ಕೆರೆಯಲ್ಲಿ ಮೀನು ಹಿಡಿಯಲು ಹೋದ ಬಾಲಕರಿಬ್ಬರು ನೀರುಪಾಲು

posted in: ರಾಜ್ಯ | 0

ಯಾದಗಿರಿ: ಕೆರೆಯಲ್ಲಿ ಮೀನು ಹಿಡಿಯಲು ಹೋದ ವಿದ್ಯಾರ್ಥಿಗಳಿಬ್ಬರು ನೀರು ಪಾಲಾದ ಘಟನೆ ಯಾದಗಿರಿ ನಗರದಲ್ಲಿ ಮಂಗಳವಾರ ನಡೆದ ಬಗ್ಗೆ ವರದಿಯಾಗಿದೆ.
ಮೃತ ಬಾಲಕರನ್ನು ನಕುಲ್(12) ಮತ್ತು ನಿಹಾಲ್ ಸಿಂಗ್​(12) ಎಂದು ಗುರುತಿಸಲಾಗಿದೆ. ಯಾದಗಿರಿ ನಗರದ ಅಮರ್ ಲೇಔಟ್​ನಲ್ಲಿ ನಾಲ್ವರು ಬಾಲಕರು ಕಟ್ಟೆ ಬಳಿ ತೆರಳಿದ್ದರು. ಈ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಈ ವೇಳೆ ನಕುಲ್​ ಮತ್ತು ನಿಹಾಲ್​ ಮೀನು ಹಿಡಿಯಲು ಹೋದಾಗ ಕಾಲುಜಾರಿ ನೀರಲ್ಲಿ ಬಿದ್ದಿದ್ದಾರೆ. ಹೆಸರಿದ ಮತ್ತಿಬ್ಬರು ಮಕ್ಕಳು ತಕ್ಷಣವೇ ಮನೆಗೆ ಓಡಿಹೋಗಿ ವಿಷಯ ತಿಳಿಸಿ ಕುಟುಂಬಸ್ಥರನ್ನು ಕರೆತರುವಷ್ಟರಲ್ಲಿ ಇಬ್ಬರೂ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಮಾಹಿತಿ ಸಿಕ್ಕ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಮಕ್ಕಳ ಶವಗಳನ್ನು ಹೊರತೆಗೆದರು. ಮೃತದೇಹ ಸಿಗುತ್ತಿದ್ದಂತೆ ಪಾಲಕರ ಆಕ್ರಂದ ಮುಗಿಲು ಮುಟ್ಟಿತ್ತು. ಯಾದಗಿರಿ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

ಓದಿರಿ :-   ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಸಾಹಿತಿ ಡಿ.ಎಸ್. ನಾಗಭೂಷಣ ನಿಧನ
advertisement

ನಿಮ್ಮ ಕಾಮೆಂಟ್ ಬರೆಯಿರಿ