂದು ವರದಿಯಾಗಿದೆ. ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದೇವಿ ಅವರು ಈ ಹಿಂದೆ ಬಿಎಂಟಿಸಿಯಲ್ಲಿ ನಿರ್ವಾಹಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಅನಾರೋಗ್ಯದ ಕಾರಣ ನೀಡಿ ಹುದ್ದೆ ತೊರೆದಿದ್ದಾರೆ.
ದೇವಿ ಅವರು ರಂಗಭೂಮಿ ಕಲಾವಿದೆಯಾಗಿದ್ದು, ರಂಗಭೂಮಿಯ ಸಹಪಾಠಿಗಳಿಂದಲೇ ಈ ದುಷ್ಕೃತ್ಯ ನಡೆದಿದೆ. ಆ್ಯಸಿಡ್ ದಾಳಿ ನಡೆಸಿದ ಆರೋಪಿಗಳಾದ ರಮೇಶ್​, ಸ್ವಾತಿ ಮತ್ತು ಯೋಗೇಶ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ನಂದಿನಿಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ಓದಿರಿ :-   ಮುಂದಿನ 15 ದಿನಗಳ ಕಾಲ ಅಧಿಕಾರಿಗಳು ರಜೆ ತೆಗೆದುಕೊಳ್ಳುವಂತಿಲ್ಲ:ಸಿಎಂ ಬೊಮ್ಮಾಯಿ ಸೂಚನೆ
advertisement

ನಿಮ್ಮ ಕಾಮೆಂಟ್ ಬರೆಯಿರಿ