ಬೃಹತ್ ಬಳಕೆದಾರರಿಗೆ ಡೀಸೆಲ್ ಬೆಲೆ ಲೀಟರ್‌ಗೆ 25 ರೂ.ಗಳಷ್ಟು ಹೆಚ್ಚಳ

ನವದೆಹಲಿ: ಮುಂಬಯಿ : ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಯಲ್ಲಿ ಶೇಕಡಾ 40 ರಷ್ಟು ಏರಿಕೆಗೆ ಅನುಗುಣವಾಗಿ ಬೃಹತ್ ಬಳಕೆದಾರರಿಗೆ ಸಗಟು ಬಳಕೆದಾರರಿಗೆ ಮಾರಾಟವಾಗುವ ಡೀಸೆಲ್ ಬೆಲೆಯನ್ನು ಲೀಟರ್‌ಗೆ ಸುಮಾರು 25 ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ, ಆದರೆ ಪೆಟ್ರೋಲ್ ಬಂಕ್ ಗಳಲ್ಲಿ ಚಿಲ್ಲರೆ ದರಗಳು ಬದಲಾಗದೆ ಉಳಿದಿವೆ ಎಂದು ಮೂಲಗಳು ತಿಳಿಸಿವೆ.

ಈ ಹಿಂದೆಯೇ ಸುಳಿವು ಇದ್ದಂತೆ ತೈಲ ಬೆಲೆಯಲ್ಲಿ ಭಾರಿ ಹೆಚ್ಚಳವಾಗಿದ್ದು, ಡೀಸೆಲ್​ ದರ ಲೀಟರ್​ವೊಂದಕ್ಕೆ 25 ರೂಪಾಯಿ ಏರಿದೆ. ಅದಾಗ್ಯೂ ಚಿಲ್ಲರೆಯಾಗಿ ಡೀಸೆಲ್ ಭರಿಸಿಕೊಳ್ಳುವ ವಾಹನ ಮಾಲೀಕರು ಚಿಂತೆ ಮಾಡಬೇಕಿಲ್ಲ. ಯಾಕೆಂದರೆ ಅವರಿಗೆ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಈ ಬೆಲೆ ಏರಿಕೆ ಸದ್ಯಕ್ಕೆ ಸಗಟು ಮಾರಾಟಗಾರರಿಗಷ್ಟೇ ಅನ್ವಯಿಸುತ್ತದೆ. ಬಸ್ ಗಳ ಸಂಸ್ಥೆಗಳ ಮಾಲೀಕರು ಮತ್ತು ಮಾಲ್‌ಗಳಂತಹ ಬೃಹತ್ ಬಳಕೆದಾರರು ತೈಲ ಕಂಪನಿಗಳಿಂದ ನೇರವಾಗಿ ಆರ್ಡರ್ ಮಾಡುತ್ತಾರೆ.
ಬೃಹತ್ ಬಳಕೆದಾರ ದರ ಮತ್ತು ಪೆಟ್ರೋಲ್ ಪಂಪ್ ಬೆಲೆ ನಡುವೆ ಲೀಟರ್‌ಗೆ ಸುಮಾರು 25 ರೂ.ಗಳ ವ್ಯತ್ಯಾಸ ಆಗುವುದರಿಂದ ತೈಲ ಕಂಪನಿಗಳಿಂದ ನೇರವಾಗಿ ಟ್ಯಾಂಕರ್‌ಗಳನ್ನು ಖರೀದಿ ಮಾಡುವ ಬದಲು ಪೆಟ್ರೋಲ್ ಪಂಪ್‌ಗಳಲ್ಲಿ ಇಂಧನ ತುಂಬಿಸಿಕೊಳ್ಳಲು ಬೃಹತ್ ಬಳಕೆದಾರರನ್ನು ಪ್ರೇರೇಪಿಸಿದೆ.

ಪ್ರಮುಖ ಸುದ್ದಿ :-   ಗೂಢಲಿಪಿ ಬಹಿರಂಗಗೊಳಿಸಲು ಒತ್ತಾಯಿಸಿದರೆ ಭಾರತದಿಂದ ನಿರ್ಗಮಿಸಬೇಕಾಗ್ತದೆ ಎಂದ ವಾಟ್ಸಾಪ್

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement