ಬಿಸಲಕೊಪ್ಪ, ಎಕ್ಕಂಬಿ ಪ್ರದೇಶದಲ್ಲಿ ಕಾಡಾನೆ ಹಿಂಡುಗಳ ಸುತ್ತಾಟ

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ‌ ಬನವಾಸಿ ವಲಯ ಅರಣ್ಯ ವ್ಯಾಪ್ತಿಯ ಬಿಸಲಕೊಪ್ಪ ಗ್ರಾಮ ಪಂಚಾಯತದ ಬಿಸಲಕೊಪ್ಪ, ಎಕ್ಕಂಬಿ ಭಾಗಗಳಲ್ಲಿ ಆನೆಗಳ‌ ಹಿಂಡು ಪ್ರತ್ಯಕ್ಷವಾಗಿವೆ ಎಂದು ವರದಿಯಾಗಿದೆ.
ಬಿಸಲಕೊಪ್ಪ ಸುತ್ತಲಿನ ಅರಣ್ಯ ಪ್ರದೇಶ ಹಾಗೂ ಗ್ರಾಮೀಣ ಭಾಗದಲ್ಲಿ ನಾಲ್ಕು ಆನೆಗಳ ಹಿಂಡು ಸುತ್ತಾಟ ನಡೆಸಿವೆ ಎನ್ನಲಾಗಿದೆ.
ನಾಲ್ಕು ಆನೆಗಳಲ್ಲಿ‌ ಒಂದು‌ ಮರಿ, ಒಂದು ಗಂಡು ಹಾಗೂ ಎರಡು ಹೆಣ್ಣು ಆನೆಗಳಿವೆ ಎನ್ನಲಾಗಿದೆ.
ವಲಯಾರಣ್ಯಾಧಿಕಾರಿ ಉಷಾ ಕಬ್ಬೇರ ಹಾಗೂ ಸಿಬ್ಬಂದಿ ಈ ಬಗ್ಗೆ ಗಮನ ಹರಿಸಿದ್ದು, ಗ್ರಾಮಸ್ಥರು ಎಚ್ಚರಿಕೆಯಿಂದ ಇರಬೇಕೆಂದು ಉಪ ಅರಣ್ಯ‌ಸಂರಕ್ಷಣಾಧಿಕಾರಿ ಎಸ್ ಜಿ ಹೆಗಡೆ ಹಾಗೂ ಎಸಿಎಫ್‌ ಅಶೋಕ ಅಲಗೂರ ಅವರು ಮನವಿ ಮಾಡಿದ್ದಾರೆ. ಅಲ್ಲದೆ ಬಿಸಿಲಕೊಪ್ಪ ಸುತ್ತಮುತ್ತ ಪ್ರದೇಶಗಳಲ್ಲಿ ಮೈಕ್‌ ಮೂಲಕ ಗ್ರಾಮಸ್ಥರಿಗೆ ಈ ಬಗ್ಗೆ ಎಚ್ಚರಿಕೆ ನೀಡಲಾಗುತ್ತಿದೆ.

 

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement