ಬೀದರ್‌ ಬ್ರಿಮ್ಸ್‌ ಜಿಲ್ಲಾಸ್ಪತ್ರೆಯಲ್ಲೇ ಎರಡು ಗ್ಯಾಂಗ್‌ ನಡುವೆ ಮಾರಾಮಾರಿ; ಆಸ್ಪತ್ರೆಯಲ್ಲಿದ್ದ ಚೇರ್‌, ವೈದ್ಯಕೀಯ ಉಪಕರಣಗಳಿಂದಲೂ ಹಲ್ಲೆ..!

posted in: ರಾಜ್ಯ | 0

ಬೀದರ್‌: ಜಿಲ್ಲಾಸ್ಪತ್ರೆಯಲ್ಲೇ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಬ್ರಿಮ್ಸ್‌ನಲ್ಲಿ ಎರಡು ಗುಂಪುಗಳ ನಡುವೆ ನಡೆದ ಮಾರಾಮಾರಿಯಲ್ಲಿ ಆಸ್ಪತ್ರೆ ಬೆಡ್‌ ಮೇಲೆ ಮಲಗಿದ್ದವನ್ನೇ ಎಬ್ಬಿಸಿ ಹಲ್ಲೆ ನಡೆಸಲಾಗಿದೆ. ಎಮರ್ಜೆನ್ಸಿ ವಾರ್ಡ್‌ನಲ್ಲಿ ಟ್ರೀಟ್‌ಮೆಂಟ್‌ ಪಡೆಯುತ್ತಿದ್ದವನ ಮೇಲೆಯೂ ದಾಳಿ ನಡೆದಿದೆ ಎಂದು ಹೇಳಲಾಗಿದೆ.
ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಫಿರೋಜ್‌ ಖಾನ್‌ ಎಂಬವರ ಗುಂಪು ಹಾಗೂ ಮಹ್ಮದ್‌ ರೌಫ್‌, ಅಫಸರ್‌ ಖಾನ್‌ ಎನ್ನುವ ಇನ್ನೊಂದು ಗ್ಯಾಂಗ್‌ ನಡುವೆ ವಾರ್‌ ನಡೆದಿತ್ತು. ಹಣಕಾಸು ವಿಚಾರಕ್ಕೆ ನಡೆದ ಈ ಗಲಾಟೆ ಸಂಬಂಧ ಬೀದರ್‌ನ ಟೌನ್‌ ಠಾಣೆಯಲ್ಲಿ ಕೇಸ್‌ ದಾಖಲಾಗಿತ್ತು. ಎರಡೂ ಕಡೆಯವರು ಕೇಸ್‌ ಪರಸ್ಪರರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಈ ಕೇಸ್‌ ಸಂಬಂಧ ವಿಚಾರಣೆ ನಡೆಸಲು ಇಂದು ಗುರುವಾರ (ಮಾರ್ಚ್ 24) ಎರಡೂ ಗುಂಪುಗಳಿಗೂ ಪೊಲೀಸರು ಬರಲು ಹೇಳಿದ್ದರು.
ವಿಚಾರಣೆಗೆ ಕರೆದ ದಿನವೇ ಎರಡೂ ಗ್ಯಾಂಗ್‌ಗಳ ನಡುವೆ ಮಧ್ಯಾಹ್ನ ಬೀದರಿನ ಮನಿಯಾರ್‌ ತಾಲೀಮ್‌ ಬಡಾವಣೆಯಲ್ಲಿ ಬಡಿದಾಟವಾಗಿತ್ತು. ಆ ಬಡಿದಾಟದಲ್ಲಿ ಗಾಯಗೊಂಡಿದ್ದ ಮಹ್ಮದ್‌ ರೌಫ್‌ ಹಾಗೂ ಅಫಸರ್‌ ಖಾನ್‌ ಬ್ರಿಮ್ಸ್‌ನಲ್ಲಿ ದಾಖಲಾಗಿದ್ದರು, ಇದು ಗೊತ್ತಾಗಿ  ಮತ್ತೊಂದು ಗುಂಪು ಬ್ರಿಮ್ಸ್‌ಗೆ ಬಂದಿತ್ತು ಎಂದು ಹೇಳಲಾಗಿದೆ.
ಕಾರ್‌ನಿಂದ ಇಳಿದುಬಂದು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಹ್ಮದ್‌ ರೌಫ್‌ ಮೇಲೆ ಹಲ್ಲೆ ಮಾಡಿದ್ದಾರೆ. ಆಸ್ಪತ್ರೆಯಲ್ಲಿದ್ದ ಚೇರ್‌, ವೈದ್ಯಕೀಯ ಉಪಕರಣ ಸೇರಿದಂತೆ ಕೈಗೆ ಸಿಕ್ಕವಸ್ತುಗಳಿಂದ ಹಲ್ಲೆ ನಡೆಸಿದ್ದು, ಗಂಭೀರವಾಗಿ ಗಾಯಗೊಂಡ ರೌಫ್‌ನನ್ನ ಹೈದ್ರಾಬಾದ್‌ನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಬಡಿದಾಟದಲ್ಲಿ ಫಿರೋಜ್‌ ಖಾನ್‌ ಕಡೆಯವರಿಗೂ ಗಾಯಗಳಾಗಿದ್ದು, ಬ್ರಿಮ್ಸ್‌ನಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಗ್ಯಾಂಗ್‌ವಾರ್‌ನಿಂದ ಇಡೀ ಬ್ರಿಮ್ಸ್‌ ಆವರಣದಲ್ಲಿ ಆತಂಕದ ವಾತಾವರಣವಿದ್ದು ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಓದಿರಿ :-   ಬೆಳ್ತಂಗಡಿ: ಗೋಡಂಬಿಯಾಕಾರದ ಮೊಟ್ಟೆ ಇಡುತ್ತಿರುವ ಕೋಳಿ...!

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

advertisement

ನಿಮ್ಮ ಕಾಮೆಂಟ್ ಬರೆಯಿರಿ