ನವದೆಹಲಿ, ಮಾರ್ಚ್ 23: ಭಾರತದಲ್ಲಿ ಗಂಭೀರ ಸಾಂಕ್ರಾಮಿಕ ರೋಗಗಳಿಗೆ ಲಸಿಕೆಗಳನ್ನು ಅಭಿವೃದ್ಧಿಪಡಿಸಲು ಮತ್ತು ವಾಣಿಜ್ಯೀಕರಿಸಲು ಮೀಸಲಾಗಿರುವ ಜೈವಿಕ ತಂತ್ರಜ್ಞಾನ ಕಂಪನಿಯಾದ ನೊವಾವ್ಯಾಕ್ಸ್, 12 ರಿಂದ 18 ವರ್ಷ ವಯಸ್ಸಿನವರ ಮೇಲೆ ತನ್ನ ಕೋವಿಡ್-19 ಲಸಿಕೆಯ ಮೊದಲ ತುರ್ತು ಬಳಕೆಯ ಅಧಿಕಾರವನ್ನು ಪಡೆದುಕೊಂಡಿದೆ.
ನೊವಾವ್ಯಾಕ್ಸ್ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯ ಪ್ರಕಾರ, NVX-CoV2373 ಎಂದೂ ಕರೆಯಲ್ಪಡುವ ಲಸಿಕೆಯನ್ನು ಭಾರತದಲ್ಲಿ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (SII) ಕೊವೊವ್ಯಾಕ್ಸ್ ಎಂಬ ಬ್ರಾಂಡ್ ಹೆಸರಿನಡಿಯಲ್ಲಿ ತಯಾರಿಸಿ ಮಾರಾಟ ಮಾಡುತ್ತಿದೆ. ಇದು ಭಾರತದಲ್ಲಿ ಈ ವಯೋಮಾನದವರಿಗೆ ಬಳಸಲು ಅನುಮತಿ ಪಡೆದ ಮೊದಲ ಪ್ರೋಟೀನ್ ಆಧಾರಿತ ಲಸಿಕೆಯಾಗಿದೆ.
advertisement
9535127775 / 9901837775 / 6364528715 / 08362775155 / https://icsmpucollege.com/
12 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳಲ್ಲಿ SARS-CoV-2 ನಿಂದ ಉಂಟಾಗುವ ಕೋವಿಡ್-19 ತಡೆಗಟ್ಟಲು ತುರ್ತು ಪರಿಸ್ಥಿತಿಯಲ್ಲಿ ಕೊವೊವ್ಯಾಕ್ಸ್ ಲಸಿಕೆಯ ನಿರ್ಬಂಧಿತ ಬಳಕೆಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ಅನುಮತಿ ನೀಡಿದೆ.
ಭಾರತದಲ್ಲಿ 12 ರಿಂದ 18 ವಯೋಮಾನದವರಿಗೆ ನೀಡುವ ಪ್ರೋಟೀನ್ ಆಧಾರಿತ ಲಸಿಕೆಗಳಿಗೆ ನಮ್ಮ ಲಸಿಕೆಯು ಪರ್ಯಾಯವಾಗಿದೆ. ವೈದ್ಯಕೀಯ ಸಂಶೋಧನೆಯ ಸಂದರ್ಭದಲ್ಲಿ ಈ ಲಸಿಕೆಯು ಹೆಚ್ಚು ಪರಿಣಾಮಕಾರಿ ಹಾಗೂ ಸುರಕ್ಷಿತ ಎಂದು ಹೇಳುವುದಕ್ಕೆ ನಮಗೆ ಹೆಮ್ಮೆ ಆಗುತ್ತದೆ ಎಂದು ನೊವಾವ್ಯಾಕ್ಸ್ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ಟಾನ್ಲಿ ಸಿ ಎರ್ಕ್ ಹೇಳಿದರು.
ದೇಶದಲ್ಲಿ ಹದಿಹರೆಯದ 12 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಕೊವೊವ್ಯಾಕ್ಸ್ (Covovax) ಅನುಮೋದನೆಯು ಭಾರತ ನಮ್ಮ ಪ್ರತಿರಕ್ಷಣೆ ಪ್ರಯತ್ನಗಳನ್ನು ಬಲಪಡಿಸುವಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲನ್ನು ಗುರುತಿಸುತ್ತದೆ” ಎಂದು ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅದರ್ ಪೂನಾವಾಲಾ ಹೇಳಿದ್ದಾರೆ.
ಡಿಸಿಜಿಐ (DCGI) ಆರಂಭದಲ್ಲಿ ಡಿಸೆಂಬರ್‌ನಲ್ಲಿ 18 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಕರಿಗೆ Covovax ತುರ್ತು ಬಳಕೆಯ ಅನುಮೋದನೆಯನ್ನು ನೀಡಿತು. ಇದರ ಜೊತೆಗೆ ಇದು ವಿಶ್ವ ಆರೋಗ್ಯ ಸಂಸ್ಥೆಯಿಂದ ತುರ್ತು ಬಳಕೆಯ ಪಟ್ಟಿಯಲ್ಲಿ ಸೇರಿಕೊಂಡಿತು.
ಮಾರ್ಚ್ 16 ರಿಂದ ಭಾರತದಲ್ಲಿ 12 ರಿಂದ 15 ವರ್ಷ ವಯಸ್ಸಿನ ಮಕ್ಕಳಿಗೆ ಕೋವಿಡ್ ಲಸಿಕೆಯನ್ನು ಪ್ರಾರಂಭಿಸಲಾಗಿದೆ. ಹಿರಿಯ ನಾಗರಿಕರಿಗೆ ಬೂಸ್ಟರ್ ಡೋಸ್‌ಗಳನ್ನು ನೀಡುವ ಮೇಲಿನ ಷರತ್ತನ್ನು ತೆಗೆದುಹಾಕಲಾಗಿದೆ. 12-14 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಕೋವಿಡ್-19 ಲಸಿಕೆ ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ‘ಮುನ್ನೆಚ್ಚರಿಕೆ ಡೋಸ್’ ಮಾರ್ಚ್ 16ರಿಂದ ಪ್ರಾರಂಭವಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ