ದೈರ್ಯವಿದ್ರೆ ಸಮಯಕ್ಕೆ ಸರಿಯಾಗಿ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆ ನಡೆಸಿ, ಎಎಪಿ ಸೋತ್ರೆ ರಾಜಕೀಯ ನಿವೃತ್ತಿ ಎಂದು ಬಿಜೆಪಿಗೆ ಕೇಜ್ರಿವಾಲ್‌ ಸವಾಲು

ನವದೆಹಲಿ: ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ಚುನಾವಣೆಯನ್ನು ಮುಂದೂಡಿರುವ ಕುರಿತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬುಧವಾರ ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ತರಾಟೆಗೆ ತೆಗೆದುಕೊಂಡಿದ್ದಾರೆ ಮತ್ತು ನಾಗರಿಕ ಸಂಸ್ಥೆಗಳ ಚುನಾವಣೆ ಸರಿಯಾದ ಸಮಯದಲ್ಲಿ ನಡೆದು ಬಿಜೆಪಿ ಗೆದ್ದರೆ ಆಮ್ ಆದ್ಮಿ ಪಕ್ಷ (ಎಎಪಿ) ರಾಜಕೀಯವನ್ನು ತೊರೆಯಲಿದೆ ಎಂದು ಹೇಳಿದ್ದಾರೆ. .

ದೆಹಲಿಯಲ್ಲಿ ಮೂರು ಮುನ್ಸಿಪಲ್ ಕಾರ್ಪೊರೇಶನ್‌ಗಳ ಏಕೀಕರಣವನ್ನು ಪ್ರಸ್ತಾಪಿಸುವ “ದಿಲ್ಲಿ ಮುನ್ಸಿಪಲ್ ಕಾರ್ಪೊರೇಶನ್ (ತಿದ್ದುಪಡಿ) ಕಾಯಿದೆ, 2022” ಗೆ ಕೇಂದ್ರ ಸಚಿವ ಸಂಪುಟ ಮಂಗಳವಾರ ತನ್ನ ಒಪ್ಪಿಗೆ ನೀಡಿದೆ. “ಕೇಂದ್ರದ ಬಿಜೆಪಿ ಸರ್ಕಾರವು ಎಂಸಿಡಿ ಚುನಾವಣೆಯನ್ನು ಮುಂದೂಡುವಂತೆ ರಾಜ್ಯ ಚುನಾವಣಾ ಆಯೋಗದ ಮೇಲೆ ಒತ್ತಡ ಹೇರುತ್ತಿರುವ ರೀತಿ ಹುತಾತ್ಮರಿಗೆ ಮತ್ತು ಪ್ರಜಾಪ್ರಭುತ್ವಕ್ಕೆ ಅಪಮಾನವಾಗಿದೆ. ಚುನಾವಣೆಯನ್ನು ತಿಂಗಳುಗಟ್ಟಲೆ ಮುಂದೂಡಲು ತಿದ್ದುಪಡಿ ತರುತ್ತಿದ್ದಾರೆ. ಎಂಸಿಡಿ ಚುನಾವಣೆಯಲ್ಲಿ ಬಿಜೆಪಿ ನಿರ್ನಾಮವಾಗಲಿದೆ ಎಂದು ನಮಗೆಲ್ಲರಿಗೂ ತಿಳಿದಿದೆ ಎಂದು ಕೇಜ್ರಿವಾಲ್ ದೆಹಲಿ ವಿಧಾನಸಭೆಯ ಹೊರಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ ಹೇಳಿದರು.

ಬಿಜೆಪಿಯು ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷ ಎಂದು ಹೇಳಿಕೊಳ್ಳುತ್ತಿರುವಾಗಲೂ ಸಣ್ಣ ಪಕ್ಷ (ಎಎಪಿ)ಕ್ಕೆ ಹೆಸರುತ್ತಿದೆ ಹಾಗೂ ಚುನಾವಣೆಯನ್ನು ಮುಂದೂಡುತ್ತಿದೆಎಂದು ಅವರು ಹೇಳಿದರು.
ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ಚುನಾವಣೆಯನ್ನು ಸಮಯಕ್ಕೆ ಸರಿಯಾಗಿ ನಡೆಸುವಂತೆ ನಾನು ಬಿಜೆಪಿಗೆ ಸವಾಲು ಹಾಕುತ್ತೇನೆ. ಚುನಾವಣೆಗಳು ಸಕಾಲದಲ್ಲಿ ನಡೆದರೆ ಮತ್ತು ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ನಾವು (ಎಎಪಿ) ರಾಜಕೀಯವನ್ನು ತೊರೆಯುತ್ತೇವೆ ಎಂದು ಕೇಜ್ರಿವಾಲ್ ಸವಾಲು ಹಾಕಿದ್ದಾರೆ. “ದಿಲ್ಲಿಯ ಎಲ್ಲಾ ಮೂರು ನಿಗಮಗಳನ್ನು ವಿಲೀನಗೊಳಿಸುತ್ತಿರುವುದು ಎಂಸಿಡಿ ಚುನಾವಣೆಯನ್ನು ಮುಂದೂಡುವುದಕ್ಕಾಗಿ. ಇದರಿಂದ ಚುನಾವಣೆ ಮುಂದೂಡಬಹುದೇ ಎಂದು ಪ್ರಶ್ನಿಸಿದರು.
ನಾಳೆ ಬಿಜೆಪಿ ಪಕ್ಷವು ಗುಜರಾತ್ ಅನ್ನು ಕಳೆದುಕೊಳ್ಳಬಹುದು ಎಂದು ಭಾವಿಸಿದರೆ, ಅವರು ಚುನಾವಣೆಯನ್ನು ತಪ್ಪಿಸಲು ಗುಜರಾತ್ ಮತ್ತು ಮಹಾರಾಷ್ಟ್ರವನ್ನು ವಿಲೀನಗೊಳಿಸುತ್ತಾರೆಯೇ? ಇಂತಹ ನೆಪ ಹೇಳಿ ಲೋಕಸಭೆ ಚುನಾವಣೆ ಮುಂದೂಡಬಹುದೇ? ಎಂದು ಅವರು ಪ್ರಶ್ನಿಸಿದರು.
ಪ್ರಸ್ತುತ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ಮೂರು ನಾಗರಿಕ ಸಂಸ್ಥೆಗಳ ವಿಲೀನ ಮಸೂದೆ ಸಂಸತ್ತಿನ ಮುಂದೆ ಬರುವ ಸಾಧ್ಯತೆಯಿದೆ.

ಪ್ರಮುಖ ಸುದ್ದಿ :-   ಕಾಂಗ್ರೆಸ್ಸಿಗೆ ಮುಸ್ಲಿಂ ಮತಗಳು ಬೇಕು, ಆದರೆ ಟಿಕೆಟ್‌ ಕೊಡಲ್ಲ : ಕಾಂಗ್ರೆಸ್‌ ಬಗ್ಗೆ ನಸೀಂ ಖಾನ್ ತೀವ್ರ ಅಸಮಾಧಾನ, ಹುದ್ದೆಗೆ ರಾಜೀನಾಮೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement