ಬಿರ್ಭೂಮ್‌ನಲ್ಲಿ ಎಂಟು ಜನರ ಜೀವಂತ ಸುಟ್ಟ ಘಟನೆ ಪ್ರಸ್ತಾಪಿಸಿ ರಾಜ್ಯಸಭೆಯಲ್ಲಿ ಗಳಗಳನೆ ಅತ್ತ ರೂಪಾ ಗಂಗೂಲಿ…ವೀಕ್ಷಿಸಿ

ನವದೆಹಲಿ: ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯಲ್ಲಿ ಇಬ್ಬರು ಮಕ್ಕಳು ಮತ್ತು ಮೂವರು ಮಹಿಳೆಯರು ಸೇರಿದಂತೆ ಎಂಟು ಜನರನ್ನು ಜೀವಂತ ಸುಟ್ಟ ಘಟನೆ ಬಗ್ಗೆ ರಾಜ್ಯಸಭೆಯಲ್ಲಿ ಮಾತನಾಡುವಾಗ ಬಿಜೆಪಿ ಸಂಸದೆ ರೂಪಾ ಗಂಗೂಲಿ ಗಳಗಳನೆ ಅತ್ತಿದ್ದಾರೆ.
ಪಶ್ಚಿಮ ಬಂಗಾಳ ರಾಜ್ಯವು ಬದುಕಲು ಯೋಗ್ಯವಾಗಿ ಉಳಿದಿಲ್ಲ ಎಂದು ಹೇಳಿದ ರೂಪಾ ಗಂಗೂಲಿ, ರಾಷ್ಟ್ರಪತಿ ಆಡಳಿತ ಜಾರಿಗೆ ತರಬೇಕು ಎಂದು ಮನವಿ ಮಾಡಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ನಾವು ಒತ್ತಾಯಿಸುತ್ತೇವೆ. ಅಲ್ಲಿ ಸಾಮೂಹಿಕ ಹತ್ಯೆಗಳು ನಡೆಯುತ್ತಿವೆ. ಅಲ್ಲಿನ ಜನರು ಊರುಗಳನ್ನು ತೊರೆದು ಪರಾರಿಯಾಗುತ್ತಿದ್ದಾರೆ. ರಾಜ್ಯವು ಜೀವನಕ್ಕೆ ಯೋಗ್ಯವಾಗಿಲ್ಲ’ ಎಂದು ಅವರು ಶುಕ್ರವಾರ ರಾಜ್ಯಸಭೆಯ ಹೊರಗೆ ಸುದ್ದಿಗಾರರಿಗೆ ತಿಳಿಸಿದರು.
ಪಶ್ಚಿಮ ಬಂಗಾಳದಲ್ಲಿ ಜನರು ಮಾತನಾಡುವ ಹಾಗೆ ಇಲ್ಲ. ಸರ್ಕಾರವು ಕೊಲೆಗಡುಕರನ್ನು ರಕ್ಷಿಸುತ್ತಿದೆ. ಚುನಾವಣೆಯಲ್ಲಿ ಗೆಲುವು ಕಂಡ ಬಳಿಕ ಸರ್ಕಾರವೊಂದು ಜನರನ್ನು ಸಾಯಿಸುವಂತಹ ಬೇರೆ ಯಾವುದೇ ರಾಜ್ಯ ಇಲ್ಲ. ನಾವೆಲ್ಲರೂ ಮನುಷ್ಯರು. ನಾವು ಕಲ್ಲು ಹೃದಯದ ರಾಜಕಾರಣ ಮಾಡಲು ಸಾಧ್ಯವಿಲ್ಲ’ ಎಂದು ಅದಕ್ಕೂ ಮುನ್ನ ರಾಜ್ಯಸಭೆಯಲ್ಲಿ ಮಾತನಾಡುವ ವೇಳೆ ಹೇಳುತ್ತ ಅವರು ಗಳಗಳನೆ ಅತ್ತರು.

“ಝಾಲ್ದಾದಲ್ಲಿ ಕೌನ್ಸಿಲರ್ ಸಾಯುತ್ತಾre …26 ರಾಜಕೀಯ ಕೊಲೆಗಳು ಏಳು ದಿನಗಳಲ್ಲಿ ಸಂಭವಿಸಿವೆ … … ಬಿರ್ಭೂಮ್ ಜಿಲ್ಲೆಯಲ್ಲಿ ಮೊದಲು ಎಲ್ಲರ ಕೈ ಕಾಲುಗಳನ್ನು ಮುರಿದು ನಂತರ ಕೊಠಡಿಗೆ ಬೀಗ ಹಾಕಿ ಸುಟ್ಟು ಹಾಕಲಾಗಿದೆ ಎಂದು ಮರಣೋತ್ತರ ಪರೀಕ್ಷೆ ವರದಿಯಲ್ಲಿ ತಿಳಿದುಬಂದಿದೆ ಎಂದು ಅವರು ಹೇಳಿದರು, ‘… ಅಲ್ಲಿ ಜನರು ಒಬ್ಬೊಬ್ಬರಾಗಿ ಗ್ರಾಮದಿಂದ ಪಲಾಯನ ಮಾಡುತ್ತಿದ್ದಾರೆ. ಅಲ್ಲಿನ ಜನ ಬದುಕುವ ಸ್ಥಿತಿಯಲ್ಲಿಲ್ಲ. ಪಶ್ಚಿಮ ಬಂಗಾಳ ಭಾರತದ ಒಂದು ಭಾಗವಾಗಿದೆ. ನಾವು ಅಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಬಯಸುತ್ತೇವೆ. ನಮಗೆ ಬದುಕುವ ಹಕ್ಕಿದೆ. ಪಶ್ಚಿಮ ಬಂಗಾಳದಲ್ಲಿ ಜನಿಸಿದ್ದು ಅಪರಾಧವಲ್ಲ. ಇದು ಅಪರಾಧವಾಗಲಾರದು ಎಂದು ಹೇಳುತ್ತ ಅವರು ಅಳತೊಡಗಿದರು.

ಓದಿರಿ :-   ದೆಹಲಿ ವಿಮಾನ ನಿಲ್ದಾಣದಲ್ಲಿ ತ್ರಿವರ್ಣ ಧ್ವಜದ ಮೇಲೆ ನಿಂತು ನಮಾಜ್ ಮಾಡಿದ ವ್ಯಕ್ತಿಯ ಬಂಧನ, ಜಾಮೀನಿನ ಮೇಲೆ ಬಿಡುಗಡೆ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

advertisement

ನಿಮ್ಮ ಕಾಮೆಂಟ್ ಬರೆಯಿರಿ