ಶಿವಮೊಗ್ಗ: ಪ್ರಿಯಕರನ ಮದುವೆ ದಿನದಂದೇ ಯುವತಿ ಆತ್ಮಹತ್ಯೆ…ಪ್ರಿಯಕರ ಮದುವೆ ಮಂಟಪದಿಂದಲೇ ಪರಾರಿ

posted in: ರಾಜ್ಯ | 0

ಶಿವಮೊಗ್ಗ : ಬೇರೆ ಯುವತಿ ಜೊತೆಗೆ ಪ್ರಿಯಕರನ ಮದುವೆ ಆಗುತ್ತಿರುವುದರಿಂದ ಮನನೊಂದು ಪ್ರಿಯತಮೆ  ಆತನ ಮದುವೆ ದಿನದಂದೇ ಆತ್ಮಹತ್ಯೆಗೆ ಶರಣಾದ ಘಟನೆ ನಡೆದ ಬಗ್ಗೆ ವರದಿಯಾಗಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ಪ್ರಿಯಕರ ಮದುವೆ ಮಂಟಪದಿಂದಲೇ ಕಾಲ್ಕಿತ್ತಿದ್ದಾನೆ..!
ಶಿವಮೊಗ್ಗದ ಓ.ಟಿ.ರಸ್ತೆಯ ರೂಪಶ್ರೀ ಎಂಬವರು ಮನನೊಂದು ಮನೆಯಲ್ಲೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಅವರು ನಾಲ್ಕು ಪುಟದ ಡೆತ್ ನೋಟ್ ಬರೆದಿದ್ದು, ಅದರಲ್ಲಿ ಪ್ರಿಯಕರನ ವಿರುದ್ಧ ಆರೋಪ ಮಾಡಿದ್ದಾರೆ.

ರೂಪಶ್ರೀ ಬಹು ವರ್ಷದಿಂದ ಮುರಳಿ ಎಂಬವರನ್ನು ಪ್ರೀತಿಸುತ್ತಿದ್ದರು. ಆದರೆ ಮುರಳಿಯ ಮದುವೆ ಬೇರೆ ಯುವತಿಯೊಂದಿಗೆ ಶಿವಮೊಗ್ಗದಲ್ಲಿ ಮದುವೆ ನಿಶ್ಚಯವಾಗಿತ್ತು. ಇದು ಗೊತ್ತಾಗಿ ಮನನೊಂದ ರೂಪಶ್ರೀ ಮದುವೆ ದಿನವೇ ನೇಣಿಗೆ ಶರಣಾಗಿದ್ದಾರೆ.
ಸಾವಿಗೂ ಮುನ್ನ ರೂಪಶ್ರೀ ಅವರು ಬರೆದಿಟ್ಟ ಡೆತ್ ನೋಟ್ ಪತ್ತೆಯಾಗಿದೆ. ಆತ್ಮಹತ್ಯೆಗೆ ಪ್ರಚೋದನೆ ಆರೋಪದ ಅಡಿ ಪ್ರಕರಣ ದಾಖಲು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆದಿಚುಂಚನಗಿರಿ ಸಮುದಾಯ ಭವನದಲ್ಲಿ ನಡೆದ ಮದುವೆಯಲ್ಲಿ ಯುವತಿಗೆ ವರ ತಾಳಿ ಕಟ್ಟಿದ್ದಾನೆ. ಆದರೆ ರೂಪಶ್ರೀ ಆತ್ಮಹತ್ಯೆಯ ವಿಚಾರ ತಿಳಿಯುತ್ತಿದ್ದ ಹಾಗೆ ಕಲ್ಯಾಣ ಮಂಟಪದಿಂದಲೇ ಪರಾರಿಯಾಗಿದ್ದಾನೆ.
ರೂಪಶ್ರೀ ಹಾಗೂ ಮುರಳಿ ಕೂಡ ಉಪನ್ಯಾಸಕನಾಗಿದ್ದ. ಶಿವಮೊಗ್ಗದವರೇ ಆಗಿದ್ದ ಇವರಿಬ್ಬರು ನಾಲ್ಕೈದು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಆದರೆ ಮುರಳೀ ರೂಪಶ್ರೀಯನ್ನು ಬಿಟ್ಟು ಮನೆಯಲ್ಲಿ ನಿಶ್ಚಯಿಸಿದ್ದ ಯುವತಿ ಜೊತೆಗೆ ಮುರಳಿ ಮದುವೆಗೆ ಮುಂದಾಗಿದ್ದ.
ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಮುರಳಿಗಾಗಿ ಪತ್ತೆ ಕಾರ್ಯ ನಡೆಯುತ್ತಿದೆ.

ಓದಿರಿ :-   ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಸಾಹಿತಿ ಡಿ.ಎಸ್. ನಾಗಭೂಷಣ ನಿಧನ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 2

advertisement

ನಿಮ್ಮ ಕಾಮೆಂಟ್ ಬರೆಯಿರಿ