ಪಣಜಿ: ಪ್ರಮೋದ್ ಸಾವಂತ್ ಅವರು ಸತತ ಎರಡನೇ ಅವಧಿಗೆ ಗೋವಾದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಕರಾವಳಿ ರಾಜ್ಯದಲ್ಲಿ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಸಸ್ಪೆನ್ಸ್‌ಗೆ ಬಿಜೆಪಿ ಇಂದು, ಸೋಮವಾರ ಅಂತ್ಯ ಹಾಡಿದ್ದು, ಪ್ರಮೋದ ಸಾವಂತ್ ಹೆಸರನ್ನು ಘೋಷಿಸಿದೆ. ಗೋವಾದಲ್ಲಿ ಬಿಜೆಪಿ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬರುತ್ತಿದೆ.
ಗೋವಾ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪಕ್ಷದಿಂದ ಕೇಂದ್ರ ವೀಕ್ಷಕರಾಗಿ ರಾಜ್ಯಕ್ಕೆ ನಿಯೋಜಿತರಾಗಿದ್ದ ನರೇಂದ್ರ ಸಿಂಗ್ ತೋಮರ್ ಸೇರಿದಂತೆ ಹಲವು ಹಿರಿಯ ನಾಯಕರು ಭಾಗವಹಿಸಿದ್ದ ಪಕ್ಷದ ಸಭೆಯಲ್ಲಿ ಸಾವಂತ್ ಅವರನ್ನು ಇಂದು, ಸೋಮವಾರ ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕ ಎಂದು ಘೋಷಿಸಲಾಯಿತು.
advertisement
9535127775 / 9901837775 / 6364528715 / 08362775155 / https://icsmpucollege.com/
ಪಕ್ಷದ ಹೈಕಮಾಂಡ್‌ನಿಂದ ರಾಜ್ಯ ಚುನಾವಣೆಗೆ ರಾಜ್ಯಕ್ಕೆ ನಿಯೋಜಿಸಲಾದ ಕೇಂದ್ರ ವೀಕ್ಷಕ ನರೇಂದ್ರ ಸಿಂಗ್ ತೋಮರ್ ಪ್ರಕಾರ, ಸಭೆಯಲ್ಲಿ ಸಾವಂತ್ ಅವರ ಅವಿರೋಧ ಆಯ್ಕೆಯಾಗಿದೆ. ಗೋವಾದಲ್ಲಿ ಶೀಘ್ರವೇ ಬಿಜೆಪಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದೆ.
ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಕೇಂದ್ರ ವೀಕ್ಷಕರಾಗಿ ಇಲ್ಲಿಗೆ ಬಂದಿದ್ದೇವೆ. ಗೋವಾದ ಚುನಾವಣಾ ಉಸ್ತುವಾರಿಯಾಗಿದ್ದ ದೇವೇಂದ್ರ ಫಡ್ನವೀಸ್, ಸಿ.ಟಿ.ರವಿ, ಸದಾನಂದ್ ತಾನವ್ಡೆ, ಶ್ರೀಪಾದ್ ನಾಯಕ್ ಮತ್ತು ಇತರರೊಂದಿಗೆ ಉಪಸ್ಥಿತರಿದ್ದರು, ”ಎಂದು ನರೇಂದ್ರ ತೋಮರ್ ತಿಳಿಸಿದ್ದಾರೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.
ನಿಮ್ಮ ಕಾಮೆಂಟ್ ಬರೆಯಿರಿ