ನೋಯ್ಡಾದಲ್ಲಿ ಮಧ್ಯರಾತ್ರಿಯಲ್ಲಿ ಪ್ರತಿದಿನ ರಸ್ತೆಯಲ್ಲಿ ಈ ಹುಡುಗ 10 ಕಿಮೀ ಓಡ್ತಾನೆ…! ಕಾರಣ ಕೇಳಿದ್ರೆ ನೀವೇ ಅಚ್ಚರಿ ಪಡ್ತೀರಾ..ವೀಕ್ಷಿಸಿ

ನವದೆಹಲಿ: ಮಧ್ಯರಾತ್ರಿ ನೋಯ್ಡಾ ರಸ್ತೆಯಲ್ಲಿ 19 ವರ್ಷದ ಹುಡುಗನೊಬ್ಬ ಓಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ವೀಕ್ಷಣೆಗೆ ಒಳಗಾಗಿದೆ. ಪ್ರತಿದಿನ ಖಾಲಿ ಇರುವ ನೋಯ್ಡಾ ಬೀದಿಯಲ್ಲಿ ಹುಡುಗ ಓಡುವುದರ ಹಿಂದಿನ ಕಾರಣವೇನು ಎಂದು ತಿಳಿದರೆ ಅದು ಸ್ಫೂರ್ತಿದಾಯಕವಾಗಿದೆ.
ನಮ್ಮ ಜೀವನದಲ್ಲಿನ ಸಣ್ಣದೊಂದು ಅಸ್ವಸ್ಥತೆಯ ಬಗ್ಗೆ ನಾವು ಹೇಳಿಕೊಳ್ಳುತ್ತಿರುವಾಗ, ಇಲ್ಲಿ ಉತ್ತರಾಖಂಡದ ಹುಡುಗ ಪ್ರದೀಪ್ ಮೆಹ್ರಾ ತನ್ನ ಉದ್ಯೋಗ, ಮನೆ ಕೆಲಸ ಮುಗಿಸಿಕೊಂಡುಮತ್ತು ಸೈನ್ಯಕ್ಕೆ ಸೇರುವ ತನ್ನ ಕನಸನ್ನು ಜಗ್ಲಿಂಗ್ ಮಾಡುತ್ತಿದ್ದಾರೆ.

ಪಾದಚಾರಿ ಮಾರ್ಗದಲ್ಲಿ ಓಡುತ್ತಿದ್ದ ಹದಿಹರೆಯದ ಪ್ರದೀಪ ಹಿಂದೆ ಕಾರು ಚಲಾಯಿಸುತ್ತಿದ್ದಾಗ ಪ್ರದೀಪ್ ಚಿತ್ರ ನಿರ್ಮಾಪಕ ವಿನೋದ್ ಕಪ್ರಿ ಅವರ ಗಮನ ಸೆಳೆದರು. ಕಪ್ರಿ ಅವರು ಪ್ರದೀಪಗೆ ಮನೆಯವರೆಗೆ ಲಿಫ್ಟ್ ಅನ್ನು ನೀಡುವ ಮಾತನ್ನಾಡಿದರು. ಆದರೆ ಬೆವರಿನಿಂದ ತೊಯ್ದಿದ್ದರೂ ಹುಡುಗ ಪ್ರದೀಪ ನಯವಾಗಿ ಲಿಫ್ಟ್‌ ಅನ್ನು ನಿರಾಕರಿಸಿದ್ದಾರೆ. ಇದು ಚಿತ್ರನಿರ್ಮಾಪಕನಿಗೆ ಬಹಳ ಕುತೂಹಲವನ್ನುಂಟು ಮಾಡಿತು ಮತ್ತು ಅವರು ಈ ಹುಡುಗನ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಅವರು ಉತ್ಸುಕರಾದರು. ಹೀಗಾಗಿ ಅವರು ಆ ಹುಡುಗನ ಪಕ್ಕದಲ್ಲೇ ಕಾರು ಚಲಾಯಿಸುತ್ತ ತಮ್ಮ ಸಂಭಾಷಣೆಯನ್ನು ಮುಂದುವರೆಸಿದರು. ಹದಿಹರೆಯದ ಹುಡುಗ ಪ್ರತಿದಿನ 10 ಕಿಮೀ ತಾನು ಓಡುವುದಕ್ಕೆ ಕಾರಣವನ್ನು ಬಹಿರಂಗಪಡಿಸಿದರು.

ಪ್ರಮುಖ ಸುದ್ದಿ :-   ಮುಂಬೈ ನಾರ್ತ್ ಸೆಂಟ್ರಲ್ ಕ್ಷೇತ್ರದಿಂದ ಮುಂಬೈ 26/11 ಭಯೋತ್ಪಾದಕ ದಾಳಿ ಪ್ರಕರಣದಲ್ಲಿ ವಾದಿಸಿದ್ದ ಉಜ್ವಲ್ ನಿಕಮ್ ಕಣಕ್ಕಿಳಿಸಿದ ಬಿಜೆಪಿ

https://twitter.com/vinodkapri/status/1505535421589377025?ref_src=twsrc%5Etfw%7Ctwcamp%5Etweetembed%7Ctwterm%5E1505535421589377025%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fboy-runs-home-from-work-at-midnight-in-noida-inspiring-viral-video-has-over-4-million-views-1927428-2022-03-21

ಮೆಕ್‌ಡೊನಾಲ್ಡ್ ಸೆಕ್ಟರ್ 16 ರಲ್ಲಿನ ಶಿಫ್ಟ್ ನಂತರ ತಾನು ಕೆಲಸ ಮುಗಿಸಿ ಮನೆಗೆ ಓಡುತ್ತಿದ್ದೇನೆ ಎಂದು ಪ್ರದೀಪ್ ಹೇಳಿದರು. ವಿನೋದ್ ಕಪ್ರಿ ಅವರಿಗೆ ಹಲವಾರು ಬಾರಿ ತನ್ನ ಮನೆಗೆ ಲಿಫ್ಟ್ ನೀಡುವುದಾಗಿ ಹೇಳಿದ್ದರೂ, ಪ್ರದೀಪ ನಿರಾಕರಿಸಿದರು, ಏಕೆಂದರೆ ಅವರು ಮನೆಗೆ ಓಡುತ್ತಲೇ ಹೋಗಲು ಇಷ್ಟಪಡುತ್ತಾರೆ. ಅವರಿಗೆ ಓಡಲು ಸಮಯ ಸಿಗುವುದು ತಮ್ಮ ಕೆಲಸದ ಶಿಫ್ಟ್‌ ಮುಗಿಸದಾಗಲೇ. ಹೀಗೆ ಪ್ರತಿ ದಿನ ಓಡುತ್ತಿರುವುದಕ್ಕೆ ಕಾರಣ ಕೇಳಿದಾಗ, ‘ಸೇನೆಗೆ ಸೇರಲು ತನಗೆ ಉತ್ಕಟ ಬಯಕೆ ಇರುವುದರಿಂದ ತಾನು ಪ್ರತಿದಿನ ಈ ರೀತಿ ಓಡುತ್ತೇನೆ’ ಎಂದ ಪ್ರದೀಪ್ ಹೇಳಿದರು.
ಅವರ ಸಂಭಾಷಣೆಯ ಸಮಯದಲ್ಲಿ, ಉತ್ತರಾಖಂಡದ ಪ್ರದೀಪ, ಬೆಳಿಗ್ಗೆ ಇದಕ್ಕೆ ನನಗೆ ಸಮಯ ಇರುವುದಿಲ್ಲ ಎಂದು ಚಲನಚಿತ್ರ ನಿರ್ಮಾಪಕರಿಗೆ ತಿಳಿಸಿದ್ದಾರೆ, ಯಾಕೆಂದರೆ ಪ್ರದೀಪ ಮೆಹ್ರಾ ಪ್ರತಿದಿನ ಬೆಳಿಗ್ಗೆ 8 ಗಂಟೆಗೆ ಕೆಲಸಕ್ಕೆ ಹೋಗುವ ಮೊದಲು ಆಹಾರ ತಯಾರಿಸಬೇಕು ಹಾಗೂ ಮನೆ ಕೆಲಸ ಮಾಡಬೇಕು. ಮೆಹ್ರಾ ನೋಯ್ಡಾದ ಸೆಕ್ಟರ್ 16 ರಲ್ಲಿನ ಅವರ ಕೆಲಸ ಮಾಡುತ್ತಿರುವ ಸ್ಥಳದಿಂದ ಬರೋಲಾದಲ್ಲಿನ ಅವರ ಮನೆಗೆ ಪ್ರತಿದಿನ 10-ಕಿಮೀ ಓಡುತ್ತಾರೆ, ಅಲ್ಲಿ ಅವರು ತಮ್ಮ ಕಿರಿಯ ಸಹೋದರನೊಂದಿಗೆ ಇರುತ್ತಾರೆ. ಅವರ ತಾಯಿ ಅಸ್ವಸ್ಥರಾಗಿದ್ದು, ಸದ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪ್ರದೀಪ ತಿಳಿಸಿದ್ದಾರೆ.
ಈ ಯುವಕನ ದೃಢಸಂಕಲ್ಪ ಮತ್ತು ನಿಷ್ಠುರತೆಗೆ ಅಂತರ್ಜಾಲವು ವಿಸ್ಮಯವಾಗಿದೆ. ಪ್ರದೀಪ್ ಅವರ ಕಥೆಯನ್ನು ಹೊರತಂದಿದ್ದಕ್ಕಾಗಿ ಅವರು ಅವರನ್ನು ಮತ್ತು ಚಲನಚಿತ್ರ ನಿರ್ಮಾಪಕರನ್ನು ಶ್ಲಾಘಿಸಿದ್ದಾರೆ. ಕೆಲವು ಬಳಕೆದಾರರು ಅವರ ಯಶಸ್ಸಿಗಾಗಿ ಪ್ರಾರ್ಥಿಸಿದರು.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ 2024 : 2ನೇ ಹಂತದ 88 ಕ್ಷೇತ್ರಗಳಲ್ಲಿ 63% ಮತದಾನ

4.3 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement