133 ಪ್ರಯಾಣಿಕರಿದ್ದ ಚೀನಾ ವಿಮಾನ ಪತನ

ಚೀನಾ ಈಸ್ಟರ್ನ್​ ಏರ್​ಲೈನ್ಸ್​ಗೆ ಸೇರಿದ ಬೋಯಿಂಗ್​ 737-800 ವಿಮಾನ ಇಂದು, ಸೋಮವಾರ ದಕ್ಷಿಣ ಚೀನಾದ ವುಝೌ ಬಳಿ ಪರ್ವತಪ್ರದೇಶದಲ್ಲಿ ಅಪಘಾತಕ್ಕೀಡಾಗಿದೆ. ಕುನ್ಮಿಂಗ್ ಎಂಬ ನಗರದಿಂದ ಗುವಾಂಗ್ಝೌಕ್ಕೆ ಸಂಚಾರ ಮಾಡುತ್ತಿದ್ದ ಈ ವಿಮಾನದಲ್ಲಿ 133 ಪ್ರಯಾಣಿಕರಿದ್ದರು ಎಂದು ಹೇಳಲಾಗಿದೆ.

ಅಪಘಾತಕ್ಕೀಡಾಗಿದ್ದು, ಗುಡ್ಡ ಪ್ರದೇಶದಿಂದ ಭರ್ಜರಿ ಹೊಗೆ ಏಳುತ್ತಿರುವ ವೀಡಿಯೋ ವೈರಲ್ ಆಗಿದೆ. ಇದು ಸುಮಾರು ಆರು ವರ್ಷ ಹಳೇ ವಿಮಾನವಾಗಿದ್ದು, ಅಪಘಾತದಲ್ಲಿ ಮೃತಪಟ್ಟ ಬಗ್ಗೆ ಮಾಹಿತಿ ಸಿಕ್ಕಿಲ್ಲ.
ಚೀನಾ ಈಸ್ಟರ್ನ್​ ಏರ್​ಲೈನ್ಸ್​ ಎಂಬುದು ಶಾಂಘೈ ಮೂಲದ ವಿಮಾನಯಾನ ಸಂಸ್ಥೆ. ದೇಶೀಯ ಮತ್ತು ಅಂತಾರಾಷ್ಟ್ರೀಯ ಸೇರಿ ಒಟ್ಟು 248 ಪ್ರದೇಶಗಳಿಗೆ ಈ ಸಂಸ್ಥೆಯ ವಿಮಾನಸೇವೆ ಇದೆ.

ವಿಮಾನ ಕುನ್ಮಿಂಗ್​​ನಿಂದ ಮಧ್ಯಾಹ್ನ 1:11ಕ್ಕೆ ಹೊರಟಿದೆ. ಸುಮಾರು 2:22ರ ಹೊತ್ತಿಗೆ ಫ್ಲೈಟ್​ ಟ್ರ್ಯಾಕ್​ ಅಂತ್ಯಗೊಂಡಿತು. ಆಗ ವಿಮಾನ ಸಮುದ್ರ ಮಟ್ಟದಿಂದ ಸುಮಾರು 3225 ಅಡಿ ಎತ್ತರದಲ್ಲಿತ್ತು ಎಂದು ಫ್ಲೈಟ್​ರಾಡಾರ್​ 24 ಎಂಬ ವೆಬ್​ಸೈಟ್​ ತಿಳಿಸಿದೆ. ಸರಿಯಾಗಿ ಹೋಗಿದ್ದರೆ 3.05ನಿಮಿಷದ ಹೊತ್ತಿಗೆ ಗುವಾಂಗ್ಝೌನಲ್ಲಿ ವಿಮಾನ ಇಳಿಯಬೇಕಿತ್ತು ಎಂದು ಮಾಹಿತಿ ನೀಡಿದೆ. ಹೆಚ್ಚಿನ ವಿವರಗಳು ತಿಳಿದುಬೇಕಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement