ವಯಸ್ಸು ಲೆಕ್ಕಿಸದೆ ಇಂಗ್ಲಿಷ್‌ ಸ್ನಾತಕೋತ್ತರ ಪರೀಕ್ಷೆ ಬರೆದ ಇಬ್ಬರು ವೃದ್ಧರು..!

ವಿಜಯಪುರ : ಸರ್ಕಾರಿ ಸೇವೆಯ ನಿವೃತ್ತಿಯ ನಂತರವೂ 81 ಹಾಗೂ 66 ರ ಹರೆಯದ ಇಬ್ಬರು ಹಿರಿಯ ನಾಗರಿಕರು ಸ್ನಾತಕೋತ್ತರ ಪರೀಕ್ಷೆ ಬರೆಯುವ ಮೂಲಕ ಇತರರಿಗೆ ಪ್ರೇರಣೆಯಾಗಿದ್ದಾರೆ. ನಾಲ್ಕು ಸ್ನಾತಕೋತ್ತರ ಪದವಿ ಪಡೆದರೂ ಐದನೇ ಪದವಿಗೆ ಓರ್ವ ವೃದ್ಧರು ಪರೀಕ್ಷೆ ಬರೆದರೆ, ಇಂಗ್ಲೀಷ ಭಾಷೆಯಲ್ಲಿ ಜ್ಞಾನ ಸಂಪಾದನೆಗೆ ಮತ್ತೋರ್ವ ವೃದ್ಧರು ಸ್ನಾತಕೋತ್ತರ ಪದವಿ ಪರೀಕ್ಷೆ ಬರೆದಿದ್ದಾರೆ.
ನಗರದ ಬಿಎಲ್‍ಡಿಇ ಸಂಸ್ಥೆಯ ಜೆಎಸ್‍ಎಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ಟಿಇಇ ಪರೀಕ್ಷೆಯಲ್ಲಿ ಆರೋಗ್ಯ ಇಲಾಖೆಯ ನಿವೃತ್ತ ನೌಕರರಾಗಿರುವ 81 ವರ್ಷದ ನಿಂಗಯ್ಯ ಬಸಯ್ಯ ಒಡೆಯರ ಎಂ.ಎ. ಇಂಗ್ಲಿಷ್‌ (ಎಂ.ಇ.ಜಿ.) ಪರೀಕ್ಷೆ ಬರೆದಿದ್ದಾರೆ. ಇವರು ಇಗ್ನೋ ದಿಂದ 4 ಸ್ನಾತಕೋತ್ತರ ಪದವಿ ಪಡೆದಿದ್ದು, 5ನೇ ಸ್ನಾತಕೋತ್ತರ ಪದವಿಗಾಗಿ ಪರೀಕ್ಷೆ ಬರೆಯುತ್ತಿದ್ದಾರೆ.
ಇದೇರೀತಿ ಸಿಂದಗಿ ಆರ್.ಡಿ.ಪಾಟೀಲ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕ ಸೇವೆ ಸಲ್ಲಿಸಿದ್ದ 66 ವರ್ಷದ ಪರಸಪ್ಪ ಮಡಿವಾಳರ, ಇಂಗ್ಲಿಷ್‌ ಎಂಎಗೆ ಪರೀಕ್ಷೆ ಬರೆದಿದ್ದಾರೆ.
ಇಬ್ಬರಿಗೂ ಇಂಗ್ಲಿಷ್ ಭಾಷೆಯಲ್ಲಿ ಹೆಚ್ಚಿನ ಅಧ್ಯಯನ ಮಾಡಬೇಕೆಂಬ ಉತ್ಕಟ ಬಯಕೆ. ನಿವೃತ್ತಿ ಎಂಬುದು ವೃತ್ತಿಗೆ ಮಾತ್ರವೇ ಹೊರತು ಜ್ಞಾನಕ್ಕಲ್ಲ. ಚಟುವಟಿಕೆ, ಕ್ರಿಯಾಶೀಲತೆ, ಏಕಾಗ್ರತೆ ಮತ್ತು ಜೀವನದಲ್ಲಿ ಉತ್ಸಾಹದಿಂದಿರಲು ಶೈಕ್ಷಣಿಕ ಜ್ಞಾನ ಅಗತ್ಯ ಎಂದು ಇವರು ಹೇಳುತ್ತಾರೆ.

ಪ್ರಮುಖ ಸುದ್ದಿ :-   ಭಟ್ಕಳ : ಮೀನುಗಾರಿಕಾ ಬೋಟ್ ಮುಳುಗಡೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement