ಪಠ್ಯದಲ್ಲಿ ‌ಭಗವದ್ಗೀತೆ ಅಳವಡಿಕೆಗೆ ನಾವು ವಿರೋಧ ಮಾಡುವುದಿಲ್ಲ, ಭಗವದ್ಗೀತೆ ದೇಶದ ಅಸ್ಮಿತೆ: ಡಿಕೆಶಿ

ಕೊಪ್ಪಳ: ಪಠ್ಯ ಪುಸ್ತಕದಲ್ಲಿ ಭಗವದ್ಗೀತೆ ಅಳವಡಿಕೆ ವಿಚಾರವಾಗಿ ನಾವು ವಿರೋಧ ಮಾಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕೊಪ್ಪಳದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಭಗವದ್ಗೀತೆ ನಮ್ಮ ದೇಶದ ಅಸ್ಮಿತೆ. ನಮ್ಮ ದೇಶದ ಧರ್ಮ ಗ್ರಂಥವನ್ನ ಪಠ್ಯದಲ್ಲಿ ಅಳವಡಿಸುವುದರಲ್ಲಿ ತಪ್ಪೇನಿದೆ ಎಂದರು.

ಇಡೀ ದೇಶಕ್ಕೆ ರಾಮಾಯಣ, ಮಹಾಭಾರತ ಪರಿಚಯ ಮಾಡಿದ್ದೇ ಕಾಂಗ್ರೆಸ್ ಪಕ್ಷ. ದೂರದರ್ಶನದ ಮೂಲಕ ಭಗವದ್ಗೀತೆಯನ್ನ ಪ್ರಚಾರ ಮಾಡಿದ್ದು ಕಾಂಗ್ರೆಸ್‌ ಪಕ್ಷ. ಪಠ್ಯದಲ್ಲಿ ‌ಭಗವದ್ಗೀತೆ ಅಳವಡಿಕೆಯನ್ನ ಕಾಂಗ್ರೆಸ್ ಪಕ್ಷ ಸ್ವಾಗತಿಸುತ್ತದೆ.  ಕಾಂಗ್ರೆಸ್ ಪಕ್ಷ. ಭಗವದ್ಗೀತೆಗೆ ಕಾಂಗ್ರೆಸ್ ಮೊದಲೇ ಬೇಸ್ ಹಾಕಿಕೊಟ್ಟಿದೆ. ಈಗ ಬಿಜೆಪಿಯವರು ಈ ವಿಚಾರ ಎತ್ತುತ್ತಿದ್ದಾರೆ ಎಂದರು.ದೇಶದ ಎಲ್ಲಾ ಧರ್ಮವನ್ನು ಕಾಂಗ್ರೆಸ್ ಪಕ್ಷ ಗೌರವಿಸುತ್ತದೆ ಎಂದರು.

ಮುಸ್ಲಿಂ ಸಮುದಾಯಕ್ಕೆ ಜಾತ್ರೆಗಳಲ್ಲಿ ವ್ಯಾಪಾರಕ್ಕೆ ನಿಬಂಧ ಹೇರುವುದು ಸರಿಯಲ್ಲ. ಅದನ್ನು ಖಂಡಿಸುವೆ. ಮಾನವೀಯತೆ ದೃಷ್ಟಿಯಿಂದ ಅವಕಾಶ ಕೊಡಬೇಕು. ಕೆಲವೊಂದು ದೇವಸ್ಥಾನಗಳ ಸಮಿತಿಯು ಆವರಣದ ಒಳಗೆ ವ್ಯಾಪಾರ ವಹಿವಾಟಿಗೆ ಕೆಲವು ನಿರ್ಧಾರ ಮಾಡಿಕೊಂಡಿದ್ದಾರೆ. ಆದರೆ ರಸ್ತೆ, ಜಾತ್ರೆಗಳಲ್ಲಿ ವ್ಯಾಪಾರ ವಹಿವಾಟು ನಡೆಸಲುನಿರ್ಬಂಧ ಸರಿಯಲ್ಲ ಎಂದರು.
ಕಾಂಗ್ರೆಸ್ ಸದಸ್ಯತ್ವ ನೀಡಲು ಇನ್ನೂ 7 ದಿನ ಸಮಯವಿದೆ, ನಮ್ಮ ನಿರೀಕ್ಷೆಯಷ್ಟು ಡಿಜಿಟಲ್ ಸದಸ್ಯತ್ವ ಮಾಡಿಸುತ್ತೇವೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ರಾಜ್ಯದಲ್ಲಿ ತಾಪಮಾನ ಏರಿಕೆ : ಮಾರ್ಗಸೂಚಿ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement